
ಮುಂಬೈ(ಅ.17): ಟೀಮ್ ಇಂಡಿಯಾದ ಸಿಮೀತ ಓವರ್ ತಂಡದ ನಾಯಕ ಎಂ.ಎಸ್.ಧೋನಿ ಜೀವನ ಆಧಾರಿತ ‘ಎಂ.ಎಸ್. ಧೋನಿ ದಿ ಅನ್ ಟೋಲ್ಡ್ ಸ್ಟೋರಿ' ಹಿಂದಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರೀ ಸದ್ದು ಮಾಡಿದೆ.
ಸೆಪ್ಟಂಬರ್ 30ರಂದು ವಿಶ್ವಾದ್ಯತ 61 ರಾಷ್ಟ್ರಗಳಲ್ಲಿ ತೆರೆ ಕಂಡ ಧೋನಿ ಚಿತ್ರ ಇಲ್ಲಿಯವರೆಗೂ 204 ಕೋಟಿಗಿಂತ ಹೆಚ್ಚು ಹಣ ಗಳಿಸಿದ್ದು, 200 ಕೋಟಿ ಕ್ಲಬ್ಗೆ ಸೇರಿದೆ. ಬಾಲಿವುಡ್ ನಲ್ಲಿ ಖಾನ್ ಗಳ ಚಿತ್ರ ಮಾತ್ರ ಸ್ಥಾನ ಪಡೆದಿದ ಕ್ಲಬ್ ನಲ್ಲಿ ಧೋನಿ ಚಿತ್ರವು ಸ್ಥಾನ ಪಡೆದುಕೊಂಡಿದೆ.
ಚಿತ್ರವನ್ನು ನೀರಜ್ ಪಾಂಡೆ ನಿರ್ದೇಶಿಸಿದ್ದು, ಸುಶಾಂತ್ ಸಿಂಗ್ ರಜಪೂತ್ ಧೋನಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಧೋನಿ ಹುಟ್ಟಿನಿಂದ ಹಿಡಿದು ಟೀಮ್ ಇಂಡಿಯಾದ ನಾಯಕನಾಗಿ ವಿಶ್ವಕಪ್ ಗೆಲ್ಲಿಸಿಕೊಡುವ ತನಕದ ನಡೆದು ಬಂದ ಹಾದಿಯಲ್ಲಿ ಚಿತ್ರದಲ್ಲಿ ತೋರಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.