
ಬೆಂಗಳೂರು (ಜು.27): ನನ್ನ ಎತ್ತಾಕೊಂಡು ಹೋದ ಜಾಗದಲ್ಲಿ ಸುಮಾರು 15 ರಿಂದ 20 ಜನ ಇದ್ದರು. ಎಲ್ಲರೂ ಕೈಯಲ್ಲಿ ವೆಪನ್‌ಗಳನ್ನು ಹಿಡಿದುಕೊಂಡು 'ಜೈ ಡಿ ಬಾಸ್' ಎಂದು ಕೂಗುತ್ತಿದ್ದರು. ಬಾಸ್ ಬಗ್ಗೆ ಯಾರೂ ಮಾತಾಡ್‌ಬಾರದು ಅಂದ್ರು ಅಷ್ಟೇ..., ನಾನು ಬುದ್ಧಿವಂತಿಕೆಯಿಂದ ತಲೆ ತಗ್ಗಿಸಿದೆ. ನಂತರ ಬುದ್ಧಿವಂತಿಕೆಯಿಂದ ಅಲ್ಲಿಂದ ಹೊರಗೆ ಬಂದೆ. ಅಲ್ಲಿ ರಕ್ಷಕ್ ಬುಲೆಟ್ ಇದ್ದರೂ ನನ್ನ ನೆರವಿಗೆ ಬರಲಿಲ್ಲ. ದೇವರು ರಕ್ಷಕ್‌ಗೆ ಒಳ್ಳೆಯವರ ಸಹವಾಸ ಮಾಡುವಂತಹ ಬುದ್ಧಿ ಕೊಡಲಿ ಎಂದಷ್ಟೇ ಬೇಡಿಕೊಳ್ಳುತ್ತೇನೆ ಎಂದು ಒಳ್ಳೆ ಹುಡುಗ ಖ್ಯಾತಿಯ ನಟ ಪ್ರಥಮ್ ಹೇಳಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಕಾರ್ಯಕ್ರಮದ ನಿಮಿತ್ತ ಅಲ್ಲಿಗೆ ಹೊರಟಿದ್ದ ನಟ ಪ್ರಥಮ್ ಮೇಲೆ ದರ್ಶನ್ ಅಭಿಮಾನಿಗಳು ಅಟ್ಯಾಕ್ ಮಾಡಿದ್ದಾರೆ. ಈ ಘಟನೆ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿದ ನಟ ಪ್ರಥಮ್ ಅವರು, ಈ ಘಟನೆ ನಡೆದಾಗ ನನ್ನ ಜೊತೆಗೆ ರಕ್ಷಕ್ ಬುಲೆಟ್ ಇದ್ದರು. ಬಲವಂತವಾಗಿ ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋದರು. ಅಲ್ಲಿ, ಇಲ್ಲಿ ಎಲ್ಲಾಕಡೆ ಸುತ್ತಾಕಿಕೊಂಡು ನಮ್ಮನ್ನು ಕರೆದುಕೊಂಡು ಹೋದರು. ನಮ್ಮನ್ನು ಕರೆದೊಯ್ದ ಎಲ್ಲರ ಕೈಯಲ್ಲಿಯೂ ವೆಪನ್ಸ್ (ಮಾರಕಾಸ್ತ್ರಗಳು) ಇದ್ದವು. ಎಲ್ಲರೂ ಒಟ್ಟಿಗೆ ತಮ್ಮ ಬಳಿಯಿದ್ದ ವೆಪನ್ಸ್‌ಗಳನ್ನು ತಗೆದು ಜೈ ಡಿ ಬಾಸ್ ಎಂದು ಘೋಷಣೆ ಕೂಗಿದರು. ನಮ್ಮ ಬಾಸ್ ಬಗ್ಗೆ ಯಾರೂ ಮಾತಾಡಬಾರದು ಅಷ್ಟೆ ಎಂದು ಅವಾಜ್ ಹಾಕಿದರು ಎಂದು ಮಾಹಿತಿ ನೀಡಿದರು.
ನಾನು ಎಲ್ಲ ಕಡೆ ಕಾರ್ಯಕ್ರಮಕ್ಕೆ ಹೋಗುವಂತೆ ದೊಡ್ಡ ಬಳ್ಳಾಪುರ ಬಳಿ ಇದ್ದ ಒಂದು ಪ್ರೋಗ್ರಾಂಗೆ ಹೋಗಿದ್ದೆ. ಆಗ ಏಯ್ ಬಾರೋ ಅಂತ ಕರೆದರು. ಯಶಸ್ವಿನಿ ಅಂತ ಮೇಡಂ ಇದಾರೆ ಬಾ ಅಂತ ಕರೆದರು. ಕಂಡಿದಿನ್ ಕುತ್ಕೋಳ್ಳಲೋ..., ಸೋಶಿಯಲ್ ಮೀಡಿಯಾದಲ್ಲಿ ಏಗರಾಡ್ತಿಯಾ ಅಂತ ಅವಾಜ್ ಹಾಕಿದರು. ದೇವಸ್ಥಾನದಲ್ಲಿ ವೆಪನ್ಸ್ ಇತ್ತು. ಅಲ್ಲಿ ಸುಮಾರು 15 ರಿಂದ 20 ಜನ ಇದ್ದರು. ಅವರು ಯಾರೋ ಅಂತ ಹೇಳಿಲ್ಲ. ಎಲ್ಲರೂ ಸೇರಿ ಅವಾಜ್ ಹಾಕಿದ್ದಕ್ಕೆ ತಲೆ ತಗ್ಗಿಸು ಅಂದರು ನಾನು ಬುದ್ದಿವಂತಿಕೆಯಿಂದ ತಲೆ ತಗ್ಗಿಸಿದೆ. ಬುದ್ದಿವಂತಿಕೆಯಿಂದ ಅಲ್ಲಿಂದ ಹೊರಗೆ ಬಂದೆ ಎಂದು ಹೇಳಿಕೊಂಡಿದ್ದಾರೆ.
ಏನ್ ರಕ್ಷಕ್ ನಾ ಸೋನುಗೌಡ ಪಕ್ಕದಲ್ಲಿ ನಿಲ್ಲಿಸಿ ಫೋಟೋ ತೆಗಿಸ್ತಿಯಾ? ಅಂತ ಸಹ ಕೇಳಿದರು. ರಕ್ಷಕ್ ನನ್ನ ಸಹಾಯಕ್ಕೆ ಬರಲಿಲ್ಲ. ರಕ್ಷಕ್ ನನ್ನ ತಮ್ಮನ ತರಹ ಇದ್ದಾನೆ, ಒಳ್ಳೆಯವರ ಸಹವಾಸ ಮಾಡ್ಲಿ ಅಂತ ಅಷ್ಟೆ ಹೇಳ್ತಿನಿ. ರಕ್ಷಕ್ ಆ ರೌಡಿಗಳ ಜೊತೆಗೆ ಒಂದು ಗಂಟೆಯಿಂದಲೂ ಕುಳಿತುಕೊಂಡಿದ್ದನು. ಆ ಸಂದರ್ಭದಲ್ಲಿ ಈ ಬಗ್ಗೆ ಚರ್ಚೆ ಆಗಿರಬಹುದು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಫೋನ್ ಮಾಡಿ ನನ್ನ ಕೇಳಿದರು. ಆದರೆ, ಈ ಬಗ್ಗೆ ಅವರಿಗೆ ಹೇಗೆ ಮಾಹಿತಿ ಹೋಯ್ತೋ ಗೊತ್ತಿಲ್ಲ. ಅವರಿಗೆ ನಾನು ಈಗಾಗಲೇ ಮೌಖಿಕವಾಗಿ ಎಲ್ಲ ತಿಳಿಸಿದ್ದೇನೆ. ಮುಂದಿನ 3 ದಿನದಲ್ಲಿ ಸಂಪೂರ್ಣ ವಿವರ ಸಿಗಲಿದೆ ಎಂದು ಸುವರ್ಣ ನ್ಯೂಸ್‌ಗೆ ತಿಳಿಸಿದರು.
ದೇವಸ್ಥಾನದಲ್ಲಿ ನಾನು ದೇವರ ಪ್ರಸಾದ ತಿನ್ನುವಾಗಲೇ ಎಲ್ಲರೂ ನನ್ನ ಸುತ್ತುವರೆದರು. ಬಾಸ್ ಕರೆತಾ ಇದ್ದಾರೆ ಬಾ ಅಂದರು. ದೊಡ್ಡ ಹ್ಯಾಂಡು ಬಾ ಅಂದರು, ನಾನು ಅಲ್ಲಿ ಹೋದಾಗ ಮಾತು ಮಾತಾಡ್ತಾ ದೊಡ್ಡ ವೆಪನ್ ತೆಗೆದರು ಎಂದು ಅಲ್ಲಿ ನಡೆದ ಘಟನೆಯ ಬಗ್ಗೆ ವಿವರವಾಗಿ ಮಾಹಿತಿ ಬಿಚ್ಚಿಟ್ಟರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.