‘ದಿ ವಿಲನ್’ ಹಾಡಿಗೆ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

Published : Oct 23, 2017, 10:24 PM ISTUpdated : Apr 11, 2018, 12:58 PM IST
‘ದಿ ವಿಲನ್’  ಹಾಡಿಗೆ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

ಸಾರಾಂಶ

ದಿ ವಿಲನ್​ ಹೆಸರೇ ಹೇಳುವಂತೆ ರಾಮ ರಾವಣ ಕಲ್ಪನೆಯ ಈ ಸಿನಿಮಾ ಮೊದಲ ನೋಟದಲ್ಲೇ  ಸಿನಿ ರಸಿಕರೆದೆಯಲ್ಲಿ  ಭರ್ಜರಿ ಬೆಂಕಿಕಿಡಿಯನ್ನು  ಹೊತ್ತಿಸಿದೆ. 

ಬೆಂಗಳೂರು (ಅ.23): ದಿ ವಿಲನ್​ ಹೆಸರೇ ಹೇಳುವಂತೆ ರಾಮ ರಾವಣ ಕಲ್ಪನೆಯ ಈ ಸಿನಿಮಾ ಮೊದಲ ನೋಟದಲ್ಲೇ  ಸಿನಿ ರಸಿಕರೆದೆಯಲ್ಲಿ  ಭರ್ಜರಿ ಬೆಂಕಿಕಿಡಿಯನ್ನು  ಹೊತ್ತಿಸಿದೆ. 

ಸ್ಯಾಂಡಲ್​ವುಡ್​ನ ಇಬ್ಬರು ದಿಗ್ಗಜ ನಟರ ಈ ಸಿನಿಮಾ ಹೇಗಿರುತ್ತೊ ಅನ್ನೋ ಕುತೂಹಲ ಈಗಿನಿಂದಲೇ ಶುರುವಾಗಿದೆ. ಈ ನಡುವೆ ಆಗಾಗ ನಿರ್ದೇಶಕ  ಪ್ರೇಮ್  ಸಿನಿಮಾದ  ಬಗ್ಗೆ  ಒಂದೊಂದು  ಬ್ರೇಕಿಂಗ್ ನ್ಯೂಸ್​ ಕೊಟ್ಟು ಅಭಿಮಾನಿಗಳಿಗೆ ಇನ್ನಷ್ಟು ಥ್ರಿಲ್ ನೀಡುತ್ತಿದ್ದಾರೆ.

ದಿ ವಿಲನ್ ಸಿನಿಮಾದ  ಟಾಕಿ  ಪೋರ್ಷನ್  ಆಲ್​ಮೋಸ್ಟ್  ಮುಕ್ತಾಯ  ಹಂತದಲ್ಲಿದೆ.  ಇದೀಗ  ಜೋಗಿ  ಪ್ರೇಮ್  ಕಿಚ್ಚನ ಇಂಟ್ರೊಡಕ್ಷನ್  ಹಾಡಿಗೆ  ಸ್ಕೆಚ್  ಹಾಕಿದ್ದಾರೆ.  ಸಿನಿಮ  ಶೂಟಿಂಗ್​ನ್ನು ಯಾವಾಗಲೂ ಹಬ್ಬದಂದೆ ಸೆಲೆಬ್ರೇಟ್​ ಮಾಡುವ ಪ್ರೇಮ್ ಸುದೀಪ್ ಇಂಟ್ರೊಡಕ್ಷನ್ ಹಾಡನ್ನು ಭಾರೀ ವಿಶೇಷವಾಗಿ ಪ್ಲ್ಯಾನ್​ ಮಾಡಿದ್ದಾರೆ.  ನಿರ್ಮಾಪಕ ಸಿ ಆರ್ ಮನೋಹರ್ ಈ ಹಾಡಿಗೆ 2 ಕೋಟಿ ಖರ್ಚು ಮಾಡಲು ಜೈ ಅಂದಿದ್ದಾರೆ. ಅರ್ಜುನ್ ಜನ್ಯ ಮಸ್ತ್ ಹಾಡಿಗೆ ನಾಗೇಶ್ ಮಾಸ್ಟರ್​ ಕೊರಿಯಾಗ್ರಫಿ ಮಾಡುತ್ತಿದ್ದು, 100ಜನ ಫಾರಿನ್ ಡಾನ್ಸರ್ಸ್​ ಈ ಹಾಡಿನಲ್ಲಿರುತ್ತಾರೆ. ಸೆಟ್​ ಸಾಂಗ್​ ಇದಾಗಿದ್ದು ಕಿಚ್ಚನ ಲುಕ್ಕು ಗೆಟಪ್ಪು ಮತ್ತು ಕ್ಯಾರೆಕ್ಟರ್ ರೀವಿಲ್ ಈ ಹಾಡಿನಲ್ಲಾಗುತ್ತೆ. ಇನ್ನು ಶಿವರಾಜ್​ಕುಮಾರ್​ಗೂ ಸಿನಿಮಾದಲ್ಲಿ ವಿಭಿನ್ನ ಇಂಟ್ರೊಡಕ್ಷನ್ ಸಾಂಗ್ ಇರಲಿದೆ. ಅದನ್ನು ತುಂಬಾ ರಾ ಆಗಿ ಚಿತ್ರೀಕರಿಸಲಿದ್ದಾರೆ ಪ್ರೆಮ್. ಇಬ್ಬರ ನಡುವೆ ಸುಂದರಿ ಆಮಿ ಜಾಕ್ಸನ್ ಗ್ಲ್ಯಾಮರ್ ಟಚ್ ನೀಡಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಟಿ ಮಂಜು ಭಾಷಿಣಿ ಫ್ಯಾನ್ಸ್​ ಕಣ್ಣಿಗೆ ಕಾಣಿಸಿದ್ರೆ ನಿಮ್​ ಕಥೆ ಗೋವಿಂದ: Bigg Boss ಡಾಗ್​ ಸತೀಶ್​ಗೆ ಯಾಕಿಂತ ಎಚ್ಚರಿಕೆ?
ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!