ಯಶ್-ರಾಧಿಕಾ ಮದುವೆಗೆ ಖರ್ಚಾಗಿದ್ದು ಎಷ್ಟು ? ಹನಿಮೂನ್ ಎಷ್ಟುದಿನ ಗೊತ್ತಾ ?

Published : Dec 23, 2016, 04:43 PM ISTUpdated : Apr 11, 2018, 12:44 PM IST
ಯಶ್-ರಾಧಿಕಾ ಮದುವೆಗೆ ಖರ್ಚಾಗಿದ್ದು ಎಷ್ಟು ? ಹನಿಮೂನ್ ಎಷ್ಟುದಿನ ಗೊತ್ತಾ ?

ಸಾರಾಂಶ

ಆದರೆ ಇಷ್ಟು ಅದ್ದೂರಿಯಾಗಿ ನಡೆದ ಮದುವೆಗೆ ಎಷ್ಟು ಹಣ ಖರ್ಚಾಗಿದೆ ಎಂಬ ಕುತೂಹಲ ಅಭಿಮಾನಿಗಳನ್ನು ಒಳಗೊಂಡು ಪ್ರತಿಯೊಬ್ಬರಿಗೂ ಇದ್ದೇಇದೆ.

ಬೆಂಗಳೂರು(ಡಿ.23): ಸ್ಯಾಂಡಲ್'ವುಡ್'ನ ಸ್ಟಾರ್ ನಟರು ಹಾಗೂ ಪ್ರೇಮಿಗಳಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ಮೊಗ್ಗಿನ ಮನಸಿನ ಚಲುವೆ ರಾಧಿಕಾ ಪಂಡಿತ್ ಅವರ ವಿವಾಹ ಡಿ.5 ರಿಂದ 3 ದಿನಗಳ ಕಾಲ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ಹಾಗೂ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿತು.

ಸ್ಟಾರ್ ನಟರ ಮದುವೆಗೆ ಕನ್ನಡದ ಅತಿರಥ, ಮಹಾರಥ ಸ್ಟಾರ್'ಗಳಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯರಾದಿಯಾಗಿ ಸಾವಿರಾರು ಗಣ್ಯರು, ಅಭಿಮಾನಿಗಳು ಆಗಮಿಸಿ ನೂತನ ದಂಪತಿಗಳಿಗೆ ಶುಭಕೋರಿದರು.

ಆದರೆ ಇಷ್ಟು ಅದ್ದೂರಿಯಾಗಿ ನಡೆದ ಮದುವೆಗೆ ಎಷ್ಟು ಹಣ ಖರ್ಚಾಗಿದೆ ಎಂಬ ಕುತೂಹಲ ಅಭಿಮಾನಿಗಳನ್ನು ಒಳಗೊಂಡು ಪ್ರತಿಯೊಬ್ಬರಿಗೂ ಇದ್ದೇಇದೆ.

ಯಶ್ ಮದುವೆಗೆ ಖರ್ಚಾಗಿದ್ದು ಬರೋಬ್ಬರಿ 2 ಕೋಟಿ. ಯಶ್ ಅವರ ಸ್ನೇಹಿತರು ಹಾಗೂ ಆಪ್ತರು ಇದನ್ನು ಖಚಿತ ಪಡಿಸಿದ್ದಾರೆ. ಈ 2 ಕೋಟಿ ರೂಗಳಲ್ಲಿ ಹೆಚ್ಚಾಗಿ ಅರುಣ್ ಸಾಗರ್ ಅವರು ನಿರ್ಮಿಸಿದ್ದ ಸೆಟ್, ಒಡವೆ ವಸ್ತ್ರಗಳು ಹಾಗೂ ಭೋಜನ ವ್ಯವಸ್ಥೆಗೆ ಖರ್ಚಾಗಿದೆ. ಯಶ್ ಅವರ ವಸ್ತ್ರವಿನ್ಯಾಸವನ್ನು ಮಲ್ಹೊತ್ರ ಹಾಗೂ ರಾಧಿಕಾ ವಸ್ತ್ರವನ್ನು ಸಾನಿಯಾ ಸರ್ದಾರಿಯಾ ವಿನ್ಯಾಸಿದ್ದರು.

ಹನಿಮೂನ್ 18 ದಿನ

ನವದಂಪತಿಗಳ ಹನಿಮೂನ್ 18 ದಿನಗಳು ನಡೆಯಲಿದ್ದು, ಪ್ರಸ್ತುತ ರಾಧಿಕಾ ಹಾಗೂ ಯಶ್ ಅಮೆರಿಕಾದಲ್ಲಿದ್ದಾರೆ. ಅಮೆರಿಕಾದ ಪ್ರವಾಸಿ ತಾಣಗಳನ್ನು ಸುತ್ತಾಡಿ, ಯೂರೋಪ್'ಗೆ ತೆರಳುವ ಸಾಧ್ಯತೆಯಿದೆ.

ಇತರ ಅದ್ದೂರಿ ಮದುವೆಗಳು

ಯಶ್ ಹಾಗೂ ರಾಧಿಕಾ ವಿವಾಹಗಳಲ್ಲದೆ ಚಿರಂಜೀವಿ ಪುತ್ರಿ ಶ್ರೀಜಾ, ದೀಪೀಕಾ ಕಾಮಯ್ಯ ಹಾಗೂ ಕ್ರಿಕೆಟಿಗ ಯೋಗರಾಜ್ ಸಿಂಗ್ ಈ ವರ್ಷದ ಅದ್ದೂರಿ ವಿವಾಹಗಳು

       

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಬಾಕ್ಸ್‌ ಆಫೀಸ್‌ ಸುಲ್ತಾನ್' ಆಗ್ಬಿಟ್ಟ ರಣವೀರ್ ಸಿಂಗ್.. 1000 ಕೋಟಿ ಕ್ಲಬ್‌ನತ್ತ ಓಡುತ್ತಿರುವ 'ಧುರಂಧರ್'..!
ಹೈದರಾಬಾದ್‌ನಲ್ಲಿ ಸಿಗ್ತಿರೋ ಪ್ರೀತಿ-ಗೌರವ ಕನ್ನಡನಾಡಿನಲ್ಲಿ ಸಿಗ್ತಿಲ್ಲ.. ದೀಕ್ಷಿತ್ ಶೆಟ್ಟಿ ಈ ಬಗ್ಗೆ ಏನೆಲ್ಲಾ ಹೇಳಿದ್ರು?