ಅನುಷ್ಕಾ- ಕೊಹ್ಲಿ ನಡುವೆ ದ್ರಾವಿಡ್ ಬಂದಾಗ

Published : Dec 31, 2016, 05:54 AM ISTUpdated : Apr 11, 2018, 01:00 PM IST
ಅನುಷ್ಕಾ- ಕೊಹ್ಲಿ ನಡುವೆ ದ್ರಾವಿಡ್ ಬಂದಾಗ

ಸಾರಾಂಶ

ಈ ನಡುವೆ ಅವರು ರಾಹುಲ್‌ ದ್ರಾವಿಡ್‌ರನ್ನು ಎಳೆದು ತಂದಿದ್ದಾರೆ

ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ನಿಶ್ಚಿತಾರ್ಥ 2017ರ ಜ.1ರಂದು ಆಗಲಿದೆ ಎನ್ನುವ ಸುದ್ದಿ ಸುಳ್ಳಂತೆ. ಹಾಗಂತ ಅನುಷ್ಕಾ ಶರ್ಮಾ ಅವರೇ ಸ್ಪಷ್ಟಪಡಿಸಿದ್ದಾರೆ. ಕ್ರಿಕೆಟಿಗನೊಂದಿಗಿನ ತಮ್ಮ ಸಂಬಂಧವನ್ನು ಇಷ್ಟೆಲ್ಲ ರಂಗೇರಿಸುತ್ತಿರುವವರಿಗೆ ಅನುಷ್ಕಾ ಬೇರೆಯದೇ ಕತೆ ಹೇಳಿದ್ದಾರೆ. ಈ ನಡುವೆ ಅವರು ರಾಹುಲ್‌ ದ್ರಾವಿಡ್‌ರನ್ನು ಎಳೆದು ತಂದಿದ್ದಾರೆ. ‘ದ್ರಾವಿಡ್‌ ಕೂಡ ನನಗೆ ಚೆನ್ನಾಗಿ ಗೊತ್ತು. ಅವರನ್ನು ಭೇಟಿಯಾದ ಮೊದಲ ದಿನದಲ್ಲೇ ಧೈರ್ಯದಿಂದ ಮಾತನಾಡಿದ್ದೆ' ಎಂದಿದ್ದಾರೆ. ‘ನನ್ನ ಸಹೋದರ ಕ್ರಿಕೆಟ್‌ ಅಭಿಮಾನಿ. ಅವನಿಗೆ ವಿಪರೀತ ನಾಚಿಕೆ. ಒಮ್ಮೆ ಆಟ ಮುಗಿದ ಕೂಡಲೇ ದ್ರಾವಿಡ್‌ ಅವರ ಆಟೋಗ್ರಾಫ್‌ ಪಡೆಯಲು ಬಯಸಿದ. ಆದರೆ, ಹಸ್ತಾಕ್ಷರ ಕೇಳಲು ಅವನಿಗೇನೋ ಹೆದರಿಕೆ. ನಾನೇ ಪುಸ್ತಕ, ಪೆನ್ನು ಹಿಡಿದು ದ್ರಾವಿಡ್‌ ಮುಂದೆ ನಿಂತೆ. ಅವರು ಆಟೋಗ್ರಾಫ್‌ ಕೊಟ್ಟಮೇಲೂ ನನ್ನ ಪೆನ್ನಿನಿಂದಲೇ ಬೇರೆಲ್ಲರಿಗೂ ಹಸ್ತಾಕ್ಷರ ಕೊಟ್ಟರು. ಅಲ್ಲಿಯವರೆಗೂ ನಾನು ಕಾದೆ. ಎಲ್ಲ ಮುಗಿದ ಮೇಲೆ ದ್ರಾವಿಡ್‌ ಪೆನ್ನನ್ನು ಜೇಬಿಗೆ ಹಾಕಿಕೊಂಡು ಹೊರಟೇ ಬಿಟ್ಟರು. ಆಗ ನಾನೇ ಅವರ ಬಳಿ ಪೆನ್ನು ವಾಪಸು ಕೊಡುವಂತೆ ಕೇಳಿದೆ. ಅವರು ನಗುತ್ತಲೇ ಪೆನ್ನು ಹಿಂತಿರುಗಿಸಿದರು. ನನ್ನ ಪೆನ್ನು ಯಾವ ಸ್ಟಾರ್‌ ಬಳಿ ಇದ್ದರೂ ನಾನು ಧೈರ್ಯದಿಂದಲೇ ಕೇಳುತ್ತೇನೆ' ಎಂದು ಅನುಷ್ಕಾ ತಮ್ಮ ಹಿಂದಿನ ಕತೆ ಹೇಳಿಕೊಂಡರು. ಅನುಷ್ಕಾಗೆ ಕೊಹ್ಲಿಯಷ್ಟೇ ಗೊತ್ತು ಎನ್ನುವವರಿಗೂ ಇದು ಅಚ್ಚರಿ ಘಟನೆ ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಾಸ್: ಮೇಕಪ್ ಮಾಡ್ಕೊಳ್ಳೋ ಗ್ಯಾಪ್‌ನಲ್ಲಿ ಕಾವ್ಯಾಗೆ 'ಲವ್ ಪ್ರಪೋಸ್' ಮಾಡೇಬಿಟ್ಟ ಗಿಲ್ಲಿ ನಟ!
Bigg Boss: ಅಬ್ಬಬ್ಬಾ! ಗಿಲ್ಲಿ ಮೇಲೆ ಅಶ್ವಿನಿಗೆ ಇದೆಂಥ ಲವ್​? ನನ್ನ ಮನಸ್ಸು ಪರಿವರ್ತಿಸಿದ್ದೂ ಇವನೇ ಅಂದ ಧ್ರುವಂತ್​