
ಬೆಂಗಳೂರು(ಜೂ.04): ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸ್ಯಾಂಡಲ್'ವುಡ್ ನಟಿ ಮೇಘನಾ ರಾಜ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಮುಸ್ಸಂಜೆ ಮಹೇಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಜಿಂದಾ' ಚಲನಚಿತ್ರದಲ್ಲಿ ನಟಿ ಮೇಘನಾ ರಾಜ್ ಅವರು 'ಗಂಡು ಅನ್ನುವ ಒಬ್ಬ ಕಚಡಾ ನನ್ ಮಗಾ ಪ್ರೀತಿ ಮಾಡುವಾಗ ಸತ್ಯ ಹೇಳುವುದಿಲ್ಲವಲ್ಲ' ಏಕೆ ಸಾರ್' ಫ್ರೀಯಾಗಿ ಎಲ್ಲ ಮುಗಿಸಬುದು ಅಂತಾನಾ' ಎಂದು ನಟ ದೇವರಾಜ್ ಮುಂದೆ ಆಡುವ ಸಂಭಾಷಣೆ. ಈ ದೃಶ್ಯ ಚಿತ್ರದ ಟ್ರೈಲರ್'ನಲ್ಲಿದೆ. ಇದು ಕನ್ನಡಪರ ಸಂಘಟನೆಗಳನ್ನು ಕೆರಳಿಸಿದೆ.
ಈ ಬಗ್ಗೆ ಸುವರ್ಣ ನ್ಯೂಸ್'ಗೆ ಪ್ರತಿಕ್ರಿಯೆ ನೀಡಿರುವ ನಟಿ ಮೇಘನಾ ರಾಜ್' ಗಂಡಸರ ಬಗ್ಗೆ ನಾನು ಅವಹೇಳನಕಾರಿಯಾಗಿ ಮಾತನಾಡಿಲ್ಲ. ಚಿತ್ರದಲ್ಲಿರುವ ಸನ್ನಿವೇಷಕ್ಕೆ ಆ ಮಾತಿದೆ ವಿನಃ, ಮತ್ತೇನಿಲ್ಲ. ಚಿತ್ರ ಪೂರ್ತಿ ನೋಡಿದ ನಂತರ ಈ ಬಗ್ಗೆ ಮಾತನಾಡಿ' ಎಂದು ಪ್ರತಿಭಟನಾಕಾರರಿಗೆ ತಿಳಿಸಿದ್ದಾರೆ. ಸ್ಪಷ್ಟನೆ ಅಸ್ಪಷ್ಟವಾಗಿದೆ ಸಂಭಾಷಣೆ ತೆಗೆಯದಿದ್ದರೆ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ತಮ್ಮ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಚಿತ್ರ ತಂಡ ಕೂಡ ತಾವು ಕಾನೂನಾತ್ಮಕವಾಗಿ ಹೋರಾಟ ಮುಂದುವರಿಸಲಿದ್ದು, ತಮ್ಮ ನಿಲುವಾಗಿ ಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.
ನಿರ್ದೇಶಕ ಮುಸ್ಸಂಜೆ ಮಹೇಶ್ ಕೂಡ ಈ ಬಗ್ಗೆ ಸ್ಪಷ್ಟನೆ ನಿಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಯನ್ನು ನಿಲ್ಲಿಸಿದ್ದು,ಪರಿಸ್ಥಿತಿ ಶಾಂತವಾಗಿದೆ. 'ಜಿಂದಾ' ಚಿತ್ರವು ಇದೇ ತಿಂಗಳು 8ರಂದು ರಾಜ್ಯದಾದ್ಯಂ ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.