
ಹೆಬ್ಬುಲಿ ಸ್ಯಾಂಡಲ್'ವುಡ್'ನಲ್ಲಿ ಸಿಕ್ಕಾಪಟ್ಟೇ ಸದ್ದು ಮಾಡುತ್ತಿರುವ ಚಿತ್ರ. ಸದ್ಯಕ್ಕೆ ಕಿಚ್ಚನ ಈ ಚಿತ್ರ ಬಿಡುಗಡೆಗೂ ಮುನ್ನ ದಾಖಲೆ ಮಾಡಿದೆ. ಫೆ.23ಕ್ಕೆ ಬೆಳ್ಳಿ ತೆರೆ ಮೇಲೆ ಘರ್ಜಿಸೋಕ್ಕೆ ಬರ್ತಾ ಇರೋ ಮೋಸ್ಟ್ ಎಕ್ಸ್'ಫೆಕ್ಟೆಡ್ ಸಿನಿಮಾ. ಹೆಬ್ಬುಲಿ ಸಿನಿಮಾ ಅತೀ ಹೆಚ್ಚು ಚಿತ್ರಮಂದಿಗಳಲ್ಲಿ ಅಂದರೆ ಬರೋಬ್ಬರಿ 500 ಚಿತ್ರಮಂದಿರಗಳಲ್ಲಿ ರಿಲೀಸ್ ಆಗುವ ಮೂಲಕ ನೂತನ ದಾಖಲೆ ನಿರ್ಮಿಸುತ್ತಿದೆ.ಈ ಹಿಂದೆ ಕನ್ನಡದ ಯಾವ ಚಿತ್ರಗಳು ಇಷ್ಟು ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಿರಲಿಲ್ಲ.
ಶಿವಣ್ಣನ ಜೋಗಯ್ಯ 325, ಪುನಿತ್'ರ ರಣ ವಿಕ್ರಮ 310, ಜಗ್ಗುದಾದ 305, ಯಶ್'ನ ಮಾಸ್ಟ್'ರ್ ಪೀಸ್ ಹಾಗೂ ಉಪೇಂದ್ರನ ಬ್ರಹ್ಮ 305 ಚಿತ್ರಮಂದಿರಗಳಲ್ಲಿ ತೆರೆಕಂಡು ಸದ್ದು ಮಾಡಿದ್ದವು. ಸುದೀಪ್'ನ ಮತ್ತೊಂದು ಚಿತ್ರ ಮಾಣಿಕ್ಯ 300 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.ಆದರೆ ಇವೆಲ್ಲ ದಾಖಲೆಗಳನ್ನು ಮೀರಿ ಹೆಬ್ಬುಲಿ 500 ಚಿತ್ರಗಳಲ್ಲಿ ಬಿಡುಗಡೆಯಾಗುತ್ತದೆ. ಹೆಬ್ಬಲಿಯ ಹವಾ ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳನ್ನು ಬಿಡುಗಡೆ ಮಾಡುವ ನಿರ್ಮಾಪಕರಿಗೆ ನಡುಕ ಹುಟ್ಟಿಸಿದೆ.
ಏಕಕಾಲದಲ್ಲಿ ಕರ್ನಾಟಕ ಮಾತ್ರವಲ್ಲದೆ ದುಬೈ, ಚೆನ್ನೈ, ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ತೆರೆ ಕಾಣುತ್ತಿದೆ. ಅಂತೂ ತೆಲುಗು, ತಮಿಳು ಹಾಗೂ ಮಲಯಾಳಂ ರೀತಿ ನಮ್ಮ ಕರುನಾಡ ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ನಿಜವಾಗಲು ಕನ್ನಡಿಗರ ಹೆಮ್ಮೆಯೇ ಸರಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.