ಎರಡನೇ ಮಗುವಿಗೆ ವೆಲ್‌ಕಮ್‌ ಹೇಳಿದ ದೀಪಿಕಾ ಮತ್ತು ರಣವೀರ್‌, ಯಾವ ಬೇಬಿ?

Published : Sep 19, 2026, 07:33 PM IST
Deepika Padukone and Ranveer Singh

ಸಾರಾಂಶ

ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ 19, 2026 ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಈ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಅವರ ಮೊದಲ ಮಗಳು ದುವಾಗೆ ಮುದ್ದಾದ ತಂಗಿ ಬಂದಿದ್ದಾಳೆ.

ಮುಂಬೈ: ಬಾಲಿವುಡ್‌ ಸ್ಟಾರ್‌ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಎರಡನೇ ಮಗುವಿಗೆ ವೆಲ್‌ಕಮ್‌ ಹೇಳಿದ್ದಾರೆ. ದೀಪಿಕಾ ಪಡುಕೋಣೆ ಅವರು ಶನಿವಾರ (ಸೆಪ್ಟೆಂಬರ್ 19, 2026) ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ 'ದೀಪ್‌ವೀರ್' ದಂಪತಿಯ ಕುಟುಂಬಕ್ಕೆ ಮತ್ತೊಬ್ಬಳು ಪುಟಾಣಿ ರಾಜಕುಮಾರಿ ಆಗಮಿಸಿದ್ದಾಳೆ.

ಸಿಹಿಸುದ್ದಿ ಹಂಚಿಕೊಂಡ ದೀಪಿಕಾ

ದೀಪಿಕಾ ಪಡುಕೋಣೆ ಈ ಸಂತಸದ ಸುದ್ದಿಯನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಪುಟಾಣಿ ಕಂದಮ್ಮನ ಪುಟ್ಟ ಪಾದಗಳಿರುವ (Baby footprint) ಫೋಟೋವನ್ನು ದೀಪಿಕಾ ಶೇರ್‌ ಮಾಡಿದ್ದಾರೆ. ಫೋಟೋದಲ್ಲಿ ವೆಲ್‌ಕಮ್ ಬೇಬಿ ಗರ್ಲ್! 19/9/2026. ದುವಾ, ದೀಪಿಕಾ ಮತ್ತು ರಣವೀರ್ ಎಂದು ಬರೆಯಲಾಗಿದೆ. ಇನ್ನು ಕೆಟ್ಟ ದೃಷ್ಟಿ ತಾಗದಿರಲಿ ಎಂದು Evil Eye ಮೋಜಿಯನ್ನು ಸೇರಿಸಿದ್ದಾರೆ. ಆ ಮೂಲಕ ದೀಪಿಕಾ ಸರಳವಾಗಿಯೇ ತಮಗೆ ಹೆಣ್ಣು ಮಗು ಜನಿಸಿದ ವಿಚಾರವನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಇನ್ನು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿಗೆ 2024ರ ಸೆಪ್ಟೆಂಬರ್ 8ರಂದು ಮೊದಲ ಹೆಣ್ಣು ಮಗಳು 'ದುವಾ' ಜನಿಸಿದ್ದಳು. ಇದೀಗ ದುವಾಗೆ ಮುದ್ದಾದ ತಂಗಿ ಬಂದಿದ್ದಾಳೆ. ಕಳೆದ ಏಪ್ರಿಲ್ 19ರಂದು ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಂಡಿತ್ತು. ಹಿರಿಯ ಮಗಳು ದುವಾ ಪಾಸಿಟಿವ್ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಹಿಡಿದುಕೊಂಡಿದ್ದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಶುಭಾಶಯಗಳ ಮಹಾಪೂರ

ವಿಷಯ ತಿಳಿಯುತ್ತಿದ್ದಂತೆಯೇ ಬಾಲಿವುಡ್‌ನ ತಾರೆಯರು, ಆಪ್ತ ಸ್ನೇಹಿತರು ಹಾಗೂ ಜಗತ್ತಿನಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳು ದಂಪತಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಕಾಮೆಂಟ್ ಸೆಕ್ಷನ್‌ನಲ್ಲಿ ಪ್ರೀತಿಯ ಶುಭ ಸಂದೇಶಗಳು ಹರಿದುಬರುತ್ತಿದ್ದು, ತಾಯಿ ಮತ್ತು ಮಗು ಇಬ್ಬರೂ ಕ್ಷೇಮವಾಗಿದ್ದಾರೆ ಎಂದು ತಿಳಿದುಬಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೇವಲ 5 ಸಿನಿಮಾಗಳು.. ₹1000 ಕೋಟಿ ಕಲೆಕ್ಷನ್: ಸೆನ್ಸೇಷನ್ ಆದ ಈ ಯಂಗ್ ಬ್ಯೂಟಿ ಯಾರು?
ಮದುವೆಯಾದ ಬಳಿಕ ಬದಲಾಗುತ್ತಿರುವ ಸ್ಟಾರ್ ಹೀರೋಯಿನ್‌ಗಳು.. ಕೌಂಟ್‌ಗಿಂತ ಕಂಟೆಂಟ್‌ಗೆ ಜೈ!