Kacha Badam : ಯುರೋಪ್ ಗೂ ತಲುಪಿದ ಕಚ್ಚಾ ಬದಾಮ್, ನಿಮಗೆ ಗೊತ್ತಿದೆಯೇ ಈ ಹಾಡಿನ ಅರ್ಥ?

By Suvarna News  |  First Published Feb 6, 2022, 11:19 PM IST

ದೇಸಿ ಸ್ಟೆಪ್ ಗಳ ಮೂಲಕ ಫೇಮಸ್ ಆಗಿರುವ ಜಿಕಾ
ಭಾರತದಲ್ಲಿ ವೈರಲ್ ಆಗಿರುವ ಕಚ್ಚಾ ಬದಾಮ್ ಹಾಡಿಗೆ ಡಾನ್ಸ್
ಈ ಹಿಂದೆ ನಾಟು ನಾಟು ಹಾಡಿಗೆ ನೃತ್ಯ ಮಾಡಿದ್ದ ಜಿಕಾ


ಬೆಂಗಳೂರು (ಫೆ.6): ಸಾಮಾಜಿಕ ಜಾಲತಾಣದಲ್ಲಿ ಅದರಲ್ಲೂ ಇನ್ಸ್ ಟಾಗ್ರಾಮ್ ನಲ್ಲಿ (Instagram) ನಿಮ್ಮ ಅಕೌಂಟ್ ಇದ್ದಲ್ಲಿ ನೀವು ಒಮ್ಮೆಯಾದರೂ "ಕಚ್ಚಾ ಬದಾಮ್" (Kacha Badam) ಹಾಡು ಆಗೂ ಅದರ ಸಿಗ್ನೇಚರ್ ಸ್ಟೆಪ್ ಗಳನ್ನು ನೋಡಿರುತ್ತೀರಿ. ಈ ವರ್ಷದ ಆರಂಭದಲ್ಲಿ ವೈರಲ್ ಆದ ಜುಗ್ನು (Jugnu), ನಾಟು ನಾಟು (Naatu Naatu) ಹಾಡಿಗಿಂತ ಕಚ್ಚಾ ಬದಾಮ್ ಹಾಡಿನ ಕ್ರೇಜ್ ದೊಡ್ಡ ಮಟ್ಟದಲ್ಲಿದೆ. ಅದಕ್ಕೆ ಕಾರಣ ಇದನ್ನು ಹಾಡಿದ್ದು ಭುವನ್ ಬಡ್ಯಾಕರ್ ( Bhuban Badyakar) ಎನ್ನುವ ಕಡಲೆಕಾಯಿ ವ್ಯಾಪಾರಿ. ಈಗಾಗಲೇ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಈ ಹಾಡು ವೈರಲ್ ಆಗಿದ್ದು ಭುವನ್ ಬಡ್ಯಾಕರ್ ರಾತ್ರೋರಾತ್ರಿ ಫೇಮಸ್ ಆಗಿದ್ದಾರೆ. ಪ್ರಸ್ತುತ ಈ ಹಾಡು ಯುರೋಪ್ (Europe) ಕೂಡ ತಲುಪಿದ್ದು, ಇನ್ಸ್ ಟಾಗ್ರಾಮ್ ನ ರೀಲ್ಸ್ ವಿಭಾಗದಲ್ಲಿ ಪ್ರತಿದಿನವೂ ದೊಡ್ಡ ಮಟ್ಟದ ಸ್ಥಾನವನ್ನು ಸಂಪಾದನೆ ಮಾಡುತ್ತಿದೆ.

ಈಗ ಫ್ರಾನ್ಸ್ ದೇಶದ ವ್ಯಕ್ತಿಯೊಬ್ಬರು ಕಚ್ಚಾ ಬದಾಮ್ ಹಾಡಿಗೆ ತಮ್ಮ ದೇಸಿ ಸ್ಟೆಪ್ ಅನ್ನು ಹಾಕುವ ಮೂಲಕ ಗಮನಸೆಳೆದಿದ್ದಾರೆ. ಸಿಗ್ನೇಚರ್ ಸ್ಟೆಪ್ ಗಳನ್ನು ಅವರ ಮಾಡಿರುವ ರೀತಿ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿದೆ. ನಾಟು ನಾಟು ಎಂಬ ಹಿಟ್ ಹಾಡಿಗೆ ತನ್ನ ಕಣ್ಮನ ಸೆಳೆಯುವ ನೃತ್ಯದ ನಂತರ ರಾತ್ರೋರಾತ್ರಿ ಭಾರತೀಯ ಅಭಿಮಾನಿಗಳಿಗೆ ನೆಚ್ಚಿನವರಾದ ಜಿಕಾ (Jika) ಅವರು ಕಚ್ಚಾ ಬದಾಮ್ ಹಾಡಿಗೆ ನೃತ್ಯ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇಬ್ಬರು ಸ್ನೇಹಿತರ ಜೊತೆಗೆ, ಅತ್ಯಂತ ಪರಿಪೂರ್ಣವಾಗಿ ಅವರು ಹೆಜ್ಜೆ ಹಾಕಿದ್ದಾರೆ.

ವೀಡಿಯೊ 40,000 ಕ್ಕೂ ಹೆಚ್ಚು ಇಷ್ಟಗಳು ಮತ್ತು ಲೆಕ್ಕವಿಲ್ಲದಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಅದರಲ್ಲೂ ಈ ವಿಡಿಯೋವನ್ನು ನೋಡಿದ ಪ್ರತಿಯೊಬ್ಬರೂ ಕಾಮೆಂಟ್ ಸೆಕ್ಷನ್ ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಮಾತ್ರವಲ್ಲದೆ ಜಿಕಾ ಅವರರ ನೃತ್ಯವನ್ನು ಅದ್ಭುತ ಎಂದು ಕರೆದಿದ್ದಾರೆ. "ನಿಮ್ಮ ನೃತ್ಯ ಅದ್ಭುತ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
"ಈ ಟ್ರೆಂಡ್ ನಲ್ಲಿ ಈವರೆಗೂ ನಾನು ನೋಡಿದ ಅದ್ಭುತ ಡಾನ್ಸ್ ಇದಾಗಿದೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. "ಇದು ತುಂಬಾ ಉತ್ತಮವಾಗಿದೆ. ಈಗ ಈ ಟ್ರೆಂಡ್ ಗ್ಲೋಬಲ್ ಆಗಿದೆ ಎಂದೆನ್ನಬಹುದು" ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
 

 
 
 
 
 
 
 
 
 
 
 
 
 
 
 

A post shared by Jika (@jikamanu)

Tap to resize

Latest Videos


ಕಚ್ಚಾ ಬದಾಮ್ ಹಾಡು ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಅವರ ರಚನೆಯಾಗಿದೆ. ಈಗ ಅದೇ ಹೆಸರಿನ ಡ್ಯಾನ್ಸ್ ಚಾಲೆಂಜ್ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದೆ. ಟಿವಿ ತಾರೆಗಳಿಂದ ಕಂಟೆಂಟ್ ಮೇಕರ್ ಗಳವರೆಗೂ ವಿಶ್ವದಾದ್ಯಂತ ಹೆಚ್ಚಿನವರು ಈ ಜನಪ್ರಿಯ ರೀಲ್ ಟ್ರೆಂಡ್ ನಲ್ಲಿ ಜತೆಯಾಗುವ ಮೂಲಕ, ಕಚ್ಚಾ ಬದಾಮ್ ಅನ್ನು ಜಾಗತಿಕವಾಗಿ ಸೆನ್ಸೇಷನ್ ಮಾಡಿದ್ದಾರೆ.  ಬಡ್ಯಾಕರ್ ಅವರು ತಮ್ಮ ಹಾಡಿಗೆ ಸಿಕ್ಕ ಜನಪ್ರಿಯತೆಯಿಂದ ದಿಗ್ಭಮೆಗೊಂಡಿದ್ದಾರೆ. ಈ ವೈರಲ್ ಹಾಡಿಗೆ ಹಣ ಪಡೆಯುವುದು ಹೇಗೆ ಎನ್ನುವ ನಿಟ್ಟಿನಲ್ಲಿ ಸಹಾಯ ಮಾಡಿ ಎಂದು ಪೊಲೀಸರಲ್ಲಿ ಕೇಳಿದ್ದಾರೆ. ಇದರ ನಡುವೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಅವಕಾಶವೂ ಇವರಿಗೆ ಬಂದಿದೆ.

ಗಾಯಕಿ Ranu Mondal ಹಾಡಿದ ಕಚ್ಚಾ ಚಾದಾಮ್ ಹಾಡು ವೈರಲ್!
ಕಚ್ಚಾ ಬದಾಮ್ ಹಾಡಿನ ಅರ್ಥ: ದೊಡ್ಡ ಮಟ್ಟದಲ್ಲಿ ವೈರಲ್ ಆಗಿರುವ ಕಚ್ಚಾ ಬದಾಮ್ ಹಾಡಿಗೆ ಅಷ್ಟೇ ಸೊಗಸಾದ ಅರ್ಥವೂ ಇದು. ಬಹುತೇಕರು ಈ ಹಾಡಿನ ಅರ್ಥ ಗೊತ್ತಿಲ್ಲದೆ ಇದಕ್ಕೆ ನೃತ್ಯ ಮಾಡಿದ್ದಾರೆ. "ಪೇರ್ ಚುರಾ, ಹಾಥರ್ ಬಾಲಾ, ಥಾಕೆ ಜೋಡಿ ಸಿಟಿ ಗೋಲ್ಡ್ ಎರ್ ಚೈನ್, ದಿಯೆ ಜಬೆನ್, ತಾಟೆ ಶೋಮನ್ ಶೋಮನ್ ಬದಾಮ್ ಪಬೆನ್"  (Paer chura, hather bala, thake jodi city gold er chain, diye jaben, tate shoman shoman badam paben) ಇದು ಕಚ್ಚಾ ಬದಾಮ್ ಹಾಡಿನ ಸಾಲು. ಇದರ ಅರ್ಥ ಏನೆಂದರೆ, "ನಿಮ್ಮ ಬಳಿ ಬಳೆಗಳು, ಕೃತಕ ಚೈನ್ ಗಳು ಇದ್ದರೆ, ನೀವು ಅವುಗಳನ್ನು ನನಗೆ ಕೊಡಬಹುದು, ನಾನು ನಿಮಗೆ ಅದರಷ್ಟೇ ಮೌಲ್ಯದ ಕಡೆಲೆಕಾಯಿಯನ್ನು ನೀಡುತ್ತೇನೆ' ಎನ್ನುವುದಾಗಿದೆ.

click me!