ವಿಜಯ್ ಪರ ಮಾತನಾಡಿದ್ದಕ್ಕೆ ವಿಶಾಲ್ ಸಿನಿಮಾ ಕಂಪನಿ ಮೇಲೆ ದಾಳಿ ನಡೆಯಿತೆ ?

Published : Oct 23, 2017, 09:20 PM ISTUpdated : Apr 11, 2018, 12:42 PM IST
ವಿಜಯ್ ಪರ ಮಾತನಾಡಿದ್ದಕ್ಕೆ ವಿಶಾಲ್ ಸಿನಿಮಾ ಕಂಪನಿ ಮೇಲೆ ದಾಳಿ ನಡೆಯಿತೆ ?

ಸಾರಾಂಶ

ನಾಲ್ವರು ಅಧಿಕಾರಿಗಳ ತಂಡ ಇಂದು ಮಧ್ಯಾಹ್ನ ಚೆನ್ನೈನ ಕಚೇರಿಯಲ್ಲಿ ದಾಳಿ ನಡೆಸಿದ್ದು, ಸಿನಿಮಾ ನಿರ್ಮಾಣ ಹಾಗೂ ಅದಕ್ಕೆ ಸಂಬಂಧಿಸಿದ ತೆರಿಗೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಚೆನ್ನೈ(ಅ.23): ಸರಕು ಸೇವೆಗಳ ತೆರಿಗೆ ಗುಪ್ತಚರ ಇಲಾಖೆ ತಮಿಳು ನಟ ವಿಶಾಲ್ ಸಿನಿಮಾ ಕಂಪನಿ ಮೇಲೆ ದಾಳಿ ನಡೆಸಿದೆ.

ಲಕ್ಷಾಂತರ ರೂ. ತೆರಿಗೆ ಪಾವತಿಸಿರದ ಕಾರಣ ಈ ದಾಳಿ ನಡೆದಿದೆ ಎನ್ನಲಾಗಿದೆ ಆದರೆ ತಮಿಳು ನಟ ವಿಜಯ್ ಅಭಿನಯದ ಮೆರ್ಸೆಲ್ ಚಿತ್ರದ ಪರ ಮಾತನಾಡಿದ ಕಾರಣಕ್ಕಾಗಿಯೇ ದಾಳಿ ನಡೆಸಲಾಗಿದ್ದು, ಸಾಮಾಜಿಕ ಜಾಲತಾಣಗಳು ಹಾಗೂ ವಿಜಯ್ ಹಾಗೂ ವಿಶಾಲ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕ ಹೆಚ್. ರಾಜ ಹಾಗೂ ವಿಶಾಲ್ ನಡೆವೆ ವಿಜಯ್ ಸಿನಿಮಾ ಮರ್ಸೆಲ್ ಬಗ್ಗೆ ಚರ್ಚೆ ನಡೆದಿತ್ತು. ಮರ್ಸೆಲ್ ಉತ್ತಮ ಸಿನಿಮಾವಾಗಿದ್ದು, ಭಾರತದಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ'  ಎಂದು ನಿನ್ನೆಯಷ್ಟೆ ಹೇಳಿಕೆ ನೀಡಿದ್ದರು.

ನಾಲ್ವರು ಅಧಿಕಾರಿಗಳ ತಂಡ ಇಂದು ಮಧ್ಯಾಹ್ನ ಚೆನ್ನೈನ ಕಚೇರಿಯಲ್ಲಿ ದಾಳಿ ನಡೆಸಿದ್ದು, ಸಿನಿಮಾ ನಿರ್ಮಾಣ ಹಾಗೂ ಅದಕ್ಕೆ ಸಂಬಂಧಿಸಿದ ತೆರಿಗೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ವಿಶಾಲ್ ಸಿನಿಮಾ ಸಂಸ್ಥೆ  2013 ರಲ್ಲಿ ಸ್ಥಾಪನೆಗೊಂಡು ಒಟ್ಟು 6 ಸಿನಿಮಾಗಳನ್ನು ನಿರ್ಮಿಸಿದೆ. ಅವೆಲ್ಲ ಸಿನಿಮಾಗಳಿಗೂ ವಿಜಯ್ ಅವರೇ ನಾಯಕರಾಗಿದ್ದರು. ವಿಜಯ್ ಅವರು ತಮಿಳು ಸಿನಿಮಾ ನಿರ್ಮಾಪಕ ಮಂಡಳಿಯ ಅಧ್ಯಕ್ಷರು ಸಹ ಆಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮ್ಮನ ಸೀರೆಯಲ್ಲಿ ಮದನ ಮನಮೋಹಿನಿಯಾಗಿ ಕಂಡ ಆರಾಧನಾ ರಾಮ್
ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?