ಹೆಂಡ್ತೀನ ಗೂಗಲ್’ನಲ್ಲಿ ಹುಡುಕಿ ಅಂತಾರೆ ನಿರ್ದೇಶಕರು; ಹೇಗಿದೆಯಂತೆ ಗೊತ್ತಾ ಗೂಗಲ್ ಚಿತ್ರ?

Published : Feb 17, 2018, 01:35 PM ISTUpdated : Apr 11, 2018, 12:56 PM IST
ಹೆಂಡ್ತೀನ ಗೂಗಲ್’ನಲ್ಲಿ ಹುಡುಕಿ ಅಂತಾರೆ ನಿರ್ದೇಶಕರು; ಹೇಗಿದೆಯಂತೆ ಗೊತ್ತಾ ಗೂಗಲ್ ಚಿತ್ರ?

ಸಾರಾಂಶ

ನೀನು ನನಗೆ ಹೆಂಡತಿ ಆಗಿರು ಅಂತ ಕೇಳೋದಿಲ್ಲ, ಮುದ್ದಾದ ಮಗಳಿಗೆ ಅಮ್ಮಳಾಗಿದ್ದರಷ್ಟೇ ಸಾಕು! ಗೂಗಲ್ ಸರ್ಚ್ ಕ್ಲೈಮ್ಯಾಕ್ಸ್ ಪಾಯಿಂಟ್ ತಲುಪಿದೆ. ಬೆಂಗಳೂರಿನಿಂದ ಹೊರಟು, ಹಾಸನ, ಗೊರೂರು, ಅಲ್ಲಿಂದ ಚಳ್ಳಕೆರೆ, ರಾಯಚೂರು ಬಳಸಿಕೊಂಡು ಗೂಗಲ್ ಎನ್ನುವ ಕುಗ್ರಾಮ ತಲುಪಿ, ವಾಪಸ್ ಬೆಂಗಳೂರಿಗೆ ಬರುವ ದಾರಿಯಲ್ಲಿ  ಸಿಕ್ಕ ಪತ್ನಿ ನಂದಿನಿ (ಶುಭಾ ಪೂಂಜಾ)ಯ ಮುಂದೆ ನಿಂತಿದ್ದಾನೆ ಹರೀಶ್ (ನಾಗೇಂದ್ರ ಪ್ರಸಾದ್). ಅವರಿಬ್ಬರು ಒಂದು ನಿರ್ಧಾರಕ್ಕೆ ಬರಬೇಕಿದೆ. ಯಾಕಂದ್ರೆ ಅವರ ಸುಖಿ ಸಂಸಾರಕ್ಕೆ ಸುನಾಮಿಯೇ ಅಪ್ಪಳಿಸಿದೆ. ‘ನೀನು ನನಗೆ ಹೆಂಡ್ತಿ ಆಗಿರು ಅಂತ ಕೇಳೋದಿಲ್ಲ, ಮುದ್ದಾದ ಕನಸಿಗೆ ಅಮ್ಮಳಾಗಿದ್ದರಷ್ಟೇ ಸಾಕು’ ಅಂಥ ಪತ್ನಿಯಲ್ಲಿ ಕೇಳಿಕೊಳ್ಳುತ್ತಾನೆ ಹರೀಶ್.

ಬೆಂಗಳೂರು (ಫೆ.17): ನೀನು ನನಗೆ ಹೆಂಡತಿ ಆಗಿರು ಅಂತ ಕೇಳೋದಿಲ್ಲ, ಮುದ್ದಾದ ಮಗಳಿಗೆ ಅಮ್ಮಳಾಗಿದ್ದರಷ್ಟೇ ಸಾಕು! ಗೂಗಲ್ ಸರ್ಚ್ ಕ್ಲೈಮ್ಯಾಕ್ಸ್ ಪಾಯಿಂಟ್ ತಲುಪಿದೆ. ಬೆಂಗಳೂರಿನಿಂದ ಹೊರಟು, ಹಾಸನ, ಗೊರೂರು, ಅಲ್ಲಿಂದ
ಚಳ್ಳಕೆರೆ, ರಾಯಚೂರು ಬಳಸಿಕೊಂಡು ಗೂಗಲ್ ಎನ್ನುವ ಕುಗ್ರಾಮ ತಲುಪಿ, ವಾಪಸ್ ಬೆಂಗಳೂರಿಗೆ ಬರುವ ದಾರಿಯಲ್ಲಿ  ಸಿಕ್ಕ ಪತ್ನಿ ನಂದಿನಿ (ಶುಭಾ ಪೂಂಜಾ)ಯ ಮುಂದೆ ನಿಂತಿದ್ದಾನೆ ಹರೀಶ್ (ನಾಗೇಂದ್ರ ಪ್ರಸಾದ್). ಅವರಿಬ್ಬರು ಒಂದು
ನಿರ್ಧಾರಕ್ಕೆ ಬರಬೇಕಿದೆ. ಯಾಕಂದ್ರೆ ಅವರ ಸುಖಿ ಸಂಸಾರಕ್ಕೆ ಸುನಾಮಿಯೇ ಅಪ್ಪಳಿಸಿದೆ. ‘ನೀನು ನನಗೆ ಹೆಂಡ್ತಿ ಆಗಿರು ಅಂತ ಕೇಳೋದಿಲ್ಲ, ಮುದ್ದಾದ ಕನಸಿಗೆ ಅಮ್ಮಳಾಗಿದ್ದರಷ್ಟೇ ಸಾಕು’
ಅಂಥ ಪತ್ನಿಯಲ್ಲಿ ಕೇಳಿಕೊಳ್ಳುತ್ತಾನೆ ಹರೀಶ್.

ಹಾಗಾದ್ರೆ ಅಲ್ಲಿ ಆಗಿದ್ದೇನು?
ಅಂದ ಹಾಗೆ ಇಲ್ಲಿ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ‘ಗೂಗಲ್’ ಮೂಲಕ ಹೇಳಹೊರಟ್ದಿದು ಕಳೆದು ಹೋದ ಹೆಂಡತಿಯ ಹುಡುಕಾಟದ ಒಂದು ಕತೆಯನ್ನು. ಆಕೆ ಯಾಕಾಗಿ ಮನೆ ಬಿಟ್ಟು ಹೋದಳು, ಅವರಿಬ್ಬರ ನಡುವೆ ಏನಾಗಿತ್ತು
ಅನ್ನೋದು ಸಸ್ಪೆನ್ಸ್. ಎಷ್ಟೇ ವಿಭಿನ್ನ ಕತೆಗಳು ಅಂದರೂ ಮುಖ್ಯವಾಹಿನಿಯಿಂದ ಕಡೆಗಣಿಸಲ್ಪಟ್ಟ ಮಧ್ಯಮ ವರ್ಗದ ಗಂಡ-ಹೆಂಡತಿ ನಡುವಿನ ಸರಸ- ವಿರಸದ ಇಂತಹ ಕತೆ ಈ ಮುಂಚೆ ತೆರೆಗೆ ಬಂದಿದ್ದು ಅಪರೂಪ. ನೋಡಿಸುವ ನೋಟದಲ್ಲಿ ಕಾಡಿಸುವ, ಭಾವನೆಗಳನ್ನು ಕೆದಕುವ, ಅವ್ಯಕ್ತ ಕಂಪನ ಸೃಷ್ಟಿಸುವ ದೃಶ್ಯ, ಮಾತು, ಹಾಡುಗಳು ಇಲ್ಲಿವೆ.

ಚಿತ್ರರಂಗಕ್ಕೆ ಬಂದ ಹೊಸಬರು ‘ತಮ್ಮ ಸಿನಿಮಾದಲ್ಲಿ ಹೀರೋ ಅಂತ ಯಾರೂ ಇಲ್ಲ, ಕತೆಯೇ ಹೀರೋ’ಎಂದು ಹೇಳುವ ಮಾತು ಈ ಚಿತ್ರಕ್ಕೆ ಅನ್ವಯ ಆಗುತ್ತೆ. ಯಾಕಂದ್ರೆ, ನಾಗೇಂದ್ರ ಪ್ರಸಾದ್ ಅವರನ್ನು ನೀವು ಹೀರೋ ರೇಂಜ್‌ನಲ್ಲಿ ಕಲ್ಪಿಸಿಕೊಂಡು ಚಿತ್ರ ನೋಡಲು ಸಾಧ್ಯವೇ ಇಲ್ಲ. ಕತೆಯಲ್ಲಿ ಅವರದ್ದೊಂದು ಪಾತ್ರವಷ್ಟೆ. ಅದರ ಅಂಕು-ಡೊಂಕು ಹೇಗಿದೆ-ಎಂತಿದೆ ಅಂತೆಲ್ಲ ಕನ್ನಡಿ ಹಿಡಿದರೆ, ಖುಷಿಗಿಂತ ನಿರಾಸೆಯೇ ಜಾಸ್ತಿ. ಶುಂಭ ಫೂಂಜಾ ಈ ಚಿತ್ರಕ್ಕೆ
ನಾಯಕಿ ಆಗಿದ್ದು ಯಾಕೆ ಎನ್ನುವ ನಿಮ್ಮೊಳಗಿನ ಅನುಮಾನಕ್ಕೆ ಇಲ್ಲಿ ಉತ್ತರವಿದೆ. ವಿವಾಹಿತೆಯ ಪಾತ್ರದಲ್ಲೂ ಹಸಿ-ಬಿಸಿ ಆಗಿ ಕಾಣಿಸಿಕೊಂಡಿದ್ದಾರೆ. ಹಾಗ್ಯಾಕೆ ಅವರು ಕಾಣಿಸಿಕೊಂಡರು ಅನ್ನೋದು ಅವರ ಪಾತ್ರದ ವೈಶಿಷ್ಟ್ಯ.

ಮತ್ತೊಂದೆಡೆ ಪ್ರೀತಿಸಿದವಳನ್ನು ಕೈಬಿಟ್ಟು ವಿವಾಹಿತೆಯನ್ನೇ ಹಾರಿಸಿಕೊಂಡು ಹೋದ ಬಾಲು ಪಾತ್ರಕ್ಕೆ ದೀಪಕ್ ಜೀವ ತುಂಬಿದ್ದಾರೆ. ಶೋಭರಾಜ್, ಮುನಿ, ಕೃಷ್ಣಮೂರ್ತಿ, ಸಂಪತ್  ಪಾತ್ರಗಳ ಅಭಿನಯ ಅಚ್ಚುಕಟ್ಟಾಗಿದೆ. ಅಮೃತಾ ರಾವ್ ಈ
ಹಿಂದಿನ ಎಲ್ಲ ಚಿತ್ರಗಳಿಗಿಂತ ಇಲ್ಲಿ ಹೆಚ್ಚು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮುಖ್ಯವಾಗಿ ಪ್ರೇಕ್ಷ ಕರನ್ನು ಸೆಳೆಯಲು ಎರಡು ಕಾರಣಗಳಿವೆ. ಒಂದು ವಿಭಿನ್ನ ವಾದ ಕತೆ, ಅದರ ಜತೆಗೆ ಹಾಡಿನ ಸಾಹಿತ್ಯ. ಸಂಗೀತದಲ್ಲಿ ಅಷ್ಟೇನು ವಿಶೇಷತೆ ಇಲ್ಲದಿದ್ದರೂ ಹಾಡಿನ ಸಾಹಿತ್ಯ ತೀರಾ ಆಪ್ತವಾಗುತ್ತೆ. ಉಳಿದಂತೆ ಅದರ ಮೇಕಿಂಗ್ ಅಷ್ಟಕಷ್ಟೆ. ಒಂದು ಇನ್ನೋವಾ ಕಾರಿನಲ್ಲಿಯೇ ಅರ್ಧ ಚಿತ್ರದ ಚಿತ್ರೀಕರಣ ಮುಗಿದು ಹೋಗಿದೆ. 

-ದೇಶಾದ್ರಿ ಹೊಸ್ಮನೆ 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕನ್ನಡದ ಖ್ಯಾತ ನಟನಿಗೆ 'ವಾರಣಾಸಿ' ಚಿತ್ರದಲ್ಲಿ ಅವಕಾಶ ಕೊಟ್ಟ ರಾಜಮೌಳಿ: ಯಾರು ಆ ಸ್ಟಾರ್?
Karna Serial: ವೀಕ್ಷಕರು ಬೇಡ ಅಂದದ್ದೇ ಆಗೋಯ್ತು! ತೇಜಸ್​ ಎದುರೇ ನಡೆದು ಹೋಯ್ತಾ ಕರ್ಣ- ನಿತ್ಯಾಳ ಮದುವೆ?