
ಒಂದೊಂದು ದಿನ ಒಂದೊಂದು ವೇಷ. ಹೆಚ್ಚಿನವರ ಬಾಯಲ್ಲಿ ಹೊಗಳಿಕೆ, ಮನಸಾರೆ ಚಪ್ಪಾಳೆ. ಇದೆಲ್ಲಕ್ಕೂ ಕಾರಣ ವಿನ್ಯಾಸಗಾರ ಸಭ್ಯಸಾಚಿಯಿಂದ ವಿನ್ಯಾಸಗೊಂಡು ಬೊಂಬೆಯಂತೆ ಕಂಗೊಳಿಸುತ್ತಿರುವ ಕಂಗನಾ ಸ್ಟೈಲು. ಈ ನಯನ ಮನೋಹರ ದೃಶ್ಯಗಳು ಕಾಣಸಿಗುತ್ತಿರುವುದು ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಕೇನ್ಸ್ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟ್‌ನಲ್ಲಿ.
ಕಪ್ಪು ಬಣ್ಣ ಅದಕ್ಕೊಪ್ಪುವ ಎಂಬ್ರಾಯಿಡ್, ವಿಶೇಷ ತಂತ್ರಜ್ಞಾನದಿಂದ ಮೆಟಾಲಿಕ್, ಫ್ಯಾಬ್ರಿಕ್ ಗಳನ್ನು ಬಳಸಿದ ಸಾಂಪ್ರದಾಯಿಕ ಸೀರೆಯಲ್ಲಿ ಒಂದು ದಿನ, ತೆಳು ಕಂದು ಬಣ್ಣದ ಅಷ್ಟೇ ತೆಳುವಾಗಿ ಮೈ ಮಾಟ ಕಾಣುವಂತಹ ಗೌನ್, ಮತ್ತೊಂದು ದಿನ ಪೂರ ಲೆದರ್‌ನಿಂದ ಕೂಡಿದ ತಿಳಿ ಕೇಸರಿ ಉಡುಪು. ಹೀಗೆ ಮೂರು ದಿನಗಳು ಭಿನ್ನ ಧಿರಿಸಿನಿಂದ ಕಾಣಿಸಿಕೊಂಡ ಕಂಗನಾಗೆ ಹೆಚ್ಚು ಮಂದಿ ಫಿದಾ ಆಗಿದ್ದಾರೆ. ಸೋಷಲ್ ಮೀಡಿಯಾಗಳಲ್ಲಿ ಫೋಟೋ ನೋಡಿ ಸಾಕಷ್ಟು
ಅಭಿಮಾನಿಗಳು ಲೈಕ್ ಹೊತ್ತಿದ್ದಾರೆ.
ಇದಿಷ್ಟೇ ಅಲ್ಲ ಫೆಸ್ಟ್‌ನಲ್ಲಿ ಫೈರ್ ಬ್ರಾಂಡ್ ರೀತಿ ಭಾಷಣ ಮಾಡಿ ‘ಮಾಡ್ರನಿಸಂನಿಂದ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ ಗಂಡು ಹೆಣ್ಣೆಂಬ ತಾರತಮ್ಯ ಕಡಿಮೆಯಾಗುತ್ತಿಲ್ಲ. ಚಿತ್ರವೊಂದರಲ್ಲಿ ಒಬ್ಬ ನಟ ಹಾಕಿದಷ್ಟೇ ಪರಿಶ್ರಮವನ್ನು ನಟಿಯೂ ಹಾಕಿರುತ್ತಾಳೆ. ಆದರೆ ಹೆಚ್ಚು ಹೆಸರು ಬರುವುದು ನಟನಿಗೆ ಮಾತ್ರ. ಇದೂ ಬದಲಾಗಬೇಕು’ ಎಂದು ಸಮಾನತೆಯ ಗಂಟೆ ಮೊಳಗಿಸಿ ಕಂಗನಾ ಇಸ್ ವೆರಿ ಬೋಲ್ಡ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.