ನಾನು ನಂದಿನಿ ಬೆಂಗ್ಳೂರು ಬಂದೀನಿ... ವಿಕಿಪೀಡಿಯಾ ಖ್ಯಾತಿಯ ವಿಕ್ಕಿ ಈ ಹಾಡು ಫುಲ್ ವೈರಲ್

By Suvarna NewsFirst Published Sep 14, 2023, 12:38 PM IST
Highlights

ಬೆಂಗಳೂರಿಗೆ ದೂರದ ಹಳ್ಳಿಯಿಂದ ಬಂದು ಪಿಜಿಯಲ್ಲಿ (Paying guest) ಉಳಿಯುವ ಹೆಣ್ಣು  ಮಕ್ಕಳು ವಾಸ್ತವ ಚಿತ್ರಣ ಹೇಗಿರುತ್ತೆ? ಪಿಜಿಯಲ್ಲಿ ಆಹಾರ ಸರಿ ಇಲ್ಲದೆ, ಕನ್ನಡ ಮೀಡಿಯಂನಲ್ಲಿ ಓದಿದ ಕಾರಣಕ್ಕೆ ಇಂಗ್ಲೀಷ್ ಬಾರದೇ ಏನೆಲ್ಲಾ ಹೇಗೆಲ್ಲಾ ಗೋಳಾಡುತ್ತಾರೆ ಎಂಬುದನ್ನು ಹಾಡೊಂದು ತೆರೆದಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಖತ್ ವೈರಲ್ ಆಗಿದೆ.

ಬೆಂಗಳೂರು: ಉದ್ಯಾನನಗರಿ, ಗಾರ್ಡನ್‌ಸಿಟಿ ಎಂದೆಲ್ಲಾ ಖ್ಯಾತಿ ಗಳಿಸಿರುವ ಬೆಂಗಳೂರು ನಗರಿ ಅನೇಕರ ಲಕ್ಷಾಂತರ ಜನರ ಪಾಲಿಗೆ ಬದುಕು ಕಟ್ಟಲು ಸಹಾಯ ಮಾಡಿದ ಕೆಲಸ ನೀಡಿ ಪೊರೆದ ಹೆಮ್ಮೆಯ ನಗರಿ. ಹಳ್ಳಿಯಲ್ಲಿರುವ, ಓದುತ್ತಿರುವ ಓದಿ ಉದ್ಯೋಗದ ಹುಡುಕಾಟದಲ್ಲಿರುವ ಅನೇಕರ ಪಾಲಿಗೆ ಗಾರ್ಡನ್‌ ಸಿಟಿ ಕನಸಿನ ನಗರಿ. ಉದ್ಯೋಗ ಅರಸುವ ಸಲುವಾಗಿ ಅನೇಕರು ದೂರದ ಹಳ್ಳಿಗಳಿಂದ ಬೆಂಗಳೂರಿಗೆ ಬಂದು ಪಿಜಿಯಲ್ಲಿ ಉಳಿದು ಕೆಲಸಕ್ಕಾಗಿ ಅಲೆದಾಡುತ್ತಿರುತ್ತಾರೆ. ದುಡಿದು ತಿನ್ನುವ ಕನಸಿರುವ ಯಾರನ್ನೂ ಕೂಡ ಬೆಂಗಳೂರು ಬೇಡ ಎನ್ನುವುದಿಲ್ಲ, ಕೈ ಬೀಸಿ ಕರೆದು ಉದ್ಯೋಗ ನೀಡಿ ಹೊಸ ಕನಸಿಗೆ ರೆಕ್ಕೆ ಪುಕ್ಕ ಹುಟ್ಟಲು ನೆರವಾಗುತ್ತದೆ.

ಇಂತಹ ಕನಸಿನ ಬೆಂಗಳೂರಿಗೆ ದೂರದ ಹಳ್ಳಿಯಿಂದ ಬಂದು ಪಿಜಿಯಲ್ಲಿ (Paying guest) ಉಳಿಯುವ ಹೆಣ್ಣು  ಮಕ್ಕಳು ವಾಸ್ತವ ಚಿತ್ರಣ ಹೇಗಿರುತ್ತೆ? ಪಿಜಿಯಲ್ಲಿ ಆಹಾರ ಸರಿ ಇಲ್ಲದೆ, ಕನ್ನಡ ಮೀಡಿಯಂನಲ್ಲಿ ಓದಿದ ಕಾರಣಕ್ಕೆ ಇಂಗ್ಲೀಷ್ ಬಾರದೇ ಏನೆಲ್ಲಾ ಹೇಗೆಲ್ಲಾ ಗೋಳಾಡುತ್ತಾರೆ ಎಂಬುದನ್ನು ಹಾಡೊಂದು ತೆರೆದಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಖತ್ ವೈರಲ್ ಆಗಿದೆ. ಅಂದ ಹಾಗೆ ಈ ಹಾಡನ್ನು ಕ್ರಿಯೇಟ್ ಮಾಡಿದವರು ವಿಕಿಪಿಡಿಯಾ ಖ್ಯಾತಿಯ ವಿಕ್ಕಿ (vicky)ಎಂಬುವವರು. ಸಾಮಾಜಿಕ ಜಾಲತಾಣ ಬಳಕೆ ಮಾಡುವ ಬಹುತೇಕರಿಗೆ ಇವರ ಪರಿಚಯ ಮಾಡಬೇಕಾಗಿಲ್ಲ. ಸಾಕಷ್ಟು ಹಾಸ್ಯದ ವೀಡಿಯೋಗಳನ್ನು ಇವರು ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದು, ಅವುಗಳಲ್ಲಿ ಕೆಲವೊಂದು ಸಾಕಷ್ಟು ವೈರಲ್ ಕೂಡ ಆಗಿವೆ.

ವೀಡಿಯೋದಲ್ಲೇನಿದೆ. 
'ನಾನು ನಂದಿನಿ ಬೆಂಗಳೂರು ಬಂದಿನಿ, ಪಿಜಿಲಿ ಇದ್ದೀನಿ ಐಟಿ  ಕೆಲಸ ಮಾಡ್ತೀನಿ, ಊಟ ಸರಿ ಇಲ್ಲ ಅಂದ್ರೂನು ತಿಂತಿನಿ ಬಂದ ದುಡ್ಡೆಲ್ಲಾ ಮನೆಗೆ ಕಳಿಸ್ತೀನಿ, ಬಾರೆ ನಂದಿನಿ ಗೋಬಿ ತಿನಿಸ್ತೀನಿ ಬೇ ಬೇ ಬೇಡ, ಬಾರೆ ನಂದಿನಿ ಬೆಂಗಳೂರು ತೋರಿಸ್ತೀನಿ, ಓಹ್ ಬೇಡ ಓಹ್ ಬೇಡ, ಬಾರೆ ನಂದಿನಿ ಪೇಡ ತಿನ್ನಿಸ್ತೀನಿ, ಬೆ ಬೆ ಬೇಡ, ಬಾರೆ ನಂದಿನಿ ಪಿಕ್ಚರ್ ತೋರಿಸ್ತೀನಿ, ಬೇಡ ಬೇಡ, ನೋಡಮ್ಮ ಇಂಗ್ಲೀಷ್ ನೀನು ಕಲಿಬೇಕು,  ಇಲ್ಲ ಅಂದ್ರೆ ಐಟಿಲಿ ಕಷ್ಟ ಆಗುತ್ತೆ ಸರ್ ನಾನು ಕನ್ನಡ ಮೀಡಿಯಾಂನಲ್ಲಿ ಓದಿದ್ದೆ. ಅದಕ್ಕೆ ನನ್ನ ಇಂಗ್ಲೀಷ್ ಅಷ್ಟಕಷ್ಟೆ,  ಐ ಕ್ಯಾನ್ ಟ್ರೈ ಐ ಕ್ಯಾನ್ ಟಾಕ್, ಬಟ್ ವಾಟ್ ಐ ಸ್ಪೀಕ್ ಇಟ್ಸ್ ಬಟ್ಲರ್ ಇಂಗ್ಲೀಷ್'  ಇದು ಈ ಹಾಡಿನ ಲಿರೀಕ್ಸ್‌ ಆಗಿದೆ.

ಸ್ಪರ್ಧೆ ಇದ್ದಿದ್ದು ಅಂಬೆಗಾಲಿಡೋ ಮಕ್ಕಳಿಗೆ: ಸುಸ್ತಾಗಿದ್ದು ಮಾತ್ರ ಅಮ್ಮಂದಿರು: ವೈರಲ್ ವೀಡಿಯೋ

ಈ ಹಾಡನ್ನು ಬಹಳ ಸೊಗಸಾಗಿ ಇಂಗ್ಲೀಷ್‌ನ ಐಮ್‌ ಬಾರ್ಬಿ ಗರ್ಲ್‌ (I'm a barbie girl) ಎಂಬ ಹಾಡಿನ ಟ್ಯೂನ್‌ನಲ್ಲಿ ಹಾಡಲಾಗಿದೆ. ಕೇಳಲು ನೋಡಲು ಎರಡರಲ್ಲೂ ಸೊಗಸಾಗಿರುವ ಈ ಹಾಡನ್ನು ಬೆಂಗಳೂರಿನಲ್ಲಿ ಕೆಲಸ ಮಾಡುವ ಪಿಜಿಯಲ್ಲಿದ್ದು ದುಡಿಯುವ ಲಕ್ಷಾಂತರ ಜನ ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಮೆಚ್ಚಿಕೊಂಡಿದ್ದಾರೆ. ವಿಕ್ಕಿ ಹಾಗೂ ಅವರ ತಂಡದ ನಟನೆ ಕೂಡ ಸೂಪರ್ ಎನಿಸಿದೆ.  ಎಲ್ಲಕ್ಕೂ ಮುಖ್ಯವಾಗಿ ಡಾಕ್ಟರ್ ಬ್ರೋ ಖ್ಯಾತಿಯ ಗಗನ್ ಕೂಡ ಈ ವೀಡಿಯೋ ನೋಡಿ ವಾವ್ ಅದ್ಭುತ್ ಎಂದು ಕಾಮೆಂಟ್ ಮಾಡಿದ್ದಾರೆ.  ಅಲ್ಲದೇ ಈ ಹಾಡನ್ನು ನೋಡಿದವರೆಲ್ಲಾ, ನಂದಿನಿ ಎಂದು ಹೆಸರಿರುವ ತಮ್ಮ ಆತ್ಮೀಯರಿಗೆ ಗೆಳತಿಯರಿಗೆ ಈ ಹಾಡನ್ನು ಕಳುಹಿಸಿ ಅವರನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾರೆ ಅವರ ಸ್ನೇಹಿತರು. 

ಬಿಗ್ ಬಾಸ್ ಸೆಲೆಬ್ರಿಟಿಗಳಾದ ವೈನ್‌ ಸ್ಟೋರ್ ರಘು, ದಿವ್ಯ ಉರುಡುಗ, ನಿರೂಪಕಿ ಅನುಪಮಾ ಗೌಡ,  ಸೇರಿದಂತೆ ಅನೇಕ ವ್ಲಾಗರ್‌ಗಳು, ಮೀಮ್ಸ್‌ ಪೇಜ್‌ಗಳು ಈ ಹಾಡನ್ನು ಸಾಕಷ್ಟು ಮೆಚ್ಚಿಕೊಂಡಿದ್ದಾರೆ. ಅನೇಕರು ಈ ಹಾಡು ನಮ್ಮ ಬದುಕಿಗೆ ಕನೆಕ್ಟ್‌ ಆಗುತ್ತಿದೆ. ನಿನ್ನೆಯಿಂದ ಈ ಹಾಡನ್ನೇ ಗುನುಗುತ್ತಿರುವೆ ರಿಪೀಟ್ ಮೂಡಲ್ಲಿ ಕೇಳುತ್ತಿರುವೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. 

ವಿಕಿಪೀಡಿಯಾ ವಿಕ್ಕಿ ಯಾರು? 

ವಿಕಿಪೀಡಿಯಾ ವಿಕ್ಕಿ (vickypedia) ಕೂಡ ಒಬ್ಬರು ಹಾಸ್ಯ ಪ್ರಧಾನವಾದ ಕಂಟೆಂಟ್ ಕ್ರಿಯೇಟರ್,  ಇವರ ಬಗ್ಗೆ ಇನ್ನು ಹೆಚ್ಚು ಹೇಳಬೇಕೆಂದರೆ ಭಾಷಣ ಟ್ರಾನ್ಸ್‌ಲೇಟ್‌ ವೀಡಿಯೋದ ಅಣಕು ಮಾಡಿ ಇವರು ಸಾಕಷ್ಟು ಫೇಮಸ್ ಆಗಿದ್ದರು. ಚುನಾವಣಾ ಸಮಯದಲ್ಲಿ ರಾಷ್ಟ್ರಮಟ್ಟದ ನಾಯಕರ ಹಿಂದಿ ಭಾಷೆಯ ಭಾಷಣವನ್ನು ಸ್ಥಳೀಯ ಭಾಷೆಗೆ ಭಾಷಾಂತರ ಮಾಡಲು ಪಕ್ಷಗಳು ಕೆಲ ಎರಡೂ ಭಾಷೆಗಳನ್ನು (ತಿಳಿದಿದ್ದಾರೆಂದು ಭಾವಿಸಿ ) ತಿಳಿದಿರುವ ನಾಯಕರನ್ನು ನೇಮಿಸುತ್ತಿರುತ್ತಾರೆ. ಆದರೆ ಭಾಷೆ ತಿಳಿದವ ಉತ್ತಮ ಭಾಷಾಂತರಕಾರ ಆಗಬಲ್ಲ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುವಂತೆ ಇಲ್ಲಿ, ಈ ಭಾಷಾಂತರಕಾರರು ಪ್ರಮುಖ ನಾಯಕರ ಭಾಷಣವನ್ನೇ ಉಲ್ಟಾ ಮಾಡಿ ನಗೆಪಾಟಲಿಗೀಡಾಗಿದ್ದರು.  ಇದನ್ನೇ ಕಾಮಿಡಿಯಾಗಿಸಿಕೊಂಡು ಈ ವಿಕ್ಕಿ ವೀಡಿಯೋವೊಂದನ್ನು ಸೃಷ್ಟಿಸಿದ್ದು, ಇದು ಸಾಕಷ್ಟು ಫೇಮಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೇ ವಿಕ್ಕಿ ಅವರಿಗೆ ಬೇರೆ ಹಂತದ ಖ್ಯಾತಿಯನ್ನು ಗಳಿಸಿಕೊಟ್ಟಿತ್ತು. 

ಶೂ ಹಾಕಿ ನಡೆದಾಡೋ ಹುಂಜ: ಊಟದ ಪಾತ್ರೆಗೆ ಮುಚ್ಚಿಡುವ ಶ್ವಾನ: ವೈರಲ್ ವೀಡಿಯೋ

 

click me!