ವಿಜಯ್‌ ಬಳಿಕ ಮತ್ತೊಬ್ಬ ಸ್ಟಾರ್ ನಟ ರಾಜಕಾರಣಕ್ಕೆ ಎಂಟ್ರಿ?‌ ಬೆಚ್ಚಿಬಿದ್ದ TVK , ಕುತೂಹಲ ಮೂಡಿಸಿದ ನಡೆ

Published : Oct 21, 2026, 03:51 PM IST
Actor Dhanush and Thalapathy Vijay

ಸಾರಾಂಶ

ದಳಪತಿ ವಿಜಯ್ ಬಳಿಕ ಇದೀಗ ನಟ ಧನುಷ್ ತಮಿಳುನಾಡು ರಾಜಕಾರಣಕ್ಕೆ ಪ್ರವೇಶಿಸಲಿದ್ದಾರೆ ಎಂಬ ಊಹಾಪೋಹಗಳು ತೀವ್ರಗೊಂಡಿವೆ. ಇತ್ತೀಚೆಗೆ ಅವರ ಅಭಿಮಾನಿಗಳ ಸಂಘವನ್ನು 'ಧನುಷ್ ನರಪಾನಿ ಇಯಕ್ಕಂ' ಎಂದು ಮರುನಾಮಕರಣ ಮಾಡಲಾಗಿದ್ದು, ಇದು ರಾಜಕೀಯ ಪ್ರವೇಶದ ಸುಳಿವು ಎನ್ನಲಾಗುತ್ತಿದೆ.

ಚೆನ್ನೈ: ದಳಪತಿ ವಿಜಯ್‌ ಬಳಿಕ ತಮಿಳುನಾಡು ರಾಜಕಾರಣಕ್ಕೆ ಮತ್ತೊಬ್ಬ ಸೂಪರ್‌ ಸ್ಟಾರ್‌ ಎಂಟ್ರಿ ಆಗುವ ಬಗ್ಗೆ ಮಾತುಕತೆಗಳು ಜೋರಾಗಿವೆ. ವಿಜಯ್‌ ರಾಜಕೀಯಕ್ಕೆ ಎಂಟ್ರಿ ನೀಡಿ, ರಾಜ್ಯದ ಸಿಎಂ ಆಗಿ ರಾಜ್ಯಭಾರ ನಡೆಸ್ತಿದ್ದಾರೆ. ಲೇಟೆಸ್ಟ್‌ ವಿಷಯ ಏನೆಂದರೆ.. ಚಿತ್ರರಂಗದ ಮತ್ತೊಬ್ಬ ಸ್ಟಾರ್ ನಟ ವಿಜಯ್‌ ಅವರ ಹಾದಿಯನ್ನೇ ತುಳಿಯಲಿದ್ದಾರೆ ಎಂದ ಚರ್ಚೆಗಳು ಜೋರಾಗಿವೆ. ಅವರು ಬೇರೆ ಯಾರೂ ಅಲ್ಲ. ʼಕೊಲವೆರಿ ಡಿʼ ಸ್ಟಾರ್‌, ರಾಷ್ಟ್ರಪತಿ ಪ್ರಶಸ್ತಿ ವಿಜೇತ ಧನುಷ್!

ರಾಜಕಾರಣಕ್ಕೆ ಧನುಷ್‌ ಎಂಟ್ರಿ?

ಧನುಷ್‌ ಅವರು ರಾಜಕಾರಣಕ್ಕೆ ಬರಲಿದ್ದಾರೆ ಎಂಬ ಊಹಾಪೋಹಗಳು ಕಳೆದ ಒಂದೂವರೆ ತಿಂಗಳಿನಿಂದ ಚಿಕ್ಕದಾಗಿ ಹರಿದಾಡುತ್ತಿದ್ದವು. ಇದೀಗ ಅದು ದೊಡ್ಡಮೊಟ್ಟದಲ್ಲಿ ಶುರುವಾಗಿದೆ. ಅದಕ್ಕೆ ಕಾರಣ ಧನುಷ್‌ ಅವರು ಇತ್ತೀಚೆಗೆ ಪರೋಕ್ಷವಾಗಿ ನೀಡುತ್ತಿರುವ ಸುಳಿವುಗಳು. ಇತ್ತೀಚೆಗೆ ಕೊಯಮತ್ತೂರಿನಲ್ಲಿ ಸಭೆ ಒಂದು ನಡೆದಿದೆ. ಈ ವೇಳೆ ತಮ್ಮ ಅಭಿಮಾನಿಗಳ ಸಂಘವನ್ನು ʼಧನುಷ್‌ ನರಪಾನಿ ಇಯಕ್ಕಂ (ಧನುಷ್‌ ಕಲ್ಯಾಣ ಚಳವಳಿ) ಎಂದು ಮರು ನಾಮಕರಣ ಮಾಡಲಾಗಿದೆ. ಸಭೆಯಲ್ಲಿ 3000 ಸಾವಿರ ಪದಾಧಿಕಾರಿಗಳು ಭಾಗವಹಿಸಿದ್ದರು. ಈ ವೇಳೆ ಶಿಸ್ತು, ಜನರ ಕಲ್ಯಾಣ ಕಾರ್ಯಕ್ರಮ ಮತ್ತು ಸಾಮಾಜಿಕ ಜವಾಬ್ದಾರಿಯ ಬಗ್ಗೆ ಒತ್ತು ನೀಡಲಾಗಿದೆ ಎಂದು ಹೇಳಲಾಗಿದೆ.

ಕೆಲವು ವರದಿಗಳ ಪ್ರಕಾರ ಈ ಸಭೆಯಲ್ಲಿ ಧನುಷ್‌ ಇರಲಿಲ್ಲ. ಇನ್ನು ರಾಜಕೀಯ ಎಂಟ್ರಿ ವದಂತಿ ಬಗ್ಗೆ ನಟನಿಂದ ಯಾವುದೇ ಹೇಳಿಕೆ ಬಂದಿಲ್ಲ. ಜೊತೆಗೆ ರಾಜಕೀಯ ಚಟುವಟಿಕೆಯ ಬಗ್ಗೆಯೂ ಯಾವುದೇ ಅಧಿಕೃತ ಹೇಳಿಕೆಗಳು ಇಲ್ಲ. ಆದರೆ.. ತಮಿಳುನಾಡು ರಾಜಕಾರಣದಲ್ಲಿ ಧನುಷ್‌ ಹೆಸರು ಮುನ್ನೆಲೆ ಬಂದಿರೋದು ಸತ್ಯ. ಈ ಹಿಂದಿನ ಸ್ಥಳೀಯ ವರದಿಗಳ ಪ್ರಕಾರ... ಧನುಷ್ ಚುನಾವಣಾ ಆಯೋಗದಲ್ಲಿ 'ತಮಿಳಗ ಎಲುಚಿ ಕಲಗಂ' ಎಂಬ ಹೆಸರಿನಲ್ಲಿ ಹೊಸ ರಾಜಕೀಯ ಪಕ್ಷ ನೋಂದಾಯಿಸಿದ್ದಾರೆ ಎಂದಿದ್ದವು. ಕೊನೆಗೆ ಅದು ಆಧಾರರಹಿತ ಸುದ್ದಿಗಳು ಹೇಳಲಾಗಿತ್ತು. ಧನುಷ್‌ ಚುನಾವಣಾ ಆಯೋಗವನ್ನು ಸಂಪರ್ಕ ಮಾಡಿಲ್ಲ. ಇದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುವ ಕಟ್ಟುಕತೆ ಎನ್ನಲಾಗಿತ್ತು.

ಧನುಷ್‌ ಸುದ್ದಿ ಮೂಲಗಳು ಏನು ಹೇಳ್ತಿವೆ?

ವೆಲ್ಫೇರ್ ಕ್ಲಬ್ ಚಟುವಟಿಕೆಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಬಾರದು. ಧನುಷ್ ರಾಜಕೀಯದಿಂದ ದೂರ ಇದ್ದಾರೆ. ಅವರು ತಮ್ಮ ಸಿನಿಮಾ ಪ್ಲಾನ್‌ಗಳು ಹಾಗೂ ಸಮಾಜ ಕಲ್ಯಾಣ ಕಾರ್ಯಗಳ ಮೇಲೆ ಗಮನ ಹರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಧನುಷ್‌ ರಾಜಕಾರಣದ ಬಗ್ಗೆ ಟಿವಿಕೆ ಪ್ರತಿಕ್ರಿಯೆ

ಧನುಷರ್‌ ರಾಜಕಾರಣ ಬಗ್ಗೆ ಪ್ರತಿಕ್ರಿಯಿಸಿರುವ ಟಿವಿಕೆ ಪಕ್ಷ.. ರಾಜಕೀಯ ನವೋದ್ಯಮಗಳಿಗೆ ಟಿವಿಕೆ ಸ್ಫೂರ್ತಿಯಾಗಿದೆ. ಇದು ತುಂಬಾ ಖುಷಿಯ ವಿಚಾರ. ವಿಜಯ್ ಇದಕ್ಕಾಗಿ 30 ವರ್ಷಗಳ ಕಾಲ ಕೆಲಸ ಮಾಡಿದರು. ಇದು ಸುಲಭವಲ್ಲ. ಪರ್ಯಾಯ ರಾಜಕೀಯ ಶಕ್ತಿಗಳು ಹೊರಹೊಮ್ಮಬಹುದಾದರೂ, ಅವುಗಳ ಶಕ್ತಿ ಮತ್ತು ತಮ್ಮನ್ನು ತಾವು ಉಳಿಸಿಕೊಳ್ಳುವ ಸಾಮರ್ಥ್ಯವು ಮುಖ್ಯ. ವಿಜಯ್ ಅವರ ವಿಧಾನವು ಭವಿಷ್ಯದಲ್ಲಿ ಅಭ್ಯರ್ಥಿಗಳಿಗೆ ಒಂದು ಮಾದರಿಯಾಗಬಹುದು. ರಾಜಕೀಯ ಪಕ್ಷವನ್ನು ನಡೆಸುವುದು, ಚುನಾವಣೆಗಳನ್ನು ಗೆಲ್ಲುವುದು ಅಷ್ಟು ಸುಲಭ ಇಲ್ಲ. ಅದಕ್ಕೆ ಬದ್ಧತೆ ಬೇಕು ಎಂದಿದೆ.

ಧನುಷ್ ಅವರ ಮೂಲ ಹೆಸರು ವೆಂಕಟೇಶ್ ಪ್ರಭು. ಧನುಷ್‌ ಅನ್ನೋದು ಅವರ ರಂಗನಾಮ. ನಟ, ನಿರ್ಮಾಪಕ, ಗೀತರಚನೆಕಾರ ಮತ್ತು ಹಿನ್ನೆಲೆ ಗಾಯಕ. 2011ರಲ್ಲಿ ತಮಿಳು ಚಿತ್ರ ಆಡುಕಲಂ ಗಾಗಿ ಅತ್ಯುತ್ತಮ ನಟನಿಗಾಗಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದರು. ಅದೇ ವರ್ಷ ತಮ್ಮ ವೈ ದಿಸ್ ಕೊಲವೆರಿ ಡಿ ಹಾಡಿನ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದರು. ಧನುಷ್‌ಗೆ ಆರು ರಾಷ್ಟ್ರೀಯ ಪ್ರಶಸ್ತಿಗಳು ಒಲಿದಿವೆ. 2026 ರಲ್ಲಿ ಧನುಷ್ ಅವರ ನಿವ್ವಳ ಮೌಲ್ಯ ಸುಮಾರು ₹230 ಕೋಟಿ ಅಥವಾ ಸರಿಸುಮಾರು $27-28 ಮಿಲಿಯನ್ ಆಗಿದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಾನಕೋಗಿಲೆ ಪಾತ್ರಕ್ಕೆ ಈ ಕನ್ನಡ ನಟಿಗೆ ಬಿಗ್ ಆಫರ್? ಪಿ. ಸುಶೀಲಾ ಬಯೋಪಿಕ್‌ನಲ್ಲಿ ಬಿಗ್ ಸರ್ಪ್ರೈಸ್!
'ದುನಿಯಾ'ಗೆ ಸಿಗಲಿಲ್ಲ ನಯಾಪೈಸೆ ಸಂಭಾವನೆ.. ಸಿನಿಮಾ ಹಿಟ್ ಆದ್ಮೇಲೆ ಮಾಡಿದ ಆ ಒಂದು ತಪ್ಪಿನ ಬಗ್ಗೆ ನಟಿ ರಶ್ಮಿ ಓಪನ್ ಟಾಕ್!