ದುಬೈ ಬೀಚ್'ನಲ್ಲಿ ಹೃತಿಕ್ ಸಂಸಾರ

Published : Dec 31, 2016, 06:20 AM ISTUpdated : Apr 11, 2018, 01:10 PM IST
ದುಬೈ ಬೀಚ್'ನಲ್ಲಿ ಹೃತಿಕ್ ಸಂಸಾರ

ಸಾರಾಂಶ

ಕ್ರಿಸ್ಮಸ್‌ ರಜೆ ಇರುವ ಕಾರಣ ಮಕ್ಕಳೊಂದಿಗೆ ಹೊಸ ವರ್ಷ ಆಚರಿಸಲು ಇಬ್ಬರೂ ದುಬೈ ತಲುಪಿದ್ದಾರೆ

2013ರಲ್ಲಿ ಡೈವೋರ್ಸ್‌ ಬಯಸಿದ್ದ ಸುಸ್ಸೇನ್‌ . 400 ಕೋಟಿ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಕೋರ್ಟಿನಿಂದ ಹೊರಗೆ ರಾಜಿಯಾಗಿ ಸುಸ್ಸೇನ್‌ ಬಯಸಿದಷ್ಟೇ ಮೊತ್ತವನ್ನು ಹೃತಿಕ್‌ ಹೊಂದಿಸಿದ್ದೆಲ್ಲ ಹಳೇಕತೆ. ಇದರ ನಂತರ ಪರಸ್ಪರ ವಿರುದ್ಧ ಧ್ರುವಗಳಿಗೆ ಮುಖಮಾಡಿದ್ದ ಜೋಡಿಯನ್ನೀಗ ಮಕ್ಕಳು ಒಂದು ಮಾಡುತ್ತಿದ್ದಾರೆ. ರೆಹಾನ್‌ ಮತ್ತು ಹೃಧಾನ್‌ ಓದುತ್ತಿರುವ ಶಾಲೆಯ ಪೋಷಕರ ಸಭೆಗೂ ಇಬ್ಬರೂ ಹಾಜರಾಗ್ತಿದ್ದಾರೆ. ಮಕ್ಕಳು ಬಯಸಿದ ಬಟ್ಟೆಗಳನ್ನು ಕೊಡಿಸುವುದಕ್ಕಾಗಿಯೇ ಇಬ್ಬರೂ ಶಾಪಿಂಗ್‌ಗೆ ಹೋಗುತ್ತಿದ್ದಾರೆ. ಕ್ರಿಸ್ಮಸ್‌ ರಜೆ ಇರುವ ಕಾರಣ ಮಕ್ಕಳೊಂದಿಗೆ ಹೊಸ ವರ್ಷ ಆಚರಿಸಲು ಇಬ್ಬರೂ ದುಬೈ ತಲುಪಿದ್ದಾರೆ. ಹೃತಿಕ್‌ ನಟಿಸಿರುವ ಕಾಬಿಲ್‌ ಜನವರಿ 25ರಂದು ತೆರೆಕಾಣುತ್ತಿದ್ದು, ಚಿತ್ರದ ಪ್ರಚಾರದಲ್ಲೂ ಸುಸ್ಸೇನ್‌ ಭಾಗಿಯಾಗುತ್ತಾರೆ ಎನ್ನಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!
ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!