ಇರಾನಿ ಬೆಡಗಿ ಮಂದನ ಕರಿಮಿ ಫಿಟ್‌ನೆಸ್ ಗುಟ್ಟು!

Published : Mar 25, 2019, 10:38 AM ISTUpdated : Mar 25, 2019, 10:43 AM IST
ಇರಾನಿ ಬೆಡಗಿ ಮಂದನ ಕರಿಮಿ ಫಿಟ್‌ನೆಸ್ ಗುಟ್ಟು!

ಸಾರಾಂಶ

ಇರಾನಿಯನ್ ಸಿನಿಮಾ ಕ್ರೇಜ್ ಇರುವವರಿಗೆ ಈ ಫೇಸ್‌ಕಟ್ ನೋಡಿದರೆ ಎಲ್ಲೋ ನೋಡಿದ್ದೀವಲ್ಲಾ ಅಂತನಿಸಬಹುದು. ಮಂದನ ಕರಿಮಿ ಎಂಬ ನೀಳಕಾಯದ ಚೆಲುವೆ ಇರಾನಿ ಮೂಲದವಳು. ನಟಿಸಿರೋದು ಮಾತ್ರ ಹಿಂದಿ ಸಿನಿಮಾಗಳಲ್ಲಿ. ಕಳೆದ ವಾರ ಟಾಪ್‌ಲೆಸ್ ಆಗಿ ಕಾಣಿಸಿಕೊಂಡು ಸಖತ್ ಸುದ್ದಿಯಲ್ಲಿದ್ದಳು. ಈಕೆಯ ಫಿಟ್‌ನೆಸ್ ಗುಟ್ಟು ಇಲ್ಲಿದೆ.  

ಅಳತೆ ಮಾಡಿ ತಿನ್ನೋದು ನನ್ನ ಜಾಯಮಾನ ಅಲ್ಲ!

‘ಹೊಟ್ಟೆ ತುಂಬ ತಿಂತೀನಿ. ಆದರೆ ಆರೋಗ್ಯಕರವಾದದ್ದನ್ನೇ ತಿಂತೀನಿ’ ಅನ್ನೋದು ಮಂದನ ಕರಿಮಿ ಅನ್ನೋ ಸುಂದ್ರಿಯ ಡಯೆಟ್‌ನ ವನ್‌ಲೈನ್. ಇರಾನ್‌ನಲ್ಲೇ ಹುಟ್ಟಿ ಬೆಳೆದ ಈಕೆಗೆ ಊಟ, ತಿಂಡಿ ಕಡಿಮೆ ತಿಂದು ಗೊತ್ತಿಲ್ಲ. ಊಟ, ತಿಂಡಿಯನ್ನೂ ಶೆಡ್ಯೂಲ್ ಪ್ರಕಾರ ಗ್ರಾಮ್ ಲೆಕ್ಕದಲ್ಲಿ ತಿನ್ನೋದು ತನಗಾಗದ ಮಾತು ಅಂತಾಳೆ ಸುಂದ್ರಿ. ದಿನವಿಡೀ ಎನರ್ಜಿಯಿಂದಿರಲು ಬಾಳೆಹಣ್ಣು, ಬಾದಾಮಿ, ಸಾಲ್ಮನ್ ಮೀನು ಹಾಗೂ ಡಾರ್ಕ್ ಚಾಕೊಲೇಟ್ ತಿನ್ನೋದು ರೂಢಿ. ದಿನವಿಡೀ ನೀರು ಕುಡಿಯುತ್ತಲೇ ಇರೋ ಕಾರಣ ತನ್ನ ಚರ್ಮ ಅಷ್ಟು ಸುಂದರವಾಗಿದೆ ಅಂತ ಗುಟ್ಟು ಹೇಳ್ತಾಳೆ!

 

ತನಗೆ ತಾನೇ ಗುರು

ಮಂದನ ಕರಿಮಿ ಫಿಟ್‌ನೆಸ್ ಬಗ್ಗೆ ಸಖತ್ ಕಾನ್ಶಿಯಸ್. ಹಾಗಂತ ಉಳಿದವರಂತೆ ಫಿಟ್‌ನೆಸ್ ಟ್ರೈನರ್ ಈಕೆಗಿಲ್ಲ. ತನ್ನ ದೇಹದ ಕೆಮಿಸ್ಟ್ರಿ ತಾನೇ ಅರಿತುಕೊಂಡು ಅದಕ್ಕೆ ತಕ್ಕಂಥ ಎಕ್ಸರ್‌ಸೈಸ್ ಮಾಡಿ ಫಿಟ್‌ನೆಸ್ ಮೇಂಟೇನ್ ಮಾಡೋದು ಈಕೆಗೆ ಕರತಲಾಮಲಕ. ವಾರದಲ್ಲಿ ನಾಲ್ಕು ದಿನ ಜಿಮ್‌ನಲ್ಲಿ ಬೆವರಿಳಿಸೋ ಮಂದನಗೆ ಸ್ವಿಮ್ಮಿಂಗ್ ಅಂದರೆ ಬಹಳ ಇಷ್ಟ. ಜಿಮ್ ಇಲ್ಲಾಂದ್ರೆ ಸ್ವಿಮ್, ಕೆಲವೊಮ್ಮೆ ಸೈಕಲಿಂಗ್, ಮತ್ತೊಮ್ಮೆ ಯಾವುದೋ ಹೊಸ ಎಕ್ಸರ್‌ಸೈಸ್ ಹೀಗೆ ವಾರವಿಡೀ ಒಂದಲ್ಲಾ ಒಂದು ಎಕ್ಸರ್‌ಸೈಸ್ ಮಾಡಿಲ್ಲಾಂದ್ರೆ ನಿದ್ದೆ ಬರಲ್ಲ. ಒಂದೇ ಎಕ್ಸರ್‌ಸೈಸ್ ಮಾಡ್ಬೇಡಿ, ಹೊಸ ಹೊಸ ವ್ಯಾಯಾಮ ಕಲಿತು ಖುಷಿಯಿಂದ ಫಿಟ್‌ನೆಸ್ ಮೇಂಟೇನ್ ಮಾಡಿ ಅನ್ನುತ್ತಾಳೆ. 

ಎತ್ತರ: 5'7

ತೂಕ: 50

ಸುತ್ತಳತೆ: 33-27-33

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಕಾಲವೇ ಸತ್ಯ ಹೇಳುತ್ತದೆ, ಸಮಯವೇ ಉತ್ತರಿಸುತ್ತದೆ'.. ನಟ ದರ್ಶನ್ ಮೆಸೇಜ್‌ಗೆ 'ಡೆವಿಲ್' ಉತ್ತರ ಕೊಟ್ಟಿದೆಯೇ!
ಕಿರುತೆರೆಯಿಂದ ಹಿರಿತೆರೆಗೆ ಬಂದ ರಾಕಿಂಗ್ ಸ್ಟಾರ್ ಯಶ್‌ ನನಗೆ ಸ್ಫೂರ್ತಿ: ನಿಹಾರ್‌ ಮುಖೇಶ್‌