ಪೊರಕೆ ಟ್ರೋಲ್; ಮುನಿದ ಪತ್ನಿಯನ್ನು ರಮಿಸಿದ ಧರ್ಮೇಂದ್ರ

Published : Jul 18, 2019, 11:33 AM IST
ಪೊರಕೆ ಟ್ರೋಲ್; ಮುನಿದ ಪತ್ನಿಯನ್ನು ರಮಿಸಿದ ಧರ್ಮೇಂದ್ರ

ಸಾರಾಂಶ

ಸ್ವಚ್ಛ ಭಾರತ ಅಭಿಯಾನದಡಿ ಸಂಸತ್ತಿನ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತೆಯೆಡೆಗೆ ನಮ್ಮ ನಡಿಗೆಯಲ್ಲಿ ಇಲ್ಲದ ಕಸ ಗುಡಿಸಿದ ಸಂಸದೆ ಹೇಮಾ ಮಾಲಿನಿ ಕಾಲೆಳೆದಿದ್ದಾರೆ ಪತಿ ಧರ್ಮೇಂದ್ರ. 

ಇತ್ತೀಚೆಗಷ್ಟೇ ಸ್ವಚ್ಛ ಭಾರತ ಅಭಿಯಾನದಡಿ ಸಂಸತ್ತಿನ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತೆಯೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಇಲ್ಲದ ಕಸ ಗುಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೆ ಆಹಾರವಾಗಿದ್ದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಬಗ್ಗೆ ಅವರ ಪತಿ ಧರ್ಮೇಂದ್ರ ಕಾಲೆಳೆದಿದ್ದರು. 

 

ನಿಜ ಜೀವನದಲ್ಲಿ ಹೇಮಾಮಾಲಿನಿ ಯಾವತ್ತಾದರೂ ಪೊರಕೆ ಹಿಡಿದಿದ್ದಾರಾ ಎಂದು ಧರ್ಮೇಂದ್ರರನ್ನು ಪ್ರಶ್ನಿಸಿದಾಗ, ‘ ಸಿನಿಮಾಗಳಲ್ಲಿ ಪೊರಕೆ ಹಿಡಿದಿದ್ದಾರೆ. ಆದರೆ ಮನೆಯಲ್ಲಿ ಹಿಡಿದಿದ್ದು ನಾನು ನೋಡಿಲ್ಲ. ನಾನು ಚಿಕ್ಕವನಿದ್ದಾಗ ಮನೆಗೆಲಸದಲ್ಲಿ ಅಮ್ಮನಿಗೆ ಹೆಲ್ಪ್ ಮಾಡುತ್ತಿದ್ದೆ. ಹಾಗಾಗಿ ಕಸ ಗುಡಿಸಲು ನನಗೆ ಬರುತ್ತದೆ ಎಂದು ಧರ್ಮೇಂದ್ರ’ ಕಾಲೆಳೆದಿದ್ದರು.

ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಾ, ಅವರು ಹೆಣ್ಣು ಎನ್ನುವ ಕಾರಣಕ್ಕೆ ಪೊರಕೆ ಹಿಡಿಯುವುದು ಗೊತ್ತಿರಬೇಕು ಎಂದೇನಿಲ್ಲ ಎಂದು ಹೇಳಿದ್ದಾರೆ. 

ಕೂಡಲೇ ಧರ್ಮೇಂದ್ರ ಪತ್ನಿಯ ಕ್ಷಮೆಯಾಚಿಸಿದ್ದಾರೆ. ‘ ನಾನು ಏನೋ ಹೇಳಲು ಹೋಗುತ್ತೇನೆ. ನಮ್ಮ ಸ್ನೇಹಿತರು ಇನ್ನೇನೋ ಅರ್ಥ ಮಾಡಿಕೊಳ್ಳುತ್ತಾರೆ. ನಾನೇನೇ ಹೇಳಿದ್ದರೂ ಕ್ಷಮೆಯಾಚಿಸುತ್ತೇನೆ. ಇನ್ನೊಮ್ಮೆ ಇದು ರಿಪೀಟ್ ಆಗುವುದಿಲ್ಲ ಎಂದಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!