
ಬೆಂಗಳೂರು(ಜೂ.02): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾಗಳು, ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬ್ಯುಸಿನೆಸ್ ಮಾಡುತ್ತೆ ಅನ್ನೋದು ಗಾಂಧಿನಗರದ ನಿರ್ಮಾಪಕರ ಮಾತು.ಆದ್ರೆ ದರ್ಶನ್ ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ಕೂಡ ಕೋಟಿ ಕೋಟಿ ಇದೆ.. ಗಾಂಧಿನಗರದಲ್ಲಿ ದರ್ಶನ್ ಬಗ್ಗೆ ಬಿಗ್ ನ್ಯೂಸ್ ಒಂದು ಓಡಾಡುತ್ತಿದೆ. ದರ್ಶನ್ ಹೊಸ ಸಿನಿಮಾ ಒಂದಕ್ಕೆ ಸೈನ್ ಮಾಡಿದ್ದು ಆ ಸಿನಿಮಾ ಸಂಭಾವನೆ ನೀವು ಕೇಳಿದ್ರೆ ಶಾಕ್ ಆಗ್ತೀರಿ
ಸ್ಯಾಂಡಲ್ವುಡ್ ಬಾಕ್ಸಾಫೀಸ್ ಸುಲ್ತಾನ್ ಅಂದ್ರೆ ಅದು ಚಾಲೆಂಜಿಂಗ್ ಸ್ಟಾರ್. ಈ ಚಕ್ರವರ್ತಿಯ ಸಂಭಾವನೆಯೂ ಅಷ್ಟೆ ಹೆಚ್ಚಿದೆ. ಹೆಬ್ಬುಲಿ ನಿರ್ಮಾಪಕ ಉಮಾಪತಿ ಜೊತೆಗಿನ ಸಿನಿಮಾಗೆ ದರ್ಶನ್ 7 ಕೋಟಿ ಸಂಭಾವನೆ ಪಡೆದಿದ್ದಾರೆ. ಇನ್ನೂ ಶುರುವಾಗದ ಈ ಸಿನಿಮಾ ಸಂಭಾವನೆಯೇ ದರ್ಶನ್ ಕೆರಿಯರ್ನ ಅತಿಹೆಚ್ಚು ಎಂದು ಹೇಳಲಾಗುತ್ತಿತ್ತು. ಈಗ ದರ್ಶನ್ 50 ನೇ ಸಿನಿಮಾಗೆ ಶಾಕಿಂಗ್ ಸಂಭಾವನೆ ಪಡಿಯೋ ಮೂಲಕ ರೇಸಲ್ಲಿ ಮತ್ತೆ ನಂ 1 ಆಗಿದ್ದಾರೆ.
ದರ್ಶನ್ ಸಂಭಾವನೆ ಗ್ರಾಫ್ ಸಡನ್ನಾಗಿ ಹೆಚ್ಚಾಗಿದ್ದೆ ಸಾರಥಿ ಚಿತ್ರದ ಬಿಗ್ ಹಿಟ್ನಿಂದ. ಮಂದೆ ಸಂಗೊಳ್ಳಿ ರಾಯಣ್ಣ. ಬುಲ್ ಬುಲ್, ಚಿತ್ರಗಳಿಗೆ 5 ಕೋಟಿ ,ಜಗ್ಗುದಾದ, ಚಕ್ರವರ್ತಿ,ತಾರಕ್ ಸಿನಿಮಾಗಳಿಗೆ 6 ಕೋಟಿ ಇದ್ದವರು ಉಮಾಪತಿ ಸಿನಿಮಾಗೆ 7 ಕೋಟಿ ಪಡೆದಿದ್ದಾರೆ. ಈಗ ದರ್ಶನ್ 50 ನೇ ಸಿನಿಮಾ ಮುನಿರತ್ನ ನಿರ್ಮಾಣದ ಚಿತ್ರಕ್ಕೆ 10 ಕೋಟಿ ಸಂಭಾವನೆ ಪಡೆದಿದ್ದಾರೆಂದು ಮೂಲಗಳು ಹೇಳುತ್ತಿವೆ. 2 ರಿಂದ 3 ವರ್ಷ ಸಿನಿಮಾ ಶೂಟಿಂಗ್ ನಡೆಯಲಿದ್ದು ಬರೋಬ್ಬರಿ 10 ಕೋಟಿ ಸಂಭಾವನೆ ದರ್ಶನ್ ಪಡೆದಿದ್ದಾರೆನ್ನಲಾಗಿದೆ. ನಿರ್ಮಾಪಕ ಮುನಿರತ್ನ ಈ ಸಿನಿಮಾಗೆ 50 ಕೋಟಿ ಬಜೆಟ್ ಎಂದಿದ್ದಾರೆ. ದರ್ಶನ್ 10 ಕೋಟಿ ಪಡೆದಿದ್ದು ನಿಜವಾಗಿದ್ದರೆ ಸ್ಯಾಂಡಲ್ವುಡ್ನ ನಂ.1 ದುಬಾರಿ ನಟ ದರ್ಶನ್ ಆಗುತ್ತಾರೆ
ವರದಿ: ರವಿಕುಮಾರ್ ಎಂಕೆ, ಸುವರ್ಣ ನ್ಯೂಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.