100 ವರ್ಷಗಳ ದಾಖಲೆ ಬ್ರೇಕ್! ಪ್ರಭಾಸ್, NTR, ರಾಮ್‌ಚರಣ್‌ನಿಂದಲೂ ಸಾಧ್ಯವಾಗಲಿಲ್ಲ; ಇತಿಹಾಸ ಸೃಷ್ಟಿಸಿದ 'ಇರುಮುಡಿ'

Published : Sep 14, 2026, 12:46 PM IST
Ravi Teja Irumudi

ಸಾರಾಂಶ

ರವಿತೇಜ ಅಭಿನಯದ 'ಇರುಮುಡಿ' ಸಿನಿಮಾ ತೆಲುಗು ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಮಧ್ಯಮ ಬಜೆಟ್‌ನ ಈ ಚಿತ್ರವು 119 ಕೋಟಿ ರೂಪಾಯಿ ಲಾಭ ಗಳಿಸಿ, 105 ವರ್ಷಗಳ ಟಾಲಿವುಡ್ ಇತಿಹಾಸದಲ್ಲೇ 100 ಕೋಟಿ ಶೇರ್ ಗಳಿಸಿದ ಮೊದಲ ಸಿನಿಮಾ ಎಂಬ ದಾಖಲೆ ಬರೆದಿದೆ.

ಇರುಮುಡಿ ಸಿನಿಮಾ ಬಿಡುಗಡೆಯಾಗಿ ಮೂರು ವಾರಗಳು ಕಳೆದರೂ ತೆಲುಗು ರಾಜ್ಯಗಳಲ್ಲಿ ರವಿತೇಜ ಸಿನಿಮಾದ ಹವಾ ಕಡಿಮೆಯಾಗಿಲ್ಲ. ಇಂದಿಗೂ ವೀಕ್ ಎಂಡ್‌ನಲ್ಲಿ ಬರೋಬ್ಬರಿ ಕೋಟಿ ರೂಪಾಯಿ ಗಳಿಕೆ ಮಾಡುವ ಇತಿಹಾಸ ನಿರ್ಮಿಸುತ್ತಿದೆ. ಈಗಾಗಲೇ ಹಲವು ದಾಖಲೆಗಳನ್ನು ಸೃಷ್ಟಿಸಿದ ಇರುಮುಡಿ ಸಿನಿಮಾ, ಕುಟುಂಬ ಸಮೇತ ಜನರನ್ನು ಥಿಯೇಟರ್ ಕಡೆಗೆ ಕರೆತರುತ್ತಿದೆ.

ಇರುಮುಡಿ, ಊಹೆಗೂ ನಿಲುಕದ ಗಳಿಕೆಯ ಹಿಂದಿನ ಸತ್ಯ

ಒಂದು ಮೀಡಿಯಾಂ ರೇಂಜ್ ಸಿನಿಮಾ ಭಾರೀ ಇಂಪ್ಯಾಕ್ಟ್ ಸೃಷ್ಟಿಸಿದೆ. ವೀಕ್ ಡೇಸ್‌, ವೀಕ್ ಎಂಡ್ ಅಂತ ವ್ಯತ್ಯಾಸ ಇಲ್ಲದೆ ಕಲೆಕ್ಷನ್ ಹೆಚ್ಚಾಗುತ್ತಿದೆ. ಈ ಸಿನಿಮಾ ಮತ್ತೊಂದು ಸಂಚಲನ ಸೃಷ್ಟಿಸಿದ್ದು, ಈ ಸಿನಿಮಾಗೆ ತೆಲುಗು ರಾಜ್ಯಗಳಲ್ಲಿ ಕೋಟಿ ಕೋಟಿ ಪ್ರಾಫಿಟ್ಸ್ ಹರಿದು ಬರುತ್ತಿದೆ. ಈಗ ಇರುಮುಡಿ ಸಿನಿಮಾ ಬಾಹುಬಲಿ 2, ಪುಷ್ಪ 2 ಸಿನಿಮಾ ಕೂಡ ನಿರ್ಮಿಸದ ಆದಾಯವನ್ನು ಇರುಮುಡಿ ಸಿನಿಮಾ ಪಡೆದುಕೊಂಡಿದೆ. ಈ ಚಿತ್ರದ ಕುರಿತಾದ ಉತ್ಸಾಹ ಮತ್ತು ಸಂಭ್ರಮ ಎಷ್ಟಿದೆಯೆಂದರೆ, ಇತ್ತೀಚೆಗಷ್ಟೇ ಬಿಡುಗಡೆಯಾದ ಚಿತ್ರಗಳು ಕೂಡ ಇದು ಗಳಿಸುತ್ತಿರುವ ಆದಾಯಕ್ಕೆ ಸರಿಸಾಟಿಯಾಗಲು ವಿಫಲವಾಗುತ್ತಿವೆ. ಪ್ರೇಕ್ಷಕರು ಈ ಚಿತ್ರಕ್ಕೆ ನೀಡಿರುವ ಅಪಾರ ಬೆಂಬಲವನ್ನು ಇದು ಸ್ಪಷ್ಟವಾಗಿ ತೋರಿಸಿಕೊಡುತ್ತದೆ. ವಿಶೇಷವೆಂದರೆ, ಇದು ಪ್ರೇಕ್ಷಕರನ್ನು ಮತ್ತೆ ಮತ್ತೆ ಚಿತ್ರಮಂದಿರಕ್ಕೆ ಸೆಳೆಯುತ್ತಿದೆ.

ಬಿಡುಗಡೆಗೂ ಮುನ್ನ ವಿಶ್ವದಾದ್ಯಂತ 20 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಿದ್ದ ಈ ಸಿನಿಮಾ, 21 ಕೋಟಿ ರೂಪಾಯಿ ಬ್ರೇಕ್ ಈವೆನ್ ಟಾರ್ಗೆಟ್‌ನೊಂದಿಗೆ ಬಿಡುಗಡೆಯಾಗಿತ್ತು. ಈಗ ಈ ಸಿನಿಮಾ 140 ಕೋಟಿ ರೂಪಾಯಿ ಶೇರ್ ಕಲೆಕ್ಷನ್ ಮಾಡಿದ್ದು, ಅಂದರೆ ಸಿನಿಮಾಗೆ 119 ಕೋಟಿ ರೂಪಾಯಿ ಲಾಭ ಹರಿದು ಬಂದಿದೆ. 105 ವರ್ಷಗಳ ಟಾಲಿವುಡ್ ಇತಿಹಾಸದಲ್ಲಿ 100 ಕೋಟಿ ಶೇರ್ ಗಳಿಸಿದ ಮೊದಲ ಸಿನಿಮಾ ಎಂಬ ದಾಖಲೆಯನ್ನು ನಿರ್ಮಿಸಿದೆ.

ಕಳೆದ ಕೆಲವು ವರ್ಷಗಳಿಂದ ಸತತ ಫ್ಲಾಪ್‌ಗಳೊಂದಿಗೆ ಸಂಕಷ್ಟಕ್ಕೆ ಸಿಲುಕಿದ್ದ ರವಿತೇಜಗೆ ಈ ಸಿನಿಮಾ ಬಳಿಕ ಭಾರೀ ಕ್ರೇಸ್ ತಂದು ಕೊಟ್ಟಿದೆ. ಒಳ್ಳೆಯ ಸಿನಿಮಾ ಬಂದರೆ ಜನರು ಇಂದಿಗೂ ಥಿಯೇಟರ್ಗೆ ಬರ್ತಾರೆ ಅನ್ನೋದಕ್ಕೆ ಈ ಸಿನಿಮಾ ಬಹುದೊಡ್ಡ ಉದಾಹರಣೆಯಾಗಿದೆ. ವರ್ಷಗಳ ಅವಧಿಯಲ್ಲಿ ನೂರಾರು ಚಲನಚಿತ್ರಗಳನ್ನು ಪ್ರದರ್ಶಿಸಿರುವ ಚಿತ್ರಮಂದಿರದ ಮಾಲೀಕರು, ಇಷ್ಟೊಂದು ದೊಡ್ಡ ಪ್ರಮಾಣದ ಲಾಭವನ್ನು ತಾವು ಎಂದೂ ಕಂಡಿಲ್ಲ ಎಂದು ಹೇಳುತ್ತಿದ್ದು, ಈ ಚಿತ್ರವು ಪ್ರೇಕ್ಷಕರ ಮನಸ್ಸನ್ನು ಎಷ್ಟು ಆಳವಾಗಿ ತಲುಪಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಉದ್ದ ಕೂದಲು, ಗಡ್ಡ ಬಿಟ್ಟ ನಟರು ರಾಕ್ಷಸರಂತೆ ಕಾಣುತ್ತಾರೆ: ಯಶ್ ಲುಕ್ ಬಗ್ಗೆ ಕಮೆಂಟ್
ಧುರಂಧರ್ 2, ಬಾರ್ಡರ್ ಸೇರಿ ಹಿಟ್ ಸಿನಿಮಾ ದಾಖಲೆ ಧೂಳೀಪಟ ಮಾಡಿದ ಹನುಮಾನ್ ಅಂಶ್