
ಮುಂಬೈ (ಜ.18): ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಅಭಿನಯದ ದಂಗಾಲ್ ಸಿನಿಮಾ ಅತ್ಯಂತ ಪ್ರಶಂಸೆಗೆ ಪಾತ್ರವಾಗಿದೆ. ಈ ಸಿನಿಮಾದ ನಟನೆಗಾಗಿ ಅಮೀರ್ ಉತ್ತಮ ನಟ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.
ಇಂಟರೆಸ್ಟಿಂಗ್ ವಿಚಾರ ಅಂದರೆ ಅಮೀರ್ ಈ ಕಥೆಯನ್ನು ಓಕೆ ಮಾಡದಿದ್ದಲ್ಲಿ ಈ ಪಾತ್ರವನ್ನ ಇಬ್ಬರು ಸ್ಟಾರ್ ನಟರ ಪಾಲಾಗುತ್ತಿತ್ತು, ಅಂತ ಯುಟಿವಿ ಮೋಶನ್‌ನ ಕ್ರಿಯೆಟಿವ್ ಪ್ರೊಡ್ಯೂಸರ್ ದಿವ್ಯಾ ರಾವ್ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಅಮೀರ್ ಈ ಪಾತ್ರಕ್ಕೆ ಒಪ್ಪಿಕೊಳ್ಳದಿದ್ದಲ್ಲಿ, ಕಮಲ್ ಹಾಸನ್ ಅಥವಾ ಮೋಹನ್‌ಲಾಲ್‌ರನ್ನು ಅಪ್ರೋಚ್ ಮಾಡುತ್ತಿದ್ದೆವು ಎಂದಿದ್ದಾರೆ. ಅಮೀರ್‌ನ್ನು ಬಿಟ್ಟು ಈ ಪಾತ್ರಕ್ಕೆ ಸೂಟ್ ಆಗುತ್ತಿದ್ದ ನಟರೆಂದರೆ ಅದು ಕಮಲ್ ಹಾಗೂ ಮೋಹನ್‌ಲಾಲ್ ಅಂತಾ ದಿವ್ಯಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.