ದಸರಾ ದಿನವೇ ಮಗಳ ಹೆಸರು ಪ್ರಕಟಿಸಿದ ದೀಪಿಕಾ-ರಣ್‌ವೀರ್: ಎರಡನೇ ಮಗಳಿಗೆ ಸ್ಟಾರ್‌ ಜೋಡಿ ಇಟ್ಟ ಹೆಸರೇನು ಗೊತ್ತಾ?

Published : Oct 20, 2026, 09:09 PM ISTUpdated : Oct 20, 2026, 09:10 PM IST
Deepika Padukone and Ranveer Singh

ಸಾರಾಂಶ

ಬಾಲಿವುಡ್ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್ ಸಿಂಗ್ ವಿಜಯದಶಮಿ ಹಬ್ಬದಂದು ತಮ್ಮ ಎರಡನೇ ಹೆಣ್ಣು ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಕುಟುಂಬದ ಸುಂದರ ಫೋಟೋ ಹಂಚಿಕೊಂಡಿರುವ ದಂಪತಿ, ಮಗುವಿಗೆ 'ದೇವಿ' ಎಂದು ನಾಮಕರಣ ಮಾಡಿದ್ದಾರೆ.

ಮುಂಬೈ (ಅ.20): ಬಾಲಿವುಡ್‌ನ ಜನಪ್ರಿಯ ಹಾಗೂ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್ ಸಿಂಗ್ ದಂಪತಿ ವಿಜಯದಶಮಿ ಹಬ್ಬದ ಶುಭ ದಿನದಂದು ಸಿಹಿ ಸುದ್ದಿ ನೀಡಿದ್ದಾರೆ. ಇತ್ತೀಚೆಗಷ್ಟೇ ಜನಿಸಿದ್ದ ತಮ್ಮ ಎರಡನೇ ಹೆಣ್ಣು ಮಗುವಿಗೆ 'ದೇವಿ' (Devi) ಎಂದು ನಾಮಕರಣ ಮಾಡಿರುವುದಾಗಿ ಈ ದಂಪತಿ ಸೋಶಿಯಲ್‌ ಮೀಡಿಯಾದಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈಗಾಗಲೇ 'ದುವಾ' (Dua) ಎಂಬ ಹಿರಿಯ ಹೆಣ್ಣು ಮಗಳ ಪೋಷಕರಾಗಿರುವ ದೀಪಿಕಾ ಮತ್ತು ರಣ್‌ವೀರ್, ದಸರಾ ಹಬ್ಬದ ನೆಪದಲ್ಲಿ ತಮ್ಮ ನಾಲ್ಕೂ ಮಂದಿಯ ಸುಂದರ ಕುಟುಂಬದ ಭಾವಚಿತ್ರವನ್ನು ಹಂಚಿಕೊಳ್ಳುವ ಮೂಲಕ ಎರಡನೇ ಮಗಳ ಹೆಸರನ್ನು ಜಗತ್ತಿಗೆ ಪರಿಚಯಿಸಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ 'ದೇವಿ ಪಡುಕೋಣೆ ಸಿಂಗ್' ಹೆಸರು ಪ್ರಕಟ

ದಸರಾ ಪವಿತ್ರ ದಿನದಂದು ಹಂಚಿಕೊಳ್ಳಲಾದ ಈ ಕುಟುಂಬದ ಸುಂದರ ಫೋಟೋದಲ್ಲಿ, ರಣ್‌ವೀರ್ ಸಿಂಗ್ ತಮ್ಮ ಹಿರಿಯ ಮಗಳು 'ದುವಾ'ಳನ್ನು ಎತ್ತಿಕೊಂಡಿದ್ದು, ಆ ಪುಟ್ಟ ಕಂದಮ್ಮ ತನ್ನ ನವಜಾತ ತಂಗಿ 'ದೇವಿ'ಯ ಕೆನ್ನೆಗೆ ಮುತ್ತಿಡುತ್ತಿರುವ ದೃಶ್ಯವಿದೆ. ಇನ್ನೊಂದೆಡೆ ದೀಪಿಕಾ ಪಡುಕೋಣೆ ತಮ್ಮ ಕಿರಿಯ ಮಗಳು ದೇವಿಯನ್ನು ಪ್ರೀತಿಯಿಂದ ಮಡಿಲಲ್ಲಿ ಹಿಡಿದುಕೊಂಡು ಮಂದಹಾಸ ಬೀರುತ್ತಿದ್ದಾರೆ.

ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ದೀಪಿಕಾ ಪಡುಕೋಣೆ, "ಪ್ರೀತಿ ಮತ್ತು ಸಮೃದ್ಧಿಯ ಸಂಕೇತ - ದೇವಿ ಪಡುಕೋಣೆ ಸಿಂಗ್" (Of Love & Abundance Devi Padukone Singh) ಎಂದು ಅತ್ಯಂತ ಭಾವನಾತ್ಮಕವಾಗಿ ಶೀರ್ಷಿಕೆ (Caption) ನೀಡಿದ್ದಾರೆ.

ಸೆಪ್ಟೆಂಬರ್ 19 ರಂದು ದೇವಿಯ ಆಗಮನ

ದೀಪಿಕಾ ಮತ್ತು ರಣ್‌ವೀರ್ ದಂಪತಿ 2026 ರ ಸೆಪ್ಟೆಂಬರ್ 19 ರಂದು ತಮ್ಮ ಎರಡನೇ ಹೆಣ್ಣು ಮಗುವನ್ನು ಜಗತ್ತಿಗೆ ಬರಮಾಡಿಕೊಂಡಿದ್ದರು. ಈ ವರ್ಷದ ಏಪ್ರಿಲ್ ತಿಂಗಳಲ್ಲಿ ತಾವು ಎರಡನೇ ಬಾರಿಗೆ ತಾಯಿಯಾಗುತ್ತಿರುವ ಸಂತಸದ ಸುದ್ದಿಯನ್ನು ದೀಪಿಕಾ ಬಹಿರಂಗಪಡಿಸಿದ್ದರು. ಮಗು ಜನಿಸಿದಾಗ, "ಸ್ವಾಗತ ಮುದ್ದು ಮಗಳೇ" (Welcome baby girl) ಎಂದು ಬರೆದು ದೃಷ್ಟಿ ತಾಗದಿರಲಿ ಎಂಬ ಇವಿಲ್ ಐ (Evil eye) ಎಮೋಜಿ ಬಳಸಿ ಅತ್ಯಂತ ಸರಳವಾಗಿ ಇನ್ಸ್ಟಾಗ್ರಾಮ್ ಜಂಟಿ ಪೋಸ್ಟ್ ಮೂಲಕ ಸುದ್ದಿ ಹಂಚಿಕೊಂಡಿದ್ದರು.

ಇದು 2024 ರ ಸೆಪ್ಟೆಂಬರ್ ತಿಂಗಳ ನೆನಪನ್ನು ಮರುಕಳಿಸುವಂತಿತ್ತು. 2024 ರ ಸೆಪ್ಟೆಂಬರ್ 8 ರಂದು ಈ ಜೋಡಿ ತಮ್ಮ ಮೊದಲ ಹೆಣ್ಣು ಮಗಳು 'ದುವಾ'ಳನ್ನು ಜಗತ್ತಿಗೆ ಸ್ವಾಗತಿಸಿತ್ತು. ಇದೀಗ ಸುಮಾರು ಎರಡು ವರ್ಷಗಳ ನಂತರ, ಮತ್ತೊಬ್ಬ ಪುಟ್ಟ ದೇವತೆಯ ಆಗಮನದೊಂದಿಗೆ ತಮ್ಮ ಕುಟುಂಬ ಸಂಪೂರ್ಣಗೊಂಡಿರುವುದನ್ನು ದೀಪ್‌ವೀರ್ ಸಂಭ್ರಮಿಸುತ್ತಿದ್ದಾರೆ.

ರೀಲ್ ಲೈಫ್‌ನಿಂದ ರಿಯಲ್ ಲೈಫ್‌ವರೆಗೆ ದೀಪ್‌ವೀರ್ ಪ್ರೇಮ ಪಯಣ

ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್ ಸಿಂಗ್ ಅವರ ಪ್ರೇಮ ಕಥೆ ಆರಂಭವಾಗಿದ್ದು 2013 ರಲ್ಲಿ ತೆರೆಕಂಡ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಗೋಲಿಯೋ ಕಿ ರಾಸಲೀಲಾ ರಾಮ್-ಲೀಲಾ' ಸಿನಿಮಾ ಚಿತ್ರೀಕರಣದ ಸೆಟ್‌ನಲ್ಲಿ. ಚಿತ್ರರಂಗದ ಸಹೋದ್ಯೋಗಿಗಳಾಗಿ ಆರಂಭವಾದ ಇವರ ಸಾಮೀಪ್ಯ ಬಳಿಕ ಸುದೀರ್ಘ ವರ್ಷಗಳ ಪ್ರೀತಿಯಾಗಿ ಬದಲಾಗಿತ್ತು. ನಂತರ 2018 ರ ನವೆಂಬರ್ 14 ರಂದು ಇಟಲಿಯ ಲೇಕ್ ಕೊಮೊದಲ್ಲಿ ಅತ್ಯಂತ ವೈಭವೋಪೇತವಾಗಿ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದೀಪಿಕಾ ಅವರ ಕೊಂಕಣಿ ಹಾಗೂ ರಣ್‌ವೀರ್ ಅವರ ಸಿಂಧಿ ಸಂಪ್ರದಾಯಗಳೆರಡರ ಪ್ರಕಾರವೂ ವಿವಾಹ ಮಹೋತ್ಸವ ಜರುಗಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಲಿವುಡ್‌ನಲ್ಲಿ ದೇಶಭಕ್ತಿ, ಭಕ್ತಿಪ್ರಧಾನ ಸಿನಿಮಾದ್ದೇ ಹವಾ; ಅನುರಾಗ್ ಕಶ್ಯಪ್ ಅಸಮಾಧಾನ, ಏನಿದರ ಮರ್ಮ!?
"ಅದೆಲ್ಲ ದುಡ್ಡಲ್ಲ, ಕಣ್ಣು ಮುಚ್ಚೋದ್ರೊಳಗೆ ಮಾಯವಾಗುತ್ತೆ".. ರೈತರಿಗೆ ಕಣ್ಣು ತೆರೆಸುವ ಆರ್ಥಿಕ ಪಾಠ ಹೇಳಿದ ವಿನೋದ್ ರಾಜ್