ದರ್ಶನ್ ಐತಿಹಾಸಿಕ ಚಿತ್ರಕ್ಕೆ ಅದ್ದೂರಿ ಸೆಟ್ ?

Published : Apr 06, 2019, 10:09 AM IST
ದರ್ಶನ್ ಐತಿಹಾಸಿಕ ಚಿತ್ರಕ್ಕೆ ಅದ್ದೂರಿ ಸೆಟ್ ?

ಸಾರಾಂಶ

ಕೋಟೆನಾಡು ಚಿತ್ರದುರ್ಗದ ಪಾಳೆಗಾರ ಮದಕರಿ ನಾಯಕನ ಜೀವನ ಪುಟಗಳನ್ನು ಐತಿಹಾಸಿಕ ಸಿನಿಮಾ ಆಗಿಸುವ ಕೆಲಸಕ್ಕೆ ಚಾಲನೆ ಕೊಟ್ಟು ತುಂಬಾ ದಿನಗಳಾಗಿವೆ. ದರ್ಶನ್ ನಾಯಕನಾಗಿ, ರಾಕ್‌ಲೈನ್ ವೆಂಕಟೇಶ್ ನಿರ್ಮಾಪಕರಾಗಿ, ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಬಿಎಲ್ ವೇಣು ಕತೆ, ಚಿತ್ರಕಥೆ ಹಾಗೂ ಸಂಭಾಷಣೆ ಕೂಡ ಬರೆದು ಮುಗಿಸಿದ್ದಾರೆ. ಹಾಗಿದ್ದರೆ ಚಿತ್ರದ ಕೆಲಸಗಳು ಏನಾಗುತ್ತಿವೆ, ಎಲ್ಲಿವರೆಗೂ ಬಂದಿದೆ ಎನ್ನುವ ಪ್ರಶ್ನೆಗಳಿಗೆ ಎರಡು ಭಾಷೆಯ ಚಿತ್ರಗಳ ಬಹು ದೊಡ್ಡ ಸೆಟ್‌ಗಳನ್ನು ಚಿತ್ರತಂಡ ಗುರುತಿಸಿ ಅವುಗಳಲ್ಲೇ ಶೂಟಿಂಗ್ ಮಾಡುವುದಕ್ಕೆ ಅಂತಿಮ ತಯಾರಿ ಮಾಡಿಕೊಂಡಿದೆ ಎಂಬ ಸುದ್ದಿ ಈಗಷ್ಟೆ ಬಂದಿದೆ. 

ಹೌದು, ‘ಗಂಡುಗಲಿ ಮದಕರಿ ನಾಯಕ’ ಚಿತ್ರಕ್ಕೆ ಮೂರು ಅದ್ದೂರಿ ಸೆಟ್‌ಗಳನ್ನು ನಿರ್ಮಿಸುವ ಯೋಚನೆಯಲ್ಲಿದ್ದ ಚಿತ್ರತಂಡಕ್ಕೆ ಈಗ ಎರಡು ಸೆಟ್‌ಗಳು ರೆಡಿಯಾಗಿ ನಿಂತಿವೆ. ಈ ಪೈಕಿ ತೆಲುಗಿನಲ್ಲಿ ‘ಬಾಹುಬಲಿ’ ಚಿತ್ರದ ಸೆಟ್ ಹಾಗೂ ಬಾಲಿವುಡ್‌ನ ‘ಬಾಜಿರಾವ್ ಮಸ್ತಾನಿ’ ಚಿತ್ರದ ಸೆಟ್. ರಾಜ್‌ಮೌಳಿ ಹಾಗೂ ಸಂಜಯ್ ಲೀಲಾ ಬನ್ಸಾಲಿ ಕನಸಿನ ಈ ಸೆಟ್‌ಗಳಲ್ಲೇ ಚಿತ್ರದ ಬಹು ಮುಖ್ಯವಾದ ದೃಶ್ಯಗಳನ್ನು ಚಿತ್ರೀಕರಣ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಈ ಸೆಟ್‌ಗಳು ಸಿಕ್ಕಾಪಟ್ಟೆ ಅದ್ದೂರಿಯಾಗಿವೆ. ಈಗಾಗಲೇ ಮುಂಬಾಯಿನಲ್ಲಿ ನಿರ್ಮಿಸಿರುವ ‘ಬಾಜಿರಾವ್ ಮಸ್ತಾನಿ’ ಹಾಗೂ ಹೈದರಾಬಾದ್‌ನ ರಾಮೋಜಿ ಫಿಲಮ್ ಸಿಟಿಯಲ್ಲಿ ಹಾಕಿರುವ ‘ಬಾಹುಬಲಿ’ ಸೆಟ್‌ಗಳಿಗೆ ಚಿತ್ರತಂಡ ಭೇಟಿ ಕೊಟ್ಟಿದೆ. ಚಿತ್ರದ ಕತೆಗೆ ಸಂಬಂಧಿ ಸಿದ್ದಂತೆ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡು ಅದೇ ಸೆಟ್‌ನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಯೋಜನೆ ರೂಪಿಸಿದೆ. ಇನ್ನೂ ಇದರ ಜತೆಗೆ ರಾಜಸ್ಥಾನದಲ್ಲೂ ಒಂದು ಸೆಟ್ ನಿರ್ಮಿಸುವ ಯೋಚನೆ ನಿರ್ಮಾಪಕರದ್ದು. 

ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನ್ Unseen ಫೋಟೋಸ್!

ರಾಜಕೀಯ, ಗಡ್ಡ ಅಡ್ಡ ಬಂತು
ಹಾಗೆ ನೋಡಿದರೆ ಇಷ್ಟೊತ್ತಿಗೆ ‘ಗಂಡುಗಲಿ ಮದಕರಿ ನಾಯಕ’ ಶೂಟಿಂಗ್ ಮೈದಾನಕ್ಕೆ ಹೋಗಬೇಕಿತ್ತು. ಬರವಣಿಗೆ ಕೆಲಸ ಮುಗಿದೆ. ಇನ್ನೂ ರಾಕ್‌ಲೈನ್ ವೆಂಕಟೇಶ್ ನಿರ್ಮಾಪಕರಾಗಿರುವ ಕಾರಣ ಅವರಿಗೆ ಕನ್ನಡದ ಜತೆಗೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ತಂತ್ರಜ್ಞರು ಹಾಗೂ ಕಲಾವಿದರ ಪರಿಚಯ ಇದೆ. ಬಹು ಬೇಗನೇ ತಂಡ ಕಟ್ಟುವ ಸಾಧ್ಯತೆಗಳಿದ್ದವು. ಆದರೆ, ಇದಕ್ಕಿದ್ದಂತೆ ಚುನಾವಣೆ ಬಂತು. ಸುಮಲತಾ ಅಂಬರೀಶ್ ಚುನಾವಣೆಗೆ
ನಿಂತುಕೊಂಡರು. ಸಹಜವಾಗಿ ರಾಕ್‌ಲೈನ್ ವೆಂಕಟೇಶ್ ಅವರ ಬೆನ್ನಿಗೆ ನಿಂತರು. ಇತ್ತ ಚಿತ್ರದ ನಾಯಕ ದರ್ಶನ್ ಕೂಡ ಸುಮಲತಾ ಪರವಾಗಿ ಚುನಾವಣೆಯ ಪ್ರಚಾರಕ್ಕೆ ಇಳಿದರು. ಅಲ್ಲದೆ ‘ರಾಬರ್ಟ್’ ಚಿತ್ರಕ್ಕಾಗಿ ದರ್ಶನ್ ಗಡ್ಡ ಬೇರೆ ಬಿಟ್ಟಿದ್ದಾರೆ. ಈ ಗಡ್ಡ ಮತ್ತು ಚುನಾವಣೆಯಿಂದ ಒಂದಿಷ್ಟು ದಿನಗಳ ಕಾಲ ‘ಗಂಡುಗಲಿ ಮದಕರಿ ನಾಯಕ’ನಿಗೆ ಶೂಟಿಂಗ್ ಭಾಗ್ಯ ದಕ್ಕುತ್ತಿಲ್ಲ. ಒಂದು ವೇಳೆ ‘ರಾಬರ್ಟ್’ ಚಿತ್ರಕ್ಕೆ ಅಂದುಕೊಂಡಂತೆ ಇದೇ ತಿಂಗಳು ಮುಹೂರ್ತ ನಡೆದರೆ ಈ ಸಿನಿಮಾ ಮುಗಿದ ಮೇಲೆಯೇ ಮದಕರಿ ನಾಯಕನ ಚಿತ್ರ ಸೆಟ್ಟೇರುವ ಸಾಧ್ಯಗಳಿವೆ. ಯಾಕೆಂದರೆ ಇಲ್ಲಿ ನಾಯಕನ ಗೆಟಪ್ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಗಡ್ಡಕ್ಕೆ ಬದಲಾಗಿ ಮೀಸೆ ಬೆಳೆಸಬೇಕಿದೆ. ಔಟ್‌ಲುಕ್ ಬದಲಾಯಿಸಿಕೊಳ್ಳ
ಬೇಕಿದೆ. ಅತ್ತ ಚುನಾವಣೆಯ ಬಿಸಿ ತಣ್ಣಗಾಗಿ ಫಲಿತಾಂಶ ಬರಬೇಕಿದೆ. ಈ ಎಲ್ಲ ಕಾರಣಗಳಿಗಾಗಿ ಮದಕರಿ ನಾಯಕನ ಶೂಟಿಂಗ್ ತಡವಾಗಲಿದೆಯಂತೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?