ಧುರಂಧರ್ 3 ಬರೋದಿಲ್ಲ, 8 ಗಂಟೆಯಲ್ಲಿ ನನ್ನ ಕಥೆ ಹೇಳಿ ಮುಗಿಸಿದ್ದೇನೆ: ಆದಿತ್ಯ ಧರ್‌

Published : Mar 25, 2026, 04:21 PM IST
Dhurandhar 2

ಸಾರಾಂಶ

ನನಗೆ ಹೇಳಬೇಕಿದ್ದ ಕಥೆಯನ್ನು 8 ಗಂಟೆಗಳಲ್ಲಿ ಎರಡು ಭಾಗಗಳಲ್ಲಿ ಹೇಳಿ ಮುಗಿಸಿದ್ದೇನೆ. ಕಥೆಯೇ ಇಲ್ಲದೇ ಸಿನಿಮಾವನ್ನು ಅನವಶ್ಯಕ ಎಳೆದಾಡುವುದರಲ್ಲಿ ಅರ್ಥವಿಲ್ಲ. ಹಾಗೆ ಮಾಡಬಾರದು ಎಂದಿದ್ದಾರೆ ಆದಿತ್ಯ ಧರ್‌.

ಕೆಲವು ದಿನಗಳಿಂದ ‘ಧುರಂಧರ್‌’ ಮೂರನೇ ಭಾಗವೂ ಬರುತ್ತದೆ. ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾ ಬಿಡುಗಡೆಯಾಗುವ ಅವಧಿಯಲ್ಲೇ ಸಿನಿಮಾ ತೆರೆ ಕಾಣಲಿದೆ ಎಂಬ ಗಾಸಿಪ್‌ ಹರಡಿತ್ತು. ಇದೀಗ ‘ಧುರಂಧರ್ 3’ ಮಾಡಲ್ಲ ಎಂದು ನಿರ್ದೇಶಕ ಆದಿತ್ಯ ಧರ್‌ ಸ್ಪಷ್ಟನೆ ನೀಡಿದ್ದಾರೆ. ನಿರ್ದೇಶಕ ಆದಿತ್ಯ ಧರ್‌, ‘ಧುರಂಧರ್‌ 3 ಸಿನಿಮಾದ ಯಾವ ಯೋಚನೆಯೂ ಇಲ್ಲ.

ನನಗೆ ಹೇಳಬೇಕಿದ್ದ ಕಥೆಯನ್ನು 8 ಗಂಟೆಗಳಲ್ಲಿ ಎರಡು ಭಾಗಗಳಲ್ಲಿ ಹೇಳಿ ಮುಗಿಸಿದ್ದೇನೆ. ಕಥೆಯೇ ಇಲ್ಲದೇ ಸಿನಿಮಾವನ್ನು ಅನವಶ್ಯಕ ಎಳೆದಾಡುವುದರಲ್ಲಿ ಅರ್ಥವಿಲ್ಲ. ಹಾಗೆ ಮಾಡಬಾರದು’ ಎಂದಿದ್ದಾರೆ. ‘ರಣವೀರ್‌ ಸಿಂಗ್ ನಟನೆಯ ‘ಧುರಂಧರ್‌ 2’ ಸಿನಿಮಾ ವಾರದೊಳಗೆ 850 ಕೋಟಿ ರು. ಗಳಿಕೆ ಮಾಡಿ 1000 ಕೋಟಿ ರು. ಕ್ಲಬ್‌ನತ್ತ ಮುನ್ನುಗ್ಗುತ್ತಿದೆ.

ಧುರಂಧರ್ 2 ಪ್ರತಿಯೊಬ್ಬ ಭಾರತೀಯ ನೋಡಬೇಕಾದ ಸಿನಿಮಾ

‘ಧುರಂಧರ್‌ 2 ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ’ ಎಂದು ರಜನಿಕಾಂತ್‌ ಟ್ವೀಟ್‌ ಮಾಡಿದ್ದಾರೆ. ‘ಬಾಕ್ಸಾಫೀಸ್‌ ಸುಲ್ತಾನ್‌’ ಎಂದು ಸಿನಿಮಾವನ್ನು ಅಭಿನಂದಿಸಿದ್ದಾರೆ. ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಆದಿತ್ಯ ಧರ್‌, ‘ನಿಮ್ಮ ಈ ಮಾತು ನನ್ನ ಬದುಕಿನ ಅತಿದೊಡ್ಡ ‘ಸೂಪರ್‌ಸ್ಟಾರ್‌’ ಕ್ಷಣ. ನಿಮ್ಮ ಆಶೀರ್ವಾದ ನನ್ನಂಥವರಿಗೆ ದೊಡ್ಡ ದೊಡ್ಡ ಕನಸು ಕಾಣುವಂತೆ ಪ್ರೇರೇಪಿಸುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರೀಮಿಯರ್‌ ಶೋನಿಂದಲೇ ರೂ.60 ಕೋಟಿ ಕಲೆಕ್ಷನ್‌

ರಣವೀರ್‌ ಸಿಂಗ್‌ ನಟನೆಯ ‘ಧುರಂಧರ್‌ 2’ ಸಿನಿಮಾದ ಪ್ರೀ ಬುಕಿಂಗ್‌ ಆರಂಭವಾಗಿಲ್ಲ. ಮಾ.18ರ ಪ್ರೀಮಿಯರ್‌ ಶೋಗಳಿಗಷ್ಟೇ ಪ್ರೀ ಬುಕಿಂಗ್‌ ತೆರೆಯಲಾಗಿದೆ. ಪ್ರೀಮಿಯರ್‌ ಶೋ ಬುಕಿಂಗ್‌ನಿಂದಲೇ ಸಿನಿಮಾದ ಕಲೆಕ್ಷನ್‌ 60 ಕೋಟಿ ರು. ದಾಟಿದೆ. ಭಾರತದಲ್ಲಿ ಪ್ರೀಮಿಯರ್‌ ಶೋದ 4.6 ಲಕ್ಷಕ್ಕೂ ಅಧಿಕ ಟಿಕೆಟ್‌ಗಳ ಮಾರಾಟವಾಗಿದೆ. ಬಹುತೇಕ ಕಡೆಗಳಲ್ಲಿ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ. ಇನ್ನೊಂದೆಡೆ ಧುರಂಧರ್‌ ಮೊದಲ ಭಾಗವೂ ಮತ್ತೆ ಥೇಟರಿನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

6 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
ರಶ್ಮಿಕಾ-ವಿಜಯ್ ಹನಿಮೂನ್ ರೊಮಾನ್ಸ್ ವಿಡಿಯೋ ವೈರಲ್.. ಖಾಸಗಿ ಕ್ಷಣಗಳ ಖುಷಿಯನ್ನೂ ಫ್ಯಾನ್ಸ್‌ಗೆ ಹಂಚಿದ ಜೋಡಿ!