ಹಾಲಿವುಡ್ ಕಾಮುಕನಿಂದ ಐಶ್ವರ್ಯ ರೈಯನ್ನು ಬಚಾವ್ ಮಾಡಿದ್ದ ಕೃಷ್ಣ ಸುಂದರಿ

Published : Oct 14, 2017, 03:26 PM ISTUpdated : Apr 11, 2018, 12:39 PM IST
ಹಾಲಿವುಡ್ ಕಾಮುಕನಿಂದ ಐಶ್ವರ್ಯ ರೈಯನ್ನು ಬಚಾವ್ ಮಾಡಿದ್ದ ಕೃಷ್ಣ ಸುಂದರಿ

ಸಾರಾಂಶ

ಹಾರ್ವೆ ಹಾಗೂ ಐಶ್ವರ್ಯ ಅವರು ಕಾನ್ಸ್ ಸೇರಿದಂತೆ ಹಲವು ಚಲನಚಿತ್ರೋತ್ಸವಗಳಲ್ಲಿ ಭೇಟಿ ಮಾಡಿದ್ದರು. ಆದರೆ ಆತ ಐಶ್ವರ್ಯ ಅವರನ್ನು ಏಕಾಂಗಿಯಾಗಿ ಭೇಟಿ ಮಾಡಲು ಹವಣಿಸಿದ್ದ. ಅವನೊಬ್ಬ ದೊಡ್ಡ ಹಂದಿ. ಐಶ್ವರ್ಯ ಅವರ ಜತೆಗಿನ ಮೀಟಿಂಗ್ ವೇಳೆ ಹಲವು ಬಾರಿ ಆತ ಜಾಗ ಖಾಲಿ ಮಾಡುವಂತೆ ನನಗೆ ಹೇಳಿದ್ದ. ಆದರೆ ನಾನು ತಿರಸ್ಕರಿಸಿದ್ದೆ.

ಲಾಸ್ ಏಂಜಲೀಸ್: ಏಂಜೆಲಿನಾ ಜೋಲಿ ಸೇರಿದಂತೆ ಹಾಲಿವುಡ್‌ನ ಪ್ರಖ್ಯಾತ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಖ್ಯಾತ ನಿರ್ಮಾಪಕ ಹಾರ್ವೆ ವೀನ್‌'ಸ್ಟೀನ್ ಕಣ್ಣು ಬಾಲಿವುಡ್‌'ನ ಪ್ರಸಿದ್ಧ ನಟಿ ಐಶ್ವರ್ಯ ರೈ ಮೇಲೂ ಬಿದ್ದಿತ್ತು. ಐಶ್ವರ್ಯ ಅವರನ್ನು ಏಕಾಂಗಿಯಾಗಿ ಭೇಟಿ ಮಾಡಲು ವೀನ್‌'ಸ್ಟೀನ್ ಸಾಕಷ್ಟು ಬಾರಿ ಪ್ರಯತ್ನ ಪಟ್ಟಿದ್ದ. ಆದರೆ ಅದನ್ನು ತಪ್ಪಿಸಿದ್ದೆ ಎಂದು ಐಶ್ವರ್ಯ ಅವರ ಅಂತಾರಾಷ್ಟ್ರೀಯ ಟ್ಯಾಲೆಂಟ್ ಮ್ಯಾನೇಜರ್ ಹೇಳಿಕೊಂಡಿದ್ದಾರೆ.

"ಹಾರ್ವೆ ಹಾಗೂ ಐಶ್ವರ್ಯ ಅವರು ಕಾನ್ಸ್ ಸೇರಿದಂತೆ ಹಲವು ಚಲನಚಿತ್ರೋತ್ಸವಗಳಲ್ಲಿ ಭೇಟಿ ಮಾಡಿದ್ದರು. ಆದರೆ ಆತ ಐಶ್ವರ್ಯ ಅವರನ್ನು ಏಕಾಂಗಿಯಾಗಿ ಭೇಟಿ ಮಾಡಲು ಹವಣಿಸಿದ್ದ. ಅವನೊಬ್ಬ ದೊಡ್ಡ ಹಂದಿ. ಐಶ್ವರ್ಯ ಅವರ ಜತೆಗಿನ ಮೀಟಿಂಗ್ ವೇಳೆ ಹಲವು ಬಾರಿ ಆತ ಜಾಗ ಖಾಲಿ ಮಾಡುವಂತೆ ನನಗೆ ಹೇಳಿದ್ದ. ಆದರೆ ನಾನು ತಿರಸ್ಕರಿಸಿದ್ದೆ. ಒಮ್ಮೆ ಆತನ ಕಚೇರಿಯಿಂದ ಹೊರಬರುವಾಗ ನನ್ನನ್ನು ತಡೆದು ನಿಲ್ಲಿಸಿದ್ದ ಹಾರ್ವೆ, ಆಕೆ ಒಬ್ಬಂಟಿ ಸಿಗಲು ನಾನು ಏನು ಮಾಡಬೇಕು ಹೇಳು ಎಂದು ಕೇಳಿದ್ದ. ನಾನು ಬೈದು ಕಳಿಸಿದ್ದೆ" ಎಂದು ಸಿಮೋನ್ ಶೆಫೀಲ್ಡ್ ಅವರು ವೆಬ್'ಸೈಟ್‌'ವೊಂದಕ್ಕೆ ಬರೆದುಕೊಂಡಿದ್ದಾರೆ.

ಸಾಕ್ಷ್ಯಗಳಿವೆ:
ಮೂರು ದಶಕಗಳಿಂದ ಹಾಲಿವುಡ್‌'ನಲ್ಲಿ ಗುರುತಿಸಿಕೊಂಡಿರುವ ಹಾರ್ವೆ ವೀನ್‌'ಸ್ಟೀನ್, ನಟಿಯರನ್ನು ಆರಂಭಿಕ ದಿನಗಳಲ್ಲಿ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದನೆಂಬ ಎಂಬ ಆರೋಪ ಕೇಳಿಬಂದಿದ್ದು, ಅದು ನಿಜ ಎಂದು ಹಲವು ನಟಿಯರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಏಂಜೆಲಿನಾ ಜೋಲಿ, ಗ್ವಿನೆತ್ ಪಾಲ್‌'ಟ್ರೋ ಅವರು ಆರೋಪ ಮಾಡಿದವರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದರೆ. ಮೆರಿಲ್ ಸ್ಟ್ರೀಪ್, ಜೆನಿರ್ ಲಾರೆನ್ಸ್, ‘ಟೈಟಾನಿಕ್’ ಖ್ಯಾತಿ ಕೇಟ್ ವಿನ್‌'ಸ್ಲೆಟ್ ಸೇರಿ ಹಲವರು ಕಾಮುಕ ನಿರ್ಮಾಪಕನ ವಿರುದ್ಧ ಹರಿಹಾಯ್ದಿದ್ದಾರೆ.

ಹೋಟೆಲ್'ಗೆ ಕರೆಸಿ ಬೆತ್ತಲಾಗುತ್ತಿದ್ದ:
ಸಿನಿಮಾ ಬಗ್ಗೆ ಮಾತನಾಡಬೇಕು ಎಂದು ತನ್ನ ಹೋಟೆಲ್ ಕೋಣೆಗೆ ನಟಿಯರನ್ನು ಕರೆಸಿಕೊಳ್ಳುತ್ತಿದ್ದ ಹಾರ್ವೆ, ಅವರು ಬಂದಾಗ ಬೇಕಂತಲೆ ಬೆತ್ತಲೆಯಾಗಿರುತ್ತಿದ್ದ ಅಥವಾ ಮಸಾಜ್ ಮಾಡುವಂತೆ ವಿನಂತಿಸಿಕೊಳ್ಳುತ್ತಿದ್ದ ಅಥವಾ ತಾನು ಬೆತ್ತಲಾಗಿ ಸ್ನಾನ ಮಾಡುವುದನ್ನು ನೋಡುವಂತೆ ಕೋರಿಕೊಳ್ಳುತ್ತಿದ್ದ! ಈ ಬಗ್ಗೆ ನಟಿಯರೇ ಬಹಿರಂಗವಾಗಿ ಹೇಳಿಕೊಂಡಿದ್ದರು. ಈ ಆರೋಪಗಳು ಬಂದ ಬೆನ್ನಲ್ಲೇ ಆತ ಸ್ಥಾಪಿಸಿದ್ದ ವೀನ್‌'ಸ್ಟೀನ್ ಕಂಪನಿಯಿಂದಲೇ ಹಾರ್ವೆಯನ್ನು ಹೊರದಬ್ಬಲಾಗಿದೆ.

epaperkannadaprabha.com

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನು ಅವಳಲ್ಲ.. ಕಾಳ್ಗಿಚ್ಚಿನಂತೆ ಹರಡಿದ ಎಐ ಫೋಟೋ: ರಶ್ಮಿಕಾ, ಶ್ರೀಲೀಲಾ ಬಳಿಕ ಸಿಟ್ಟಾದ ನಿವೇತಾ ಥಾಮಸ್
ಮುಸ್ಲಿಂ ಆಗಿ ಹುಟ್ಟಿ ಕ್ರಿಶ್ಚಿಯನ್ ಹೆಸರು ಇಟ್ಟುಕೊಂಡಿದ್ದು ಯಾಕೆ? ಸತ್ಯ ಬಿಚ್ಚಿಟ್ಟ ಸೂರ್ಯಕಾಂತಿ ನಟಿ ರೆಜಿನಾ