(ವಿಡಿಯೋ)ಶ್ರೀನಿವಾಸ ಕಲ್ಯಾಣದಲ್ಲಿ ಡಬ್ಬಲ್ ಮೀನಿಂಗೇ ಪ್ರಧಾನ: ಟ್ರೈಲರ್'ನಲ್ಲೂ ಕೇವಲ ಡಬ್ಬಲ್ ಮೀನಿಂಗ್!

Published : Feb 08, 2017, 08:41 AM ISTUpdated : Apr 11, 2018, 12:56 PM IST
(ವಿಡಿಯೋ)ಶ್ರೀನಿವಾಸ ಕಲ್ಯಾಣದಲ್ಲಿ ಡಬ್ಬಲ್ ಮೀನಿಂಗೇ ಪ್ರಧಾನ: ಟ್ರೈಲರ್'ನಲ್ಲೂ ಕೇವಲ ಡಬ್ಬಲ್ ಮೀನಿಂಗ್!

ಸಾರಾಂಶ

ಶ್ರೀನಿವಾಸ ಕಲ್ಯಾಣ... ಇಂಥದ್ದೊಂದು ಶೀರ್ಷಿಕೆ ಹೊಂದಿರುವ ಚಿತ್ರಕ್ಕೆ ಅಂಥ ಟ್ರೈಲರ್‌ ಬೇಕಿತ್ತೇ? ಎಂದು ಕೇಳಿಕೊಂಡವರೇ ಹೆಚ್ಚು. ಹಾಗೆ ಪ್ರಶ್ನಿಸುತ್ತಲೇ ಈ ಚಿತ್ರದ ಟ್ರೈಲರ್‌ ಅನ್ನು ಜನ ನೋಡಿದ್ದೇ ನೋಡಿದ್ದು. ಅಲ್ಲಿಗೆ ಚಿತ್ರತಂಡದ ಉದ್ದೇಶ ಈಡೇರಿತು. ಹುಡುಗಿ, ಕಾಲು- ಬೆರಳುಗಳ ಸಂದು ಎಂಬಿತ್ಯಾದಿ ಸಂಭಾಷಣೆಗಳಿಂದ ತುಂಬಿದ ‘ಶ್ರೀನಿವಾಸ ಕಲ್ಯಾಣ' ಚಿತ್ರದ ಟ್ರೈಲರ್‌ ಯೂಟ್ಯೂಬ್‌ಗೆ ಬಂದಿದೆ. ಟ್ರೈಲರ್‌ ಬಂದ ಕೆಲವೇ ದಿನಗಳಲ್ಲಿ ಅದರ ವೀಕ್ಷಕರ ಸಂಖ್ಯೆ 3.80 ಲಕ್ಷ ದಾಟಿದೆ. ಹಾಗೆ ನೋಡಿದರೆ ಡಬಲ್‌ ಮೀನಿಂಗ್‌ ಡೈಲಾಗ್‌ಗಳಿಂದ ಸೌಂಡು ಮಾಡುತ್ತಿರುವ ಈ ಟ್ರೈಲರ್‌ಗೂ ಮೊದಲೇ ಕೇವಲ ಸಿನಿಮಾ ಕಂಟೆಂಟ್‌ ಒಳಗೊಂಡ ಟೀಸರ್‌ ಬಿಡುಗಡೆ ಮಾಡಿದ್ದರು. ಆದರೆ, ಅದು ಹೆಚ್ಚಿನ ಜನ ತಲುಪಲೇ ಇಲ್ಲ. ಸಿನಿಮಾ ಬಿಡುಗಡೆಯ ಹತ್ತಿರಕ್ಕೆ ಬರುತ್ತಿರುವಾಗ ಯೋಚಿಸಿ ಒಂದು ಡಬಲ್‌ ಮೀನಿಂಗ್‌ ಸಂಭಾಷಣೆಗಳನ್ನು ಒಳಗೊಂಡ ಟ್ರೈಲರ್‌ ಬಿಟ್ಟಿದ್ದೇ ತಡ, ಕನ್ನಡದಲ್ಲಿ ‘ಶ್ರೀನಿವಾಸ ಕಲ್ಯಾಣ' ಎನ್ನುವ ಹೆಸರಿನಲ್ಲೊಂದು ಸಿನಿಮಾ ಬರುತ್ತಿದೆ ಎಂದು ಮಾತನಾಡಿಕೊಳ್ಳುವಷ್ಟರ ಮಟ್ಟಿಗೆ ಇದು ಸದ್ದು ಮಾಡಿತು. ಹೀಗಾಗಿ ಒಳ್ಳೆಯ ಹೆಸರಿನ ಚಿತ್ರಕ್ಕೆ ಡಬಲ್‌ ಮೀನಿಂಗ್‌ ಡೈಲಾಗ್‌ಗಳ ಟ್ರೈಲರ್‌ ಕೇವಲ ಮಾರುಕಟ್ಟೆಯ ತಂತ್ರ ಎಂಬುದನ್ನು ಚಿತ್ರದ ನಿರ್ದೇಶಕ ಕಂ ನಾಯಕ ನಟ ಶ್ರೀನಿ ಹೇಳಿಕೊಳ್ಳುತ್ತಾರೆ.

ಅವರ ತಮ್ಮ ಈ ಮಾತಿಗೆ ಪೂಕರವಾಗಿ ಈಗಷ್ಟೆಬಿಡುಗಡೆಯಾಗಿರುವ ಚಿತ್ರದ ಸ್ಕೂಲ್‌ ಹಾಡಿಗೆ ಬಂದಿರುವ ಯೂಟ್ಯೂಬ್‌ ಹಿಟ್ಸ್‌ ಲೆಕ್ಕ ಕೊಡುತ್ತಾರೆ. ಗಮನ ಸೆಳೆಯುವಂತಹ ಟ್ರೈಲರ್‌ ಬಂದ ಮೇಲೆ ಈ ಹಾಡಿಗೆ ಒಂದೇ ದಿನ ಒಂದು ಲಕ್ಷ ಹಿಟ್ಸ್‌ ಸಿಕ್ಕಿವೆಯಂತೆ. ಹೀಗೆ ಟ್ರೈಲರ್‌ ಮೂಲಕ ಮಾರುಕಟ್ಟೆಯ ತಂತ್ರಗಳನ್ನು ಅನುಸರಿಸುತ್ತಿರುವ ಶ್ರೀನಿ ನಿರ್ದೇಶನದ ‘ಶ್ರೀನಿವಾಸ ಕಲ್ಯಾಣ' ಸಿನಿಮಾ ಇದೇ ತಿಂಗಳು 17ಕ್ಕೆ ತೆರೆಗೆ ಬರುತ್ತಿದೆ. ಭರತ್‌ ಜೈಂಕಾರ್‌ ಸಾರಥ್ಯದಲ್ಲಿ ಶ್ರೀನಿ ಮತ್ತವರ ಗೆಳೆಯರೇ ಸೇರಿ ನಿರ್ಮಿಸಿರುವ ಈ ಚಿತ್ರದಲ್ಲಿ ನಿತ್ಯಾ ರಾವ್‌ ಹಾಗೂ ಕವಿತಾ ನಾಯಕಿಯರು. ‘ನಾನು ಯೂಟ್ಯೂಬ್‌ನಲ್ಲಿ ಬಿಟ್ಟಿರುವ ಟ್ರೈಲರ್‌ಗೆ ಕೇವಲ 400 ಡಿಸ್‌ಲೈಕ್‌ ಬಂದಿವೆ. ಆದರೆ, 4 ಸಾವಿರ ಜನ ಲೈಕ್‌ ಮಾಡಿದ್ದಾರೆ. ನಮ್ಮ ಚಿತ್ರ ಅಷ್ಟೂಜನಕ್ಕೆ ತಲುಪಿದೆ. ಇದೇ ಸಂಭ್ರಮದಲ್ಲಿ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ಟ್ರೈಲರ್‌ ನೋಡಿ ಸಿನಿಮಾ ಹೀಗೇ ಇರುತ್ತದೆ ಎನ್ನುವ ತೀರ್ಮಾನಕ್ಕೆ ಬರಬೇಡಿ. ಇದೊಂದು ಪಕ್ಕಾ ಲವ್‌ ಸ್ಟೋರಿ. ಫಿಲಾಸಪಿಕಲ್‌ ಆಗಿ ಸಾಗುತ್ತಲೇ ಮೋಕ್ಷವನ್ನು ಕಂಡುಕೊಳ್ಳುವ ಕತೆ ಇಲ್ಲಿದೆ' ಎನ್ನುತ್ತಾರೆ ನಟ ಕಂ ನಿರ್ದೇಶಕ ಶ್ರೀನಿ. ಹಾಗೆ ನೋಡಿದರೆ ಶ್ರೀನಿಗೆ ಇದು ಎರಡನೇ ಇನ್ನಿಂಗ್ಸ್‌. ಈ ಹಿಂದೆ ಉಪೇಂದ್ರ ಅಭಿನಯದ ‘ಟೋಪಿವಾಲ' ಚಿತ್ರ ನಿರ್ದೇಶಿಸಿದ್ದರು. ಇದಕ್ಕೂ ಮುನ್ನ ಟಿ ಪಿ ಕೈಲಾಸಂ ಅವರ ಬಗ್ಗೆ ಹಾಗೂ ರಸ್ತೆಗಳಲ್ಲಿ ಕಂಡು ಬರುವ ಹಂಫ್ಸ್‌ಗಳ ಕುರಿತು ಸಾಕ್ಷ್ಯ ಚಿತ್ರ ಮಾಡಿದ್ದಾರೆ. ಆರ್‌ಜೆ ಅನುಭವ, ಸಿನಿಮಾ ಫ್ಯಾಷನ್‌ ಈ ಎರಡೂ ಸೇರಿ ಶ್ರೀನಿ, ನಿರ್ದೇಶಕನಾಗುವಂತೆ ಮಾಡಿವೆ. ಫೆ.17ಕ್ಕೆ ತೆರೆಗೆ ಬರುತ್ತಿರುವ ಶ್ರೀನಿಯ ಕಲ್ಯಾಣೋತ್ಸವ ಹೇಗಿರುತ್ತದೆಂಬುದನ್ನು ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!