RRR ಅಲ್ಲ, The Kashmir Files ಕೂಡ ಅಲ್ಲ, ಗುಜರಾತಿ ಚಿತ್ರ ಚೆಲ್ಲೋ ಶೋ ಆಸ್ಕರ್‌ಗೆ ಭಾರತದ ಅಧಿಕೃತ ಎಂಟ್ರಿ!

By Santosh NaikFirst Published Sep 20, 2022, 6:33 PM IST
Highlights

ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಹಾಗೂ ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ ಫೈಲ್ಸ್‌ ಚಿತ್ರವನ್ನು ಹಿಂದಿಕ್ಕಿದ್ದ ಗುಜರಾತಿ ಚಿತ್ರ ಚೆಲ್ಲೋಶೋ, 2023ರ ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶ ಎಂದು ಫಿಲ್ಮ್‌ ಫೆಡರೇಷನ್‌ ಆಫ್‌ ಇಂಡಿಯಾ ಘೋಷಣೆ ಮಾಡಿದೆ.

ನವದೆಹಲಿ (ಸೆ. 20): ಪಾನ್‌ ನಳಿನ್‌ ನಿರ್ದೇಶನದ ಗುಜರಾತಿ ಚಿತ್ರ ಚೆಲ್ಲೋ ಶೋ, 2023ರ ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶ ಎಂದು ಫಿಲ್ಮ್‌ ಫೆಡರೇಷನ್‌ ಆಫ್‌ ಇಂಡಿಯಾ ಘೋಷಣೆ ಮಾಡಿದೆ. ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಹಾಗೂ ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮಿರ್‌ ಫೈಲ್ಸ್‌ ಚಿತ್ರಗಳು ರೇಸ್‌ನಲ್ಲಿದ್ದರೂ ಚೆಲ್ಲೋ ಶೋ ಇವೆಲ್ಲವನ್ನೂ ಹಿಂದಿಕ್ಕಿ ಭಾರತದ ಅಧಿಕೃತ ಎಂಟ್ರಿಯಾಗಿ ಘೋಷಣೆಯಾಗಿದೆ.ಚೆಲ್ಲೋ ಶೋ ಅಂದರೆ ಕೊನೆಯ ಚಿತ್ರದ ಶೋ ಎನ್ನುವ ಅರ್ಥವಾಗಿದ್ದು, 2021ರಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಭಾವಿನ್‌ ರಾಬರಿ, ಭವೇಶರ್‌ ಶ್ರೀಮಾಲಿ, ರಿಚಾ ಮೀನಾ, ದೀಪನ್‌ ರಾವನ್‌ ಹಾಗೂ ಪರೇಶ್‌ ಮೆಹ್ತಾ ಮುಖ್ಯಪಾತ್ರದಲ್ಲಿ ನಟಿಸಿದ್ದರು. 2021ರ ಜೂನ್‌ 10 ರಂದದು 20ನೇ ಟ್ರಿಬೆಕ್ಕಾ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಈ ಚಿತ್ರ ಪ್ರೀಮಿಯರ್‌ ಆಗಿತ್ತು.  ಈ ಸುದ್ದಿಗೆ ಪಾನ್‌ ನಳಿನ್‌ ಕೂಡ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ ಓಹ್‌ ಮೈ ಗಾಡ್‌. ಇದೆಂಥಾ ಸಂಭ್ರಮದ ರಾತ್ರಿ. ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾಕ್ಕೆ ಕೃತಜ್ಞತೆಗಳು ಮತ್ತು ಎಫ್‌ಎಫ್‌ಐ ತೀರ್ಪುಗಾರರ ಸದಸ್ಯರಿಗೆ ಧನ್ಯವಾದಗಳು.ಚೆಲ್ಲೋ ಶೋನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು. ನನಗೆ ನಿಜಕ್ಕೂ ನಂಬಲಾಗುತ್ತಿಲ್ಲ.  ಮನರಂಜನೆ, ಸ್ಫೂರ್ತಿ ಮತ್ತು ಜ್ಞಾನವನ್ನು ನೀಡುವ ಸಿನಿಮಾವನ್ನು ನಾನು ನಂಬುತ್ತೇನೆ' ಎಂದು ಬರೆದುಕೊಂಡಿದ್ದಾರೆ. 

Gujarati film "Chhello Show" is India's official entry for Oscars 2023: Film Federation of India

— Press Trust of India (@PTI_News)

ಗುಜರಾತಿ ಭಾಷೆಯ ಕಮಿಂಗ್‌ ಏಜ್‌ ಡ್ರಾಮಾ ,ವಿಶ್ವದಾದ್ಯಂತ ವಿಮರ್ಶಕರು ಹಾಗೂ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅಕ್ಟೋಬರ್‌ 14 ರಿಂದ ಗುಜರಾತ್‌ನ ಥಿಯೇಟರ್‌ಗಳಲ್ಲಿ ಹಾಗೂ ದೇಶದ ಆಯ್ದ ಚಿತ್ರಮಂದಿರಗಳಲ್ಲಿ ಇದು ಮತ್ತೆ ಬಿಡುಡೆಯಾಗಲಿದೆ. ಗ್ರಾಮೀಣ ಗುಜರಾತ್‌ನಲ್ಲಿ ಬಾಲ್ಯದಲ್ಲಿ ಚಲನಚಿತ್ರಗಳ ಪ್ರೇಮದಲ್ಲಿ ಬೀಳುವ ನಿರ್ದೇಶಕ ಪಾನ್ ನಳಿನ್ ಅವರ ಸ್ವಂತ ನೆನಪುಗಳಿಂದ ಸ್ಫೂರ್ತಿ ಪಡೆದ ಚೆಲ್ಲೋ ಶೋ, ಡಿಜಿಟಲ್ ಕ್ರಾಂತಿಯ ಮಾಂತ್ರಿಕತೆಗೆ ಸಿಕ್ಕಿಬಿದ್ದ ಒಂಬತ್ತು ವರ್ಷದ ಹುಡುಗನನ್ನು ಕಥೆಯನ್ನು ಹೇಳುತ್ತದೆ.  ಸೆಲ್ಯುಲಾಯ್ಡ್ ಫಿಲ್ಮ್ ಪ್ರೊಜೆಕ್ಷನ್ ಹಿಂದೆ ಇರುವ ಬೆಳಕು ಮತ್ತು ನೆರಳಿನ ವಿಜ್ಞಾನದ ಬಗ್ಗೆಯೂ ಚಿತ್ರ ಮಾತನಾಡುತ್ತದೆ. 

ಲಾಸ್ಟ್‌ ಫಿಲ್ಮ್‌ ಶೋ,  ರಾಬರ್ಟ್ ಡಿನಿರೋ ಅವರ ಟ್ರಿಬೆಕಾ ಚಲನಚಿತ್ರೋತ್ಸವದಲ್ಲಿ ಮೊದಲ ಚಲನಚಿತ್ರವಾಗಿ ಅದರ ಮೊಟ್ಟಮೊದಲ ಪ್ರದರ್ಶನವನ್ನು ಹೊಂದಿತ್ತು ಮತ್ತು ಸ್ಪೇನ್‌ನಲ್ಲಿ ನಡೆದ 66 ನೇ ವಲ್ಲಾಡೋಲಿಡ್ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಸ್ಪೈಕ್ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ. ಅಲ್ಲದೆ, ಕಮರ್ಷಿಯಲ್‌ ಆಗಿಯೂ ಚಿತ್ರ ದೊಡ್ಡ ಯಶಸ್ಸನ್ನು ಸಂಪಾದನೆ ಮಾಡಿದೆ.

'ದೋಬಾರಾ' ಆಸ್ಕರ್‌ಗೆ ಹೋಗಲಿದೆ; ಅನುರಾಗ್ ಕಶ್ಯಪ್‌ಗೆ ವ್ಯಂಗ್ಯವಾಡಿದ ವಿವೇಕ್ ಅಗ್ನಿಹೋತ್ರಿ

ಚೆಲ್ಲೋ ಶೋ (Chhello Show) ಆಸ್ಕರ್‌ (Oscars) ಪ್ರವೇಶದ ಹಾದಿಯಲ್ಲಿ ದಕ್ಷಿಣ ಭಾರತದ ಪ್ರಖ್ಯಾತ ಚಿತ್ರ ರಾಜಮೌಳಿ (SS Rajamouli ) ನಿರ್ದೇಶನದ ಆರ್‌ಆರ್‌ಆರ್‌ (RRR) ಹಾಗೂ ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಪಡೆದ ಸತ್ಯ ಘಟನೆ ಆಧಾರಿತ ಚಿತ್ರ ದಿ ಕಾಶ್ಮೀರ್‌ ಫೈಲ್ಸ್‌ಅನ್ನು (The Kashmir Files) ಹಿಂದೆ ಹಾಕಿತ್ತು. ಈ ಎರಡು ಚಿತ್ರಗಳಲ್ಲಿ ಯಾವುದಾದರೂ ಒಂದನ್ನು ಭಾರತದ ಅಧಿಕೃತ ಆಸ್ಕರ್ ಪ್ರವೇಶಕ್ಕೆ ಹೆಸರಿಸಬೇಕೆಂದು ಹಲವರು ಪ್ರಚಾರ ಮಾಡುತ್ತಿದ್ದರು.

ಭಾರತಕ್ಕೆ ಎಂಟ್ರಿ ಕೊಟ್ಟ ಆಸ್ಕರ್ ನಲ್ಲಿ ಕಪಾಳಮೋಕ್ಷ ಮಾಡಿದ್ದ ನಟ ವಿಲ್ ಸ್ಮಿತ್

ಎಸ್‌ಎಸ್ ರಾಜಮೌಳಿ ಅವರ ಮಹಾಕಾವ್ಯವು ನೆಟ್‌ಫ್ಲಿಕ್ಸ್‌ನಲ್ಲಿ (NetFlix) ಬಿಡುಗಡೆಯಾದಾಗಿನಿಂದ, ಅಂತರರಾಷ್ಟ್ರೀಯ ಮಾಧ್ಯಮಗಳು, ಚಲನಚಿತ್ರ ನಿರ್ಮಾಪಕರು ಮತ್ತು ಅಭಿಮಾನಿಗಳಿಂದ ದೊಡ್ಡ ಮಟ್ಟದ ಮೆಚ್ಚುಗೆ ಪಡೆದುಕೊಂಡಿದೆ. ಕಾಲ್ಪನಿಕ ಕಥೆಯವನ್ನು ಅವರು ವಿವರಿಸಿರುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಎಸ್‌ಎಸ್ ರಾಜಮೌಳಿ ಅವರು ಯುಎಸ್‌ನಲ್ಲಿ ಅನೇಕ ಪ್ರದರ್ಶನಗಳಿಗೆ ಹಾಜರಾಗಿದ್ದಾರೆ ಮತ್ತು ಆಸ್ಕರ್‌ನಲ್ಲಿ ಆರ್‌ಆರ್‌ಆರ್‌ನ ಅವಕಾಶಗಳನ್ನು ಹೆಚ್ಚಿಸುವ ಅವರ ಪ್ರಯತ್ನಗಳ ಭಾಗವಾಗಿ ಪ್ರೇಕ್ಷಕರನ್ನು ಉದ್ದೇಶಿಸಿಯೂ ಮಾತನಾಡಿದ್ದರು.

click me!