
ಬೆಂಗಳೂರು(ನ.06): ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಮಧ್ಯೆ ಸಿನಿಮಾಗಳ ಸ್ಟಾರ್ ವಾರ್ ಆಗುತ್ತಲೇ ಇರುತ್ತೆ. ಇತ್ತೀಚೆಗೆ ಮುಕುಂದ ಮುರಾರಿ ಹಾಗೂ ಸಂತು ಸ್ಟ್ರೈಟ್ ಫಾರ್ವಡ್ ಚಿತ್ರಗಳ ನಡುವೆ ಗಾಂಧಿನಗರದಲ್ಲಿ ಬಿಗ್ ಫೈಟ್ ಏರ್ಪಟ್ಟಿತ್ತು. ಈಗ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಸಿನಿಮಾ ವಾರ್ ಶುರುವಾಗಿದೆ. ಒಂದೇ ತಿಂಗಳಲ್ಲಿ ಸುದೀಪ್ ಅಭಿನಯದ ಹೆಬ್ಬುಲಿ ಮತ್ತು ದರ್ಶನ್ ಅಭಿನಯದ ಚಕ್ರವರ್ತಿ ತೆರೆಗೆ ಬರುತ್ತಿವೆ.
ಕಿಚ್ಚ ಸುದೀಪ್ ತಮ್ಮ ಸಿನಿಮಾ ಕೆರಿಯರ್ ನಲ್ಲಿ ಫಸ್ಟ್ ಟೈಮ್ ಆರ್ಮಿ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿರುವ ಹೈ ವೊಲ್ಟೇಜ್ ಸಿನಿಮಾ ಹೆಬ್ಬುಲಿ. ಹೆರ್ ಸ್ಟೈಲ್`ನಿಂದ ಸ್ಯಾಂಡಲ್ ವುಡ್`ನಲ್ಲಿ ಹೊಸ ಟ್ರೆಂಡ್ ಸೆಟ್ ಮಾಡಿದ ಚಿತ್ರ. ಮಾಣಿಕ್ಯ ಚಿತ್ರದ ನಂತರ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗು ಸುದೀಪ್ ಮತ್ತೆ ಒಟ್ಟಿಗೆ ಸ್ಕ್ರೀನ್ ಹಂಚಿಕೊಳ್ಳುತ್ತಿದ್ದಾರೆ. ಕಿಚ್ಚ ಸುದೀಪ್`ಗೆ ಆಮಲಾ ಪೌಲ್ ಜೊತೆಯಾಗಿದ್ದಾರೆ. ಬಿಡುಗಡೆಗೂ ಮುನ್ನವೇ ಹೆಬ್ಬಲಿ ಸ್ಯಾಟ್ ಲೈಟ್ ರೈಟ್ಸ್ 5 ಕೋಟಿ ಹಾಗೂ ಹಿಂದಿ ಡಬ್ಬಿಂಗ್ ರೈಟ್ಸ್ ಅಂತಾ 2 ಕೋಟಿಗೆ ಭರ್ಜರಿ ವ್ಯಾಪಾರ ಆಗಿದೆ. ರೊಮ್ಯಾನ್ಸ್ ಮಾಡಲಿದ್ದಾರೆ. ಸಾಕಷ್ಟು ವಿಷಯಗಳಿಗೆ ಕ್ಯೂರ್ಯಾಸಿಟಿ ಹುಟ್ಟಿಸಿರುವ ಹೆಬ್ಬುಲಿ ಚಿತ್ರ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗೋದಿಕ್ಕೆ ಸಜ್ಜಾಗಿದೆ.
ಇದೇ ತಿಂಗಳಲ್ಲಿ ದರ್ಶನ್ ಅಭಿನಯದ ಚಕ್ರವರ್ತಿ ರಿಲೀಸ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ರೆಟ್ರೋ ಸ್ಟೈಲ್ ಲುಕ್`ನಲ್ಲಿ ಭೂಗತ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಹು ನಿರೀಕ್ಷಿತ ಸಿನಿಮಾ ಚಕ್ರವರ್ತಿ. ಸಾರಥಿ ಸಿನಿಮಾದ ನಂತ್ರ ದರ್ಶನ್ ಜೊತೆಗೆ ದೀಪಾ ಸನ್ನಿಧಿ ಚಕ್ರವರ್ತಿ ಸಿನಿಮಾದಲ್ಲಿ ಜೊತೆಯಾಗಿದ್ದಾರೆ. 70- 80ರ ದಶಕದ ಅಂಡರ್ ವರ್ಲ್ಡ್ ಕಥೆ ಆಧರಿಸಿರುವ ಚಕ್ರವರ್ತಿ ಸಿನಿಮಾ ಡಿಸೆಂಬರ್ 23ಕ್ಕೆ ರಿಲೀಸ್ ಆಗೋದಿಕ್ಕೆ ರೆಡಿಯಾಗಿದೆ.
2006ರಲ್ಲಿ ಕಿಚ್ಚ ಸುದೀಪ್ ಅಭಿನಯದ ಮೈ ಆಟೋಗ್ರಾಫ್ ಹಾಗು ದರ್ಶನ್ ನಟಿಸಿದ ಸುಂಟರಗಾಳಿ ಚಿತ್ರಗಳು ಒಂದೇ ದಿನ ರಿಲೀಸ್ ಆಗಿದ್ದವು. ಆದರೆ, ಬಾಕ್ಸ್ ಆಫೀಸ್` ನಲ್ಲಿ ಎರಡೂ ಚಿತ್ರಗಳು ಗೆದ್ದಿದ್ದವು. ಈಗ ಮತ್ತೆ ಕಿಚ್ಚ ಸುದೀಪ್ ಮತ್ತು ದರ್ಶನ್ ಎರಡು ಎಕ್ಸ್ ಫೆಕ್ಟೆಡ್ ಚಿತ್ರಗಳು ಒಂದೇ ದಿನ ರಿಲೀಸ್ ಆಗುವ ಲಕ್ಷಣಗಳು ಕಾಣುತ್ತಿದೆ. ಈ ಮೂಲಕ ಇಬ್ಬರ ಬಿಗ್ ಸ್ಟಾರ್ ಮಧ್ಯೆ ಸಿನಿಮಾ ವಾರ್ ಶುರುವಾಗಿದೆ. ಈ ಎರಡು ಚಿತ್ರಗಳಲ್ಲಿ ಯಾವ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಆರ್ಭರಿಸುತ್ತೆ ಕಾದು ನೋಡಬೇಕು.
ರವಿಕುಮಾರ್ ಎಂಕೆ ಎಂಟರ್ ಟೈನ್ ಮೆಂಟ್ ಬ್ಯೂರೋ ಸುವರ್ಣ ನ್ಯೂಸ್ ಬೆಂಗಳೂರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.