
Hina Khan Pregnant Shocking Rumors: 'ಯೇ ರಿಶ್ತಾ ಕ್ಯಾ ಕೆಹ್ಲತಾ ಹೈ' ಧಾರಾವಾಹಿಯಲ್ಲಿ ಅಕ್ಷರಾ ಪಾತ್ರದ ಮೂಲಕ ಮನೆಮಾತಾದ ನಟಿ ಹಿನಾ ಖಾನ್ ತಮ್ಮ ವೈಯಕ್ತಿಕ ಜೀವನದಿಂದ ಸದ್ದು ಮಾಡುತ್ತಿದ್ದಾರೆ. ಜೂನ್ 4, 2025 ರಂದು ದೀರ್ಘಕಾಲದ ಗೆಳೆಯ ರಾಕಿ ಜೈಸ್ವಾಲ್ ಅವರನ್ನು ವಿವಾಹವಾದ ಹಿನಾ, ಇದೀಗ ಗರ್ಭಧಾರಣೆಯ ಊಹಾಪೋಹಗಳಿಂದ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.
ಇತ್ತೀಚಿನ ಫೋಟೋಗಳಲ್ಲಿ ಹಿನಾ ಅವರ ಗರ್ಭ ಧರಿಸಿದಂತೆ ಹೊಟ್ಟೆ ಉಬ್ಬು ಕಾಣಿಸಿಕೊಂಡಿದ್ದು, ಅಭಿಮಾನಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಚರ್ಚೆಗೆ ಕಾರಣವಾಗಿದೆ. 'ಮದುವೆಯಾದ ಕೇವಲ 10 ದಿನಗಳಲ್ಲಿ ಗರ್ಭದ ಉಬ್ಬು ಹಿನಾ ಗರ್ಭಿಣಿಯಾಗಿದ್ದ ಕಾರಣವೇ ತರಾತುರಿಯಲ್ಲಿ ಮದುವೆಯಾದರಾ? ಎಂಬ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಮೂಡಿವೆ. ಆದರೆ, ಈ ಊಹಾಪೋಹಗಳಿಗೆ ವಿರುದ್ಧವಾಗಿ, ಕೆಲವರು ಹಿನಾ ಅವರ ಸ್ತನ ಕ್ಯಾನ್ಸರ್ ಚಿಕಿತ್ಸೆಯಿಂದಾಗಿ ಔಷಧಿಗಳ ಪರಿಣಾಮವೇ ಈ ಊತಕ್ಕೆ ಕಾರಣ ಎಂದು ವಾದಿಸುತ್ತಿದ್ದಾರೆ. ಹಿನಾ ತಮ್ಮ ಕ್ಯಾನ್ಸರ್ ಪಯಣದ ಬಗ್ಗೆ ತಮ್ಮ ಅಭಿಮಾನಿಗಳೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ, ಆದರೆ ಗರ್ಭಧಾರಣೆಯ ವಿಷಯದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ.
ಇದೇ ವೇಳೆ, ಹಿನಾ ಮತ್ತು ರಾಕಿ ಶೀಘ್ರದಲ್ಲೇ 'ಪತಿ ಪತ್ನಿ ಔರ್ ಪಂಗಾ' ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಈ ಕಾರ್ಯಕ್ರಮದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಅಭಿಮಾನಿಗಳು ಈ ಜೋಡಿಯನ್ನು ಒಟ್ಟಿಗೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಹಿನಾ ಖಾನ್ ಅವರ ಈ ರೋಚಕ ಜೀವನದ ತಿರುವುಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಆದರೆ, ಈ ಗಾಸಿಪ್‌ನ ಸತ್ಯಾಸತ್ಯತೆ ಏನು ಎಂಬುದು ಕಾಲವೇ ಬಿಚ್ಚಿಡಲಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.