
ನವದೆಹಲಿ (ಜ.10): ಬಾಲಿವುಡ್'ನ ಬೋಲ್ಡ್ ಹುಡುಗಿಯರಲ್ಲಿ ಕಂಗನಾ ರಾಣಾವತ್ ಮೊದಲ ಸಾಲಿನಲ್ಲಿ ನಿಲ್ಲುವಂತವಳು. ಹಿಂದೆ ಬಾಲಿವುಡ್‌ನ್ ದಿಗ್ಗಜರಾದ ಖಾನ್‌ಗಳ ಸಹವಾಸವೇ ಬೇಡ. ಅವರಿಲ್ಲದೇ ಮಹಿಳಾ ಪ್ರಧಾನ ಚಿತ್ರಗಳಲ್ಲಿಯೇ ನಟಿಸಿ ಗೆಲ್ಲುತ್ತೇನೆ ಎಂದು ಹೇಳಿಕೊಳ್ಳುವ ಸಾಹಸ ಮಾಡಿದ್ದವಳು. ಕಂಗನಾ ಹಾಗೆ ಹೇಳಿದ್ದಾಗ ಇಡೀ ಬಾಲಿವುಡ್ ಬೆಚ್ಚಿತ್ತು. ಹಿಂದೊಮ್ಮೆ ಸಲ್ಮಾನ್ ಖಾನ್ ಜೊತೆ ನಟಿಸುವ ಅವಕಾಶ ಬಂದಾಗಲೂ ಅದನ್ನು ನಿರಾಕರಿಸಿದ್ದು ಇನ್ನಷ್ಟು ಸುದ್ದಿಯಾಗಿತ್ತು. ಇಂತಿಪ್ಪ ಕಂಗನಾ ರಾಣಾವತ್ ಸತತ ಸೋಲುಗಳಿಂದ ಕಂಗೆಟ್ಟವಳಂತೆ ಕಾಣುತ್ತಿದ್ದಾಳೆ.
ಅಮೀರ್ ಖಾನ್ ಸಲಹೆ ಪಡೆದುಕೊಂಡು ತನ್ನ ಸ್ಟಾರ್‌ಗಿರಿ ಉಳಿಸಿಕೊಳ್ಳುವುದಕ್ಕಾಗಿ ಸಲ್ಮಾನ್ ಖಾನ್, ಶಾರೂಕ್ ಖಾನ್ ಜೊತೆಗೆ ನಟಿಸುವ ಇಚ್ಛೆ ವ್ಯಕ್ತಪಡಿಸಿದ್ದಾಳೆ. ಇದನ್ನು ಸ್ವತಃ ಕಂಗನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಳೆ ಕೂಡ. ನಾನು ಒಳ್ಳೆಯ ಪಾತ್ರ ಸಿಕ್ಕಿದರೆ ಸಲ್ಮಾನ್ ಖಾನ್ ಮತ್ತು ಶಾರೂಕ್ ಖಾನ್ ಜೊತೆಗೆ ನಟಿಸುತ್ತೇನೆ. ಒಬ್ಬ ನಟಿಯಾಗಿ ಒಳ್ಳೆಯ ಚಿತ್ರ ಮಾಡಬೇಕು. ನಾನು ಮೊದಲಿಗೆ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸುತ್ತೇನೆ. ಯಾವ ಸ್ಟಾರ್ ನಟರ ಜೊತೆಗಾದರೂ ಅಂತಹ ಪಾತ್ರ ಸಿಕ್ಕಿದರೆ ಮಾಡಲು ಹಿಂದೇಟು ಹಾಕುವುದಿಲ್ಲ ಎಂದೂ ಕೂಡ ಹೇಳಿಕೊಂಡಿದ್ದಾಳೆ. ಹಿಂದೆ ಹೃತಿಕ್ ರೋಶನ್ ಜೊತೆಗೆ ಸೇರಿ ಚಿತ್ರ ಮಾಡುತ್ತಿದ್ದ ಸಂದರ್ಭದಲ್ಲಿ ಖಾನ್‌ಗಳ ಜೊತೆಗೆ ನಟಿಸಲು ಬಂದಿದ್ದ ಆಫರ್‌ಗಳನ್ನು ತಿರಸ್ಕರಿಸಿದ್ದವಳು ಇಂದೇಕೆ ತಾನೇ ಮುಂದಾಗಿ ಹೋಗುತ್ತಿದ್ದಾಳೆ ಎನ್ನುವುದಕ್ಕೆ ಹಲವಾರು ಊಹಾಪೋಹಗಳು ಎದ್ದಿವೆ. ಈಗ ಹೃತಿಕ್ ಜೊತೆಗೆ ಸಂಬಂಧ ಗಟ್ಟಿಯಾಗಿಲ್ಲದ ಕಾರಣ ಭದ್ರವಾದ ನೆಲೆ ಕಂಡುಕೊಳ್ಳಲು ಹೀಗೆ ಮಾಡುತ್ತಿದ್ದಾಳೆ ಎಂದು ಗುಲ್ಲೆದ್ದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.