ಕನ್ನಡದಲ್ಲಿ ಬಾಹುಬಲಿ ? ಸಿನಿಮಾ ನಿರ್ಮಾಣಕ್ಕೆ ಹೆಚ್'ಡಿಕೆ ಸಜ್ಜು !

Published : Jul 21, 2017, 08:55 PM ISTUpdated : Apr 11, 2018, 01:10 PM IST
ಕನ್ನಡದಲ್ಲಿ ಬಾಹುಬಲಿ ? ಸಿನಿಮಾ ನಿರ್ಮಾಣಕ್ಕೆ ಹೆಚ್'ಡಿಕೆ ಸಜ್ಜು !

ಸಾರಾಂಶ

ಹೆಚ್.ಡಿ. ಕುಮಾರಸ್ವಾಮಿಯವರ ಹಲವು ವರ್ಷಗಳ ಕನಸು ನನಸಾಗುವ ಸಮಯ ಬಂದಿದೆ. ಕನ್ನಡದಲ್ಲಿ ಬಾಹುಬಲಿಯಂಥ ಭಾರೀ ಬಜೆಟ್ ಸಿನಿಮಾ ಮಾಡೋಕೆ ಸಜ್ಜಾಗಿದ್ದಾರೆ ನಿರ್ಮಾಪಕ ಕುಮಾರಸ್ವಾಮಿ. ಈ ಅದ್ದೂರಿ ಸಿನಿಮಾಗೆ ಪುತ್ರ ನಿಖಿಲ್ ಕುಮಾರಸ್ವಾಮಿ ನಾಯಕ.

ಜಾಗ್ವರ್ ಸ್ಟಾರ್ ನಿಖಿಲ್ ಕುಮಾರಸ್ವಾಮಿ ಮತ್ತೆ ಸ್ಯಾಂಡಲ್'ವುಡ್ ನಲ್ಲಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಚೊಚ್ಚಲ ಚಿತ್ರದಿಂದಲೇ ಸ್ಟಾರ್ ಪಟ್ಟ ಅಲಂಕರಿಸಿದ ನಟ ನಿಖಿಲ್. ಜಾಗ್ವರ್ ಸಿನಿಮಾ ಮೂಲಕ ಯೂತ್'ಸ್ಟಾರ್ ಆಗಿರೋ ನಿಖಿಲ್ ಕುಮಾರಸ್ವಾಮಿ ಸದ್ಯ ಗಾಂಧಿನಗರದಲ್ಲಿ ತಮ್ಮದೆ ಬೇಡಿಕೆ ಹೊಂದಿದ್ದಾರೆ. ತಮ್ಮ ಹೋಂ ಬ್ಯಾನರ್'ನಲ್ಲಿ ನಿರ್ಮಾಣ ಆಗುತ್ತಿರುವ ಇನ್ನು ಹೆಸರಿಡದ ಚಿತ್ರದಲ್ಲಿ ನಿಖಿಲ್ ಬ್ಯುಜಿಯಾಗಿರುವ ಬೆನ್ನಲ್ಲೇ, ಮತ್ತೊಂದು ಬಿಗ್ ಬಜೆಟ್ ಸಿನಿಮಾಕ್ಕೆ ನಿಖಿಲ್ ಕುಮಾರಸ್ವಾಮಿ ಗ್ರಿನ್ ಸಿಗ್ನಲ್ ಕೊಟ್ಟಿದ್ದಾರೆ.

ನಾಡಪ್ರಭು ಕೆಂಪೇಗೌಡನಾಗಿ ನಿಖಿಲ್ ಕುಮಾರಸ್ವಾಮಿ. ಹೆಚ್.ಡಿ. ಕುಮಾರಸ್ವಾಮಿಯವರ ಹಲವು ವರ್ಷಗಳ ಕನಸು ನನಸಾಗುವ ಸಮಯ ಬಂದಿದೆ. ಕನ್ನಡದಲ್ಲಿ ಬಾಹುಬಲಿಯಂಥ ಭಾರೀ ಬಜೆಟ್ ಸಿನಿಮಾ ಮಾಡೋಕೆ ಸಜ್ಜಾಗಿದ್ದಾರೆ ನಿರ್ಮಾಪಕ ಕುಮಾರಸ್ವಾಮಿ. ಈ ಅದ್ದೂರಿ ಸಿನಿಮಾಗೆ ಪುತ್ರ ನಿಖಿಲ್ ಕುಮಾರಸ್ವಾಮಿ ನಾಯಕ. ನಾಡಪ್ರಭು ಕೆಂಪೇಗೌಡರ ಜೀವನಾಧಾರಿತ ಕತೆ ಇದಾಗಿದೆ. ನಿಖಿಲ್' ಕುಮಾರ ಸ್ವಾಮಿ, ಬೆಂಗಳೂರನ್ನ ಕಟ್ಟಿದ ಕೆಂಪೇಗೌಡನ ಪಾತ್ರವನ್ನ ಮಾಡಲಿದ್ದಾರೆ..ಬಾಹುಬಲಿ ಸಿನಿಮಾದ  ಸಿ ಜಿ ವರ್ಕ್​ ಮಾಡಿದ ರಾಘವ್ ಈ ಚಿತ್ರಕ್ಕೆ ಸಿ ಜಿ ವರ್ಕ್​ ಮಾಡಲಿದ್ದಾರೆ. ನಿರ್ದೇಶಕರ ಆಯ್ಕೆ ಇನ್ನೂ ಆಗಬೇಕಿದೆ. ಈ ಸಿನಿಮಾವನ್ನ ಕನ್ನಡ ಮತ್ತು ತೆಲುಗು ನಿರ್ಮಾಪಕರು ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಿದ್ದಾರೆ ಅಂತಲೂ ಕೂಡ ನಿಖಿಲ್ ಆಪ್ತವಲಯ ತಿಳಿಸಿದೆ.ಎಲ್ಲಾ ಅಂದು ಕೊಂಡಂತೆ ಆದರೆ ಮುಂದಿನ ವರ್ಷ ನಾಡಪ್ರಭು ಕೆಂಪೇಗೌಡ ಸಿನಿಮಾ ಸೆಟ್ಟೇರಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?