
ಸಂಕ್ರಾಂತಿ ಹಬ್ಬ, ದೀಪಾವಳಿ ಸಡಗರದಂತೆಯೇ ನಮ್ಮ ನಡುವೆ ಪ್ರತಿಯೊಂದಕ್ಕೂ ಆಚರಣೆ ಬಂದಿದೆ. ಹಾಗೆ ಎರಡು ಮನಸ್ಸುಗಳು ಜತೆಯಾಗುವುದಕ್ಕೆ ಪ್ರೇಮಿಗಳ ದಿನ ಅಂತ ಹೆಸರಿಟ್ಟು ಆಚರಣೆ ಮಾಡುತ್ತಿದ್ದಾರೆ. ಇಂದಿನ ಯುವ ಮನಸ್ಸುಗಳ ಪಾಲಿಗೆ ಪ್ರೇಮಿಗಳ ದಿನವೂ ಒಂದು ಹಬ್ಬದಂತೆಯೇ. ಅದನ್ನು ಸರಿ- ತಪ್ಪು ಎಂದು ವಾದ ಮಾಡಲಾಗದು. ಆದರೆ, ಹೀಗೆ ಆಚರಣೆ ಮಾಡುವವರಿಗೆ ಒಂದು ಮಾತು, ನಿಮ್ಮ ಪ್ರೀತಿ ಹೀಗೆ ಆಚರಣೆ ಅಥವಾ ಒಂದು ದಿನದ ಮಟ್ಟಿಗೆ ತೋರಿಕೆಗೆ ಮಾತ್ರ ಸೀಮಿತವಾಗದಿರಲಿ. ನಿಮ್ಮ ಪ್ರೀತಿ ಜಗತ್ತಿನ ಎದುರು ತೋರಿಸುವ ಮುನ್ನ ನಿಮ್ಮನ್ನು ನಂಬಿ ಬರುವ ನಿಮ್ಮ ಸಂಗಾತಿ ಮೇಲೆ ತೋರಿಸಿ. ಜೀವನದ ಕೊನೆಯ ತನಕ ನಿಮ್ಮಗಳ ನಡುವೆ ಪ್ರೀತಿ ಉಸಿರಾಡುತ್ತಿರಲಿ. ಆ ಮೂಲಕ ಪ್ರತಿ ನಿತ್ಯ ಪ್ರೇಮಿಗಳ ದಿನವನ್ನು ಆಚರಿಸಿ. ಪ್ರೀತಿ ಅನ್ನೋದು ಜೀವನದ ಬಹು ದೊಡ್ಡ ಕನಸು. ಅದು ಎಂದಿಗೂ ಕಮರದಿರಲಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.