ಯಶ್ 'ರಾಮಾಯಣ'ವನ್ನು ಹಾಲಿವುಡ್‌ನ ಈ ಸಿನಿಮಾಗೆ ಹೋಲಿಸುತ್ತಿರುವ ಪ್ರೇಕ್ಷಕರು: ಹೈಲೈಟ್ ಇದೇನಾ?

Published : Oct 29, 2026, 03:32 PM IST
Yash Ramayana

ಸಾರಾಂಶ

ರಾಮಾಯಣ ಚಿತ್ರದ 3ಡಿ ಪ್ರದರ್ಶನದ ಬಳಿಕ ಯಶ್ ರಾವಣನ ನಟನೆ, ರಣಬೀರ್ ಕಪೂರ್ ಅಭಿನಯ ಮತ್ತು VFXಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕಥನ ಶೈಲಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು, 2028ರ ಭಾಗದ ಬಗ್ಗೆಯೂ ಕುತೂಹಲ ಹೆಚ್ಚಿದೆ.

‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದ 3ಡಿ ಪ್ರೀಮಿಯರ್ ಪ್ರದರ್ಶನದಲ್ಲಿ ಪಾಲ್ಗೊಂಡ ವಿಮರ್ಶಕರು ಹಾಗೂ ಅತಿಥಿಗಳು ಚಿತ್ರದ ಭವ್ಯತೆಗೆ ಮನಸೋತಿದ್ದಾರೆ. ಹಾಲಿವುಡ್‌ನ ಖ್ಯಾತ ‘ದಿ ಲಾರ್ಡ್ ಆಫ್ ದಿ ರಿಂಗ್ಸ್’ ಚಿತ್ರಕ್ಕಿಂತಲೂ ಮಿಗಿಲಾದ ದೃಶ್ಯವೈಭವ ಇಲ್ಲಿದೆ ಎಂದು ಪ್ರೇಕ್ಷಕರು ಬಣ್ಣಿಸಿದ್ದಾರೆ.

ಪ್ರಮುಖ ಸಿನಿ ವಿಮರ್ಶಕ ರಾಮಾ ಎಂಬುವವರು ಎಕ್ಸ್‌ನಲ್ಲಿ , ‘ರಾಮಾಯಣ ಒಂದು ಅದ್ಭುತ ದೃಶ್ಯ ವೈಭವ. ಚಿತ್ರದ ವಿಎಫ್‌ಎಕ್ಸ್, ನೃತ್ಯ, ಸಂಗೀತ ಮತ್ತು ಆ್ಯಕ್ಷನ್ ದೃಶ್ಯಗಳು ದೈತ್ಯ ಸ್ವರೂಪದಲ್ಲಿವೆ. ರಣಬೀರ್ ಕಪೂರ್ ನಟನೆ ಅತ್ಯಂತ ದೈವಿಕವಾಗಿದ್ದರೆ, ರಾವಣನ ಪಾತ್ರದಲ್ಲಿ ಯಶ್ ಅಯಸ್ಕಾಂತೀಯವಾಗಿ ಸೆಳೆಯುತ್ತಾರೆ’ ಎಂದು ಶ್ಲಾಘಿಸಿದ್ದಾರೆ.

ಯಶ್ ಅಭಿನಯವೇ ಚಿತ್ರದ ಅತಿದೊಡ್ಡ ಹೈಲೈಟ್

ರಾವಣನಾಗಿ ನಟಿಸಿರುವ ಯಶ್ ಅವರ ಅಬ್ಬರದ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಖಳನಾಯಕನ ಗಾಂಭೀರ್ಯ ಪ್ರೇಕ್ಷಕರನ್ನು ದಿಗ್ಮೂಢಗೊಳಿಸಿದೆ. ಹಲವು ಮಂದೆ, ಇಡೀ ಸಿನಿಮಾದಲ್ಲಿ ಯಶ್ ಅವರ ಪಾತ್ರ ಮತ್ತು ಅವರ ನಟನಾ ಶೈಲಿಯೇ ಚಿತ್ರದ ಅತಿದೊಡ್ಡ ಪ್ಲಸ್ ಪಾಯಿಂಟ್ ಹಾಗೂ ಹೈಲೈಟ್ ಆಗಿ ಮೂಡಿಬಂದಿದೆ ಎಂದಿದ್ದಾರೆ. ‘ಸಿನಿಮಾದ ಪೋಸ್ಟ್ ಕ್ರೆಡಿಟ್ ಸೀನ್‌ನಲ್ಲಿ ವಿಶಿಷ್ಟ ಪಾತ್ರದ ಝಲಕ್ ತೋರಿಸಲಾಗಿದೆ. 2028ರಲ್ಲಿ ಬಿಡುಗಡೆಯಾಗಲಿರುವ ಎರಡನೇ ಭಾಗವನ್ನು ಕಣ್ತುಂಬಿಕೊಳ್ಳಲು ಅತೀವ ನಿರೀಕ್ಷೆ ಹುಟ್ಟುಹಾಕಿದೆ’ ಎಂದು ಸಿನಿಪ್ರಿಯರು ಕೌತುಕ ವ್ಯಕ್ತಪಡಿಸಿದ್ದಾರೆ.

ಕಥನ ಶೈಲಿಗೆ ಮಿಶ್ರ ಪ್ರತಿಕ್ರಿಯೆ

ಒಂದೆಡೆ ಚಿತ್ರದ ಮೇಕಿಂಗ್ ಮತ್ತು ನಟನೆಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದ್ದರೂ, ಕಥನ ಶೈಲಿಯ ವಿಚಾರದಲ್ಲಿ ಕೆಲವರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರತಂಡ ರಾಮಾಯಣದ ಮೂಲ ಕಥೆಗೆ ನಿಷ್ಠವಾಗಿದ್ದರೂ, ಭಾವನೆ ಮತ್ತು ನಾಟಕೀಯತೆಗಿಂತ ಹೆಚ್ಚಾಗಿ ಆ್ಯಕ್ಷನ್ ಹಾಗೂ ದೃಶ್ಯವೈಭವಕ್ಕೇ ಆದ್ಯತೆ ನೀಡಿದೆ ಎಂದು ವಿಮರ್ಶಕರೊಬ್ಬರು ಉಲ್ಲೇಖಿಸಿದ್ದಾರೆ.

4,000 ಕೋಟಿ ರೂ. ಬಜೆಟ್‌

ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಸಿನಿಮಾದ ಒಟ್ಟು ಬಜೆಟ್ ಬರೋಬ್ಬರಿ 4000 ಕೋಟಿ ರೂಪಾಯಿಗಳಿಗೂ ಅಧಿಕವಾಗಿದ್ದು, ಈ ಚಿತ್ರದ ಮೊದಲ ಭಾಗ ಭಾರತದಲ್ಲಿ ನವೆಂಬರ್ 5ರಂದು ಬಿಡುಗಡೆಯಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೆಲೆಬ್ರಿಟಿಗಳು ಹೇಗಿರಬೇಕು ಎಂಬುದಕ್ಕೆ ಅತ್ಯುತ್ತಮ ಮಾದರಿ ಅಪ್ಪು: ಇಲ್ಲಿದೆ ಅಪರೂಪದ ಮಾಹಿತಿ!
Nitesh: ಯಾರು ಈ ಡೈರೆಕ್ಟರ್ ನಿತೇಶ್ ತಿವಾರಿ? 2000 ಕೋಟಿ ಬ್ಲಾಕ್‌ಬಸ್ಟರ್ ಕೊಟ್ಟ ನಿರ್ದೇಶಕನ 7ನೇ ಸಿನಿಮಾ ರಾಮಾಯಣ!