ಮತ್ತೊಂದು ದೋಸೆ ಗಮ.. ಮಸಾಲೆ ದೋಸೆ ಹುಯ್ಯುತ್ತಾಳೆ ಸೌಮ್ಯ, ತಿಂತಾರಂತೆ ಜಗ್ಗೇಶ್

Published : Sep 19, 2016, 09:30 AM ISTUpdated : Apr 11, 2018, 01:07 PM IST
ಮತ್ತೊಂದು ದೋಸೆ ಗಮ.. ಮಸಾಲೆ ದೋಸೆ ಹುಯ್ಯುತ್ತಾಳೆ ಸೌಮ್ಯ, ತಿಂತಾರಂತೆ ಜಗ್ಗೇಶ್

ಸಾರಾಂಶ

ಬೆಂಗಳೂರು(ಸೆ.18): ನೀರ್ ದೋಸೆ ಗೆಲುವಿನ ಲಯದಲ್ಲಿರುವ ಜಗ್ಗೇಶ್, ಮತ್ತೊಂದು ದೋಸೆಯ ರುಚಿ ನೋಡಲು ಮುಂದಾಗಿದ್ದಾರೆ. ಮಸಾಲೆ ದೋಸೆ ಸೌಮ್ಯ ಎಂಬ ಹೊಸ ಚಿತ್ರದ ಟೈಟಲ್ ರಿಜಿಸ್ಟರ್ ಮಾಡಿದ್ದಾರೆ. 

ನೀರ್ ದೋಸೆ ಚಿತ್ರದ ಮಸಾಲೆ ದೋಸೆ ಸೌಮ್ಯ ಡೈಲಾಗ್ ಸೂಪರ್  ಹಿಟ್ ಆಗಿದ್ದೇ ತಡ ನವರಸ ನಾಯಕ ಜಗ್ಗೇಶ್ 'ಮಸಾಲೆ ದೋಸೆ ಸೌಮ್ಯ' ಹಿಂದೆ ಬಿದ್ದಿದ್ದಾರೆ. ಕನ್ನಡ ಖ್ಯಾತ ನಟಿಯೊಬ್ಬರಿಗೆ ಟಾಂಗ್ ಕೊಡುವ ಸಲುವಾಗಿ ನೀರ್ ದೋಸೆ ಸಿನಿಮಾದಲ್ಲಿ ಮಸಾಲೆ ದೋಸೆ ಸೌಮ್ಯ ಡೈಲಾಗ್ ಬಳಸಲಾಗಿತ್ತು. 

ಜಗ್ಗೇಶ್ ಇದೇ ಹೆಸರಿನ  ಸಿನಿಮಾ ಮಾಡ್ತಾರೆ ಅನ್ನೋದು ಸದ್ಯ ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿ ಬರುತ್ತಿರುವ ಸುದ್ಧಿ. ಮಸಾಲೆ ದೋಸೆ ಸೌಮ್ಯ ಟೈಟಲ್ ನ್ನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ  ರಿಜಿಸ್ಟರ್ ಮಾಡಿರೋ ಜಗ್ಗೇಶ್ ಗುರುರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ಜಗ್ಗೇಶ್ ತಮ್ಮ ಟ್ವೀಟರ್ ಆಕೌಂಟ್ ನಲ್ಲಿ ಟ್ವೀಟ್ ಸಹ ಮಾಡಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್ ಆಡಿರೋ ಮಾತು ಯಾರ ವಿರುದ್ಧ? ವಿಜಯಲಕ್ಷ್ಮೀ ದರ್ಶನ್ ಮಾತಿನ ಮರ್ಮವೇನು?
ಖ್ಯಾತ ನಟನ ಅಭಿಮಾನಿಗೆ ಡಿಜಿಟಲ್ ಅರೆಸ್ಟ್; ದೆಹಲಿ ಸ್ಪೋಟದ ನಂಟಿನ ಹೆಸರಲ್ಲಿ ₹5.5 ಲಕ್ಷ ಪಂಗನಾಮ!