
ಜಗ್ಗೇಶ್ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದ ಸಿನಿಮಾ ‘ಮೇಕಪ್’. ಆದರೆ ಆ ಸಿನಿಮಾ ಸೋತಿತ್ತು. ಈಗ ಆ ಸಿನಿಮಾ ಯಾಕೆ ನೆನಪಾಗಿದ್ದು ಅಂತೀರಾ? ಅದಕ್ಕೆ ಕಾರಣವಿದೆ. ಮಿತ್ರಾ ತಮ್ಮ ‘ರಾಗ’ ಸಿನಿಮಾಗಾಗಿ ಹೋರಾಡುವುದನ್ನು ನೋಡಿದ ಜಗ್ಗೇಶ್ ಮಿತ್ರಾನಿಗೆ ಒಳ್ಳೆಯದಾಗಲಿ ಅನ್ನುತ್ತಲೇ ಮೇಕಪ್‌ನಿಂದ ತನಗಾದ ನೋವು ಅವನಿಗೆ ಆಗುವುದು ಬೇಡ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು. ಈ ಸಂದರ್ಭದಲ್ಲೇ ತಾನು 23 ಕೋಟಿ ಕಳೆದುಕೊಂಡ ಕತೆಯನ್ನೂ ಸ್ಮರಿಸಿದ್ದಾರೆ.
ಅದು 2004ನೇ ಇಸವಿ. ‘ಮೇಕಪ್’ ಸಿನಿಮಾ ಸೋತಿತ್ತು. ಆ ಕಾಲದಲ್ಲಿ 72 ಲಕ್ಷ ಹಣ ನಷ್ಟವಾಗಿತ್ತು. ಆ ನಷ್ಟ ಭರಿಸುವ ಸಲುವಾಗಿ ಸ್ನೇಹಕ್ಕಾಗಿ ತನ್ನ ಆಸ್ತಿಯನ್ನು ಬಿಟ್ಟುಕೊಟ್ಟರಂತೆ. ಅದರ ಬೆಲೆ ಈಗ 23 ಕೋಟಿ ರೂಪಾಯಿ. ಅದರ ಬಾಡಿಗೆಯೇ 16 ಲಕ್ಷ ಬರುತ್ತದಂತೆ. ಇದು ನಾವು ಕನ್ನಡ ಸಿನಿಮಾಗೆ ಕಳೆದುಕೊಂಡಿದ್ದು ಅಂತ ಅವರು ಬರೆದುಕೊಂಡಿದ್ದಾರೆ. ಚಿತ್ರರಂಗದಲ್ಲಿ ಇದೆಲ್ಲಾ ಸಹಜ. ಆದರೆ ಕಳೆದುಕೊಳ್ಳುವವರಿಗೆ ಆಗುವ ನೋವು ಸಮಾಧಾನ ಮಾಡಿದರೂ ಹೋಗುವಂತದ್ದಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.