ಸಿನಿಮಾ ಕಿರು ಸುದ್ದಿಗಳು

Published : Sep 27, 2016, 06:08 PM ISTUpdated : Apr 11, 2018, 12:58 PM IST
ಸಿನಿಮಾ ಕಿರು ಸುದ್ದಿಗಳು

ಸಾರಾಂಶ

ಕಿರಿಕ್ ಪಾರ್ಟಿ ಶೂಟಿಂಗ್ ಕಂಪ್ಲೀಟ್

ಬೆಂಗಳೂರು: ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿ ಅಭಿನಯಿಸ್ತಿರುವ ಕಿರಿಕ್ ಪಾರ್ಟಿ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಕಾಲೇಜಿನಲ್ಲಿ ನಡಿಯೋ ಸ್ಟೋರಿ ಕಿರಿಕ್ ಪಾರ್ಟಿ ಚಿತ್ರದಲ್ಲಿದೆ. ರಿಕ್ಕಿ ಸಿನಿಮಾ ನಿರ್ದೇಶನ ಮಾಡಿದ್ದ ರಿಷಬ್ ಶೆಟ್ಟಿ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ರಕ್ಷಿತ್ ಕಾಲೇಜ್ ಹುಡುಗನಾಗಿ ಅಭಿನಯಿಸಿದ್ದಾರೆ. ರಕ್ಷಿತ್‌ಗೆ ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ ನಾಯಕಿಯರಾಗಿ ಅಭಿನಯಿಸಿದ್ದಾರೆ.

-------------------

ಶಿವಾಯ್ ಮೇಕಿಂಗ್
ಮುಂಬೈ: ಆಜಯ್ ದೇವಗನ್ ಅಭಿನಯದ ಶಿವಾಯ್ ಚಿತ್ರದ ಸಾಂಗ್ಸ್ ಮತ್ತು ಟ್ರೈಲರ್ ಸಖತ್ ಸದ್ದು ಮಾಡ್ತಿದೆ. ಇದೀಗ ಚಿತ್ರತಂಡ ಹಾಡಿನ ಮೇಕಿಂಗ್ ರಿಲೀಸ್ ಮಾಡಿದೆ. ಹರ್ ಹರ್ ಸಾಂಗ್ ನ ಸಿನಿಪ್ರಿಯರು ಇಷ್ಟಪಟ್ಟಿದ್ದಾರೆ. ಹಾಡಿನ ಮೇಕಿಂಗ್ ಕೂಡ ಅಭಿಮಾನಿಗಳಿಗೆ ಇಷ್ಟವಾಗೋದು ಗ್ಯಾರಂಟಿ. ಅಕ್ಟೋಬರ್ 28 ರಂದು ಚಿತ್ರ ರಿಲೀಸಾಗಲಿದೆ.

---------------

 ಪ್ರಭುದೇವ ಭರ್ಜರಿ ಸ್ಟೆಪ್
ಚೆನ್ನೈ :ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಅಭಿಮಾನಿಗಳಿಗೆ ಮತ್ತೆ ಕಿಕ್ ಕೊಡೋದಿಕ್ಕೆ ರೆಡಿಯಾಗಿದ್ದಾರೆ. ತಮಿಳು, ತೆಲುಗು, ಹಿಂದಿಯಲ್ಲಿ ಪ್ರಭುದೇವ ತಮನ್ನಾ ಆಮಿ ಜಾಕ್ಸನ್ ಅಭಿನಯದ ಸಿನಿಮಾ ರಿಲೀಸ್ ಗೆ ರೆಡಿಯಾಗ್ತಿದೆ. ತುಟಕ್ ತುಟಕ್ ತೂಟಿಯಾ ಟೈಟಲ್ ನಲ್ಲಿ ಹಿಂದಿಯಲ್ಲಿ ಸಿನಿಮಾ ರಿಲೀಸಾಗಲಿದೆ. ಈ ಚಿತ್ರದ ಸಾಂಗ್ ರಿಲೀಸಾಗಿದೆ. ಪ್ರಭುದೇವ ಹಾಡಿನಲ್ಲಿ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ.

-----------------

ಪಿಂಕ್ ಮೆಚ್ಚಿದ ಸಮಂತಾ
ಮುಂಬೈ: ಅಮಿತಾಬ್ ಬಚ್ಚನ್ ಅಭಿನಯದ ಪಿಂಕ್ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಗ್ತಿದೆ.ನಟಿ ಸಮಂತಾ ಈ ಚಿತ್ರವನ್ನು ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.ಪಿಂಕ್ ಬಗ್ಗೆ ಪ್ರತಿಕ್ರಿಯಿಸಿರುವ ಸಮಂತಾ ಈ ವರ್ಷದ ನೋಡಲೇಬೇಕಾದ ಸಿನಿಮಾ ಪಿಂಕ್ ಎಂದು ಟ್ವೀಟ್ ಮಾಡಿದ್ದಾರೆ.

--

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Toxic: ಯಶ್‌ಗಿಂತ ಯಾರು ದೊಡ್ಡವರು, ಯಾರು ಚಿಕ್ಕವರು? ಇಲ್ಲಿದೆ 5 ಹೀರೋಯಿನ್‌ಗಳ ಅಸಲಿ ವಯಸ್ಸು!
Hrithik Roshan Sussanne Khan Divirce Secret: ಆ 400 ಕೋಟಿ ಸೀಕ್ರೆಟ್ ಈಗ ಬಯಲಾಯ್ತು; ಹೃತಿಕ್-ಸುಸೇನ್ ಡಿವೋರ್ಸ್ ಕೇಸ್‌ನಲ್ಲಿ ನಿಜವಾಗಿ ನಡೆದಿದ್ದೇನು?