
ಬಹುಭಾಷಾ ನಟ ಅರ್ಜುನ್ ಸರ್ಜಾ ಪುತ್ರಿ ಕನ್ನಡಕ್ಕೆ ಬಂದಿರುವುದು ಎಲ್ಲರಿಗೂ ಗೊತ್ತಿದೆ. ಅಪ್ಪನ ನಿರ್ದೇಶನದ ಚಿತ್ರದ ಮೂಲಕವೇ ಚಂದನವನಕ್ಕೆ ಕಾಲಿಟ್ಟಿದ್ದಾಳೆ ಈ ಚಂದದ ಬೆಡಗಿ ಐಶ್ವರ್ಯ. ಅಂದ ಹಾಗೆ ಅರ್ಜುನ್ ಅವರ ಮೊದಲ ಕನ್ನಡ ಸಿನಿಮಾ ‘ಪ್ರೇಮ ಬರಹ'. ಹೆಚ್ಚು ಕಮ್ಮಿ ಚಿತ್ರೀಕರಣ ಮುಗಿಯುತ್ತಿದೆ. ಆದರೆ, ತಮ್ಮ ತಂದೆಯ ನಿರ್ದೇಶನದ ಚಿತ್ರದಲ್ಲಿ ನಟಿಸಿದ ಅನುಭವ ಹೇಗಿತ್ತು ಎನ್ನುವ ಪ್ರಶ್ನೆಗೆ ಐಶ್ವರ್ಯ ನಗುತ್ತಲೇ ಉತ್ತರಿಸುತ್ತಾರೆ. ‘ಅಪ್ಪ ಆ್ಯಕ್ಷನ್ ಕಿಂಗ್ ಎಂಬುದು ನಿಜ. ಆದರೆ, ನಿರ್ದೇಶನ ಮಾಡುತ್ತಿರುವುದು ಮಾತ್ರ ಪಕ್ಕಾ ರೊಮ್ಯಾಂಟಿಕ್ ಕತೆಯನ್ನು ಒಳಗೊಂಡ ಸಿನಿಮಾ. ಹೀಗಾಗಿ ‘ಪ್ರೇಮ ಬರಹ' ಚಿತ್ರೀಕರಣದ ಹೊತ್ತಿನಲ್ಲಿ ಸಾಕಷ್ಟುಮುಜುಗರಕ್ಕೊಳಗಾಗುವ ಸನ್ನಿವೇಶಗಳನ್ನು ಎದುರಿಸಿದ್ದೇನೆ' ಎನ್ನುವ ಮೂಲಕ ಚಿತ್ರೀಕರಣದ ಅನುಭವ ಬಿಚ್ಚಿಡುತ್ತಾರೆ ಐಶ್ವರ್ಯ ಅರ್ಜುನ್.
‘ಪ್ರೇಮ ಬರಹ ಎನ್ನುವ ಹೆಸರಿನಲ್ಲಿ ರೊಮ್ಯಾಂಟಿಕ್ ಇದೆ. ಹೀಗಾಗಿ ನಾನು ಹೀರೋ ಚಂದನ್ ಜತೆ ರೊಮಾನ್ಸ್ ಮಾಡುವ ಸಾಕಷ್ಟುದೃಶ್ಯಗಳಿದ್ದವು. ಸಿನಿಮಾ ಎಂದ ಮೇಲೆ ರೊಮಾನ್ಸ್, ಹಾಟ್ ದೃಶ್ಯಗಳು ಇದ್ದೇ ಇರುತ್ತವೆ. ನಟಿಯಾಗಿ ನನಗೆ ಆ ಬಗ್ಗೆ ತಿಳುವಳಿಕೆ ಇದೆ. ಆದರೆ, ಅಪ್ಪನ ಮುಂದೆ ರೊಮಾನ್ಸ್ ಮಾಡುವ ಸಂದರ್ಭದಲ್ಲಿ ತುಂಬಾ ಕಸಿವಿಸಿ ಆಯಿತು. ಸಿನಿಮಾ ತಾನೆ ಅಂತ ಅದುಕೊಂಡರೂ ಎಲ್ಲೋ ಒಂದು ಕಡೆ ಅಪ್ಪ ನನ್ನ ಮುಂದೆ ಇದ್ದಾರೆ ಎನ್ನುವ ಭಾವನೆ ಇತ್ತು. ಹೀಗಾಗಿ ಅಪ್ಪನ ನಿರ್ದೇಶನದ ‘ಪ್ರೇಮ ಬರಹ' ಚಿತ್ರ ಯಾವುದೇ ಸವಾಲು ಒಡ್ಡದಿದ್ದರೂ ಈ ರೋಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವುದು ನನಗೆ ಸಾಕಷ್ಟುಸವಾಲು ಒಡ್ಡಿದವು. ಕೆಲವೊಮ್ಮೆ ನನ್ನ ಪಜೀತಿ ನೋಡಲಾರದೆ ಅಪ್ಪ ಕೊಂಚ ದೂರ ನಿಲ್ಲುತ್ತಿದ್ದರು. ಆದರೆ, ನಿರ್ದೇಶಕರೇ ಅವರು ಎಂದ ಮೇಲೆ ಮಾನಿಟರ್ ನೋಡಲೇ ಬೇಕು ಅಲ್ಲವೇ? ಹೀಗಾಗಿ ಕ್ಯಾಮೆರಾ ಮುಂದೆ ರೊಮಾನ್ಸ್ ದೃಶ್ಯಗಳು ನೆನಪಿಸಿಕೊಂಡರೆ ಅಪ್ಪ ಕಾಣುತ್ತಿದ್ದರು. ಅಪ್ಪನ ಮುಂದೆ ಇಂಥ ದೃಶ್ಯಗಳಲ್ಲಿ ನಟಿಸುವುದು ಎಷ್ಟುಕಷ್ಟಅಂತ ‘ಪ್ರೇಮ ಬರಹ' ಸಿನಿಮಾ ನನಗೆ ತೋರಿಸಿಕೊಟ್ಟಿದೆ' ಎನ್ನುತ್ತ ಚಿತ್ರೀಕರಣದ ಅನುಭವ ಬಿಚ್ಚಿಡುತ್ತಾರೆ ಐಶ್ವರ್ಯ ಅರ್ಜುನ್.
ಐಶ್ವರ್ಯ ಅವರ ಈ ಅನುಭವ ಕೇಳಿದ ಮೇಲೆ ಇಲ್ಲಿ ಮತ್ತಿಬ್ಬರು ನಟಿಯರು ನೆನಪಾಗುತ್ತಾರೆ. ಬಾಲಿವುಡ್‌ನ ನಟಿ ಪೂಜಾ ಭಟ್ ಹಾಗೂ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್. ಪೂಜಾ ಭಟ್ ಈ ಹಿಂದೆ ತಮ್ಮ ಮಹೇಶ್ ಭಟ್ ನಿರ್ದೇಶನದ ಚಿತ್ರವೊಂದರಲ್ಲಿ ಚುಂಬನ ದೃಶ್ಯಗಳಲ್ಲಿ ನಟಿಸಿದ್ದರು. ಹಾಗೆ ಶ್ರುತಿ ಹಾಸನ್ ಕೂಡ ಕಮಲ್ ಹಾಸನ್ ನಿರ್ದೇಶನದ ಚಿತ್ರದಲ್ಲಿ ಸಖತ್ ಹಾಟ್ ದೃಶ್ಯದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಆದರೆ, ಈ ಇಬ್ಬರು ನಟಿಯರಿಗೆ ತಮ್ಮ ಅಪ್ಪಂದಿರ ಮುಂದೆ ಹೀಗೆ ಕಾಣಿಸಿಕೊಂಡ ಬಗ್ಗೆ ಯಾವುದೇ ಮುಜುಗರ ಅಥವಾ ಕಸಿವಿಸಿ ಇಲ್ಲ. ಆದರೆ, ಐಶ್ವರ್ಯ ಅವರಿಗೆ ಮಾತ್ರ ಅಂಥ ಕಸಿವಿಸಿಯಾಗಿದೆ ಎಂದರೆ ಅದು ಕನ್ನಡದ ಹೆÜಣ್ಣುಮಗಳ ಸದಭಿರುಚಿ ಮತ್ತು ಸಂಕೋಚ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.