1) ಚಕ್ರವರ್ತಿ ಯಾವ ರೀತಿಯ ಸಿನಿಮಾ?
- ಒಂದು ಒಳ್ಳೆಯ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರ. ಜತೆಗೆ ಭೂಗತ ಲೋಕದ ಕತೆ ಇದೆ. 70, 80ರ ದಶಕದ ನೆರಳು ಇಲ್ಲಿದೆ. ಪಕ್ಕಾ ರೆಟ್ರೋ ಸ್ಟೈಲ್‌ನ ಸಿನಿಮಾ. ಕಾಲಕ್ಕೆ ತಕ್ಕಂತೆ ಗೆಟಪ್‌ಗಳು ಇರುವ ಒಂದು ಕಮರ್ಷಿಯಲ್ ಸಿನಿಮಾ ಅಷ್ಟೇ.
ಎಲ್ಲ ಕಮರ್ಷಿಯಲ್ ಸಿನಿಮಾಗಳಲ್ಲೂ ಈ ಅಂಶಗಳು ಇದ್ದೇ ಇರುತ್ತವೆ. ಇದರ ಹೊರತಾಗಿ ಚಿತ್ರದ ಮುಖ್ಯ ಥೀಮ್ ಏನು?
ಮನೆಗಿಂತ ದೇಶ ಮುಖ್ಯ. ಒಳ್ಳೆಯ ಜಾಗದಲ್ಲಿ ಕೂತು ಕೆಟ್ಟಕೆಲಸ ಮಾಡಬಹುದು. ಅದೇ ರೀತಿ ಕೆಟ್ಟಜಾಗದಲ್ಲಿ ಕೂತು ಒಳ್ಳೆಯ ಕೆಲಸ ಮಾಡಬಹುದು. ಆದರೆ, ಇಲ್ಲಿ ಯಾವ ಜಾಗದಲ್ಲಿ ಕೂತು ಏನು ಮಾಡುತ್ತಾನೆ, ಜತೆಗೆ ಮನೆಗಿಂತ ದೇಶ ಯಾಕೆ ಮುಖ್ಯ ಆಗುತ್ತದೆ ಎಂಬುದು ಚಿತ್ರದ ಒಟ್ಟಾರೆ ಥೀಮು.
2) ಅಂದರೆ ಒಬ್ಬ ಡಾನ್, ದೇಶದ ಪರವಾಗಿ ಕೆಲಸ ಮಾಡುವ ಕತೆನಾ? ಆ ದಿನಗಳ ಬೆಂಗಳೂರಿನ ಭೂಗತ ಲೋಕದ ನೆರಳು ಇಲ್ಲಿರುತ್ತದೆಯೇ?
- ಏನ್ ಸ್ವಾಮಿ, ನೀವು ಸಿನಿಮಾ ನೋಡುವ ಆಸೆ ಇಲ್ವಾ? ಎಲ್ಲವೂ ಇಲ್ಲೇ ಕೇಳಿಬಿಟ್ರೆ ಹೇಗೆ? ಸಿನಿಮಾ ನೋಡಿ. ಇನ್ನು ಆ ದಿನಗಳ ಬೆಂಗಳೂರಿನ ಭೂಗತ ಜಗತ್ತಿನ ನೆರಳು ಇರುತ್ತದೆ. ಅದು ಯಾವ ರೀತಿ ನಿರೂಪಣೆ ಮಾಡಿದ್ದೇವೆ ಎಂಬುದನ್ನು ಸಿನಿಮಾ ನೋಡಿ.
3)ಸರಿ, ಇಲ್ಲಿ ನಿಜವಾದ ಚಕ್ರವರ್ತಿ ಯಾರು? ಯಾಕೆ ಆತ ಚಕ್ರವರ್ತಿ ಅನಿಸಿಕೊಳ್ಳುತ್ತಾನೆ?
ಕತೆ ಮತ್ತು ಆ ಹೆಸರು ಮಾತ್ರ ಚಕ್ರವರ್ತಿ. ನಾವೆಲ್ಲ ಆ ಹೆಸರಿನ ಪಾತ್ರಧಾರಿಗಳು ಅಷ್ಟೆ. ಹೀಗಾಗಿ ದರ್ಶನ್ ಒಬ್ಬರೇ ಚಕ್ರವರ್ತಿ ಅಲ್ಲ. ಯಾಕೆ ಎಲ್ಲರು ಚಕ್ರವರ್ತಿಗಳು ಎಂಬುದನ್ನು ನೀವು ಸಿನಿಮಾ ನೋಡಿ ತಿಳಿಯಬೇಕು.
4)ನಿಮ್ಮ ಗೆಟಪ್, ಲುಕ್‌ಗಳಿಗೆ ನಿಮ್ಮ ಆತ್ಮೀಯರಿಂದ ಬಂದ ಕಾಮೆಂಟ್ಸ್ ಏನು? ಚಿತ್ರದಲ್ಲಿ ಬೇರೆ ಭಾಷೆಯನ್ನು ಹೆಚ್ಚು ಬಳಸಿದ್ದೀರಂತೆ ಹೌದಾ?
- ನೋಡಿದ ಕೂಡಲೇ ‘ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ' ಅಂತ ಮೆಚ್ಚಿಕೊಂಡ್ರು. ಅಭಿಮಾನಿಗಳಂತೂ ಚಿತ್ರದ ಫೋಟೋಗಳನ್ನು ಸಾಧ್ಯವಾದಷ್ಟರ ಮಟ್ಟಿಗೆ ಪ್ರಚಾರ ಮಾಡಿದರು. ಜತೆಗೆ ಪ್ರತಿಯೊಬ್ಬರು ನನ್ನ ಲುಕ್ಕಿನ ಹಿಂದೆ ಒಂದು ಕತೆ ಕಟ್ಟುತ್ತ ಹೋದರು. ಸಿನಿಮಾಗಳಲ್ಲಿ ನಮ್ಮ ಗೆಟಪ್ ನೋಡಿ ಕತೆ ಊಹಿಸುವುದು ಕೂಡ ಚಿತ್ರದ ಹೈಲೈಟ್ ಅಲ್ವೆ? ಹೌದು, ಕನ್ನಡದ ಜತೆಗೆ ಹಿಂದಿ ಭಾಷೆಯನ್ನು ಹೆಚ್ಚಾಗಿ ಬಳಸಿದ್ದೇವೆ.
5) ಚಿತ್ರೀಕರಣ ಮುಗಿದ ಮೇಲೂ ಒಬ್ಬ ನಟರಾಗಿ ಆ ಚಿತ್ರದಲ್ಲಿ ನೀವು ಎಷ್ಟರ ಮಟ್ಟಿಗೆ ತೊಡಗಿಸಿಕೊಂಡಿದ್ದೀರಿ?
- ಒಬ್ಬ ನಟನಾಗಿ ನನ್ನ ಚಿತ್ರದ ಚಿತ್ರೀಕರಣ ಮುಗಿದ ಮೇಲೂ ಆ ಚಿತ್ರದ ಜತೆಗೆ ಇರುತ್ತೇನೆ. ಆದರೆ, ಕೆಲವರು ನಮ್ಮ ಕೆಲಸ ಮುಗಿದ ಮೇಲೆ ನಮ್ಮನ್ನು ದೂರ ಇಟ್ಟು ಕೆಲಸ ಮಾಡುತ್ತಾರೆ. ಬಾಗಿಲು ಹಾಕಿಕೊಂಡು ಹೀರೋಗೆ ಗೊತ್ತಿಲ್ಲದೆ ಎಡಿಟ್ ಮಾಡಿದ ಪ್ರಸಂಗಗಳು ಇವೆ. ಆದರೆ, ಇನ್ನು ಕೆಲವರು ಏನೇ ಮಾಡಿದರೂ ಪ್ರತಿಯೊಂದನ್ನು ಗಮನಕ್ಕೆ ತಂದು ಮಾಡುತ್ತಾರೆ. ಒಂದು ಸಣ್ಣ ಬದಲಾವಣೆ ಮಾಡಿದರೂ ಹೇಳುತ್ತಾರೆ. ‘ಚಕ್ರವರ್ತಿ' ಈ ಎರಡನೇ ವರ್ಗಕ್ಕೆ ಸೇರಿದ ಸಿನಿಮಾ. ಹೀಗಾಗಿ ಪ್ರತಿಯೊಂದರಲ್ಲೂ ನಾನು ಭಾಗಿಯಾಗುವುದಕ್ಕೆ ಸಾಧ್ಯವಾಯಿತು. ಸಿನಿಮಾ ಮುಗಿದ ಮೇಲೆ ಒಂದಿಷ್ಟುಪ್ರೇಕ್ಷಕರನ್ನು ಕರೆಸಿ ಅವರಿಗೆ ಸಿನಿಮಾ ತೋರಿಸಿ ಅವರಿಂದಲೂ ಅಭಿಪ್ರಾಯ ತೆಗೆದುಕೊಂಡು ಸರಿಪಡಿಸಿಕೊಂಡಿದ್ದೇವೆ. ಈ ಕ್ಷಣಕ್ಕೂ ‘ಚಕ್ರವರ್ತಿ' ಜತೆ ಒಂದು ಪಾತ್ರವಾಗಿ ನಿಂತಿರುವೆ.
6) ದಿನಕರ್ ಅವರನ್ನು ನಿರ್ದೇಶಕರನ್ನಾಗಿ ನೋಡಿದವರು. ಈಗ ನಟನಾಗಿ ನಿಮ್ಮೆದರು ನಿಂತಿದ್ದಾರೆ. ನೀವು ಕಂಡಂತೆ ಅವರ ನಟನೆ ಹೇಗೆ?
- ಅವನು ಮೇಕಪ್ ಹಾಕಿಕೊಂಡು ಕ್ಯಾಮೆರಾ ಮುಂದೆ ನಿಂತಾಗ ಒಂದು ಕ್ಷಣ ನಮ್ಮ ತಂದೆ ಬಂದು ನನ್ನ ಮುಂದೆ ನಿಂತಿದ್ದಾರೆ ಅನಿಸಿತು. ಅವನ ಮೀಸೆ, ಗಡ್ಡ ನೋಡುತ್ತಲೇ ನಿಂತ ನನಗೆ ನನ್ನ ತಂದೆ ತೂಗುದೀಪ ಶ್ರೀನಿವಾಸ ಕಣ್ಣ ಮುಂದೆ ಬಂದು ಹೋದರು. ಇನ್ನು ಅವನು ನನ್ನ ಸೋದರ. ಹೀಗಾಗಿ ಮೊದಲ ನಟನೆ ಹೇಗೆ ಮಾಡಿದರೂ ಅವನ ಅಣ್ಣನಾಗಿ ನನಗೆ ಇಷ್ಟವಾಗುತ್ತದೆ. ಅವನು ಸೆಟ್‌ನಲ್ಲಿ ಎಷ್ಟುಸರಳವಾಗಿದ್ದ ಅಂದರೆ ಯಾರೇ ಬಂದು ಸಲಹೆ ಕೊಡುತ್ತಿದ್ದರು ತೆಗೆದುಕೊಳ್ಳುತ್ತಿದ್ದ. ಅವನೇ ಬಂದು ಏನಾದ್ರು ತಪ್ಪು ಮಾಡಿದರೆ ಇಲ್ಲೇ ಹೇಳ್ರಪ್ಪ. ಆ ಮೇಲೆ ಥಿಯೇಟರ್‌ನಲ್ಲಿ ನೋಡಿ ಬೈಯಬೇಡಿ ಅನ್ನುತ್ತಿದ್ದ.
7) ಚಿತ್ರೀಕರಣ ಮುಗಿದ ಮೇಲೂ ಒಬ್ಬ ನಟರಾಗಿ ಆ ಚಿತ್ರದಲ್ಲಿ ನೀವು ಎಷ್ಟರ ಮಟ್ಟಿಗೆ ತೊಡಗಿಸಿಕೊಂಡಿದ್ದೀರಿ?
- ಒಬ್ಬ ನಟನಾಗಿ ನನ್ನ ಚಿತ್ರದ ಚಿತ್ರೀಕರಣ ಮುಗಿದ ಮೇಲೂ ಆ ಚಿತ್ರದ ಜತೆಗೆ ಇರುತ್ತೇನೆ. ಆದರೆ, ಕೆಲವರು ನಮ್ಮ ಕೆಲಸ ಮುಗಿದ ಮೇಲೆ ನಮ್ಮನ್ನು ದೂರ ಇಟ್ಟು ಕೆಲಸ ಮಾಡುತ್ತಾರೆ. ಬಾಗಿಲು ಹಾಕಿಕೊಂಡು ಹೀರೋಗೆ ಗೊತ್ತಿಲ್ಲದೆ ಎಡಿಟ್ ಮಾಡಿದ ಪ್ರಸಂಗಗಳು ಇವೆ. ಆದರೆ, ಇನ್ನು ಕೆಲವರು ಏನೇ ಮಾಡಿದರೂ ಪ್ರತಿಯೊಂದನ್ನು ಗಮನಕ್ಕೆ ತಂದು ಮಾಡುತ್ತಾರೆ. ಒಂದು ಸಣ್ಣ ಬದಲಾವಣೆ ಮಾಡಿದರೂ ಹೇಳುತ್ತಾರೆ. ‘ಚಕ್ರವರ್ತಿ' ಈ ಎರಡನೇ ವರ್ಗಕ್ಕೆ ಸೇರಿದ ಸಿನಿಮಾ. ಹೀಗಾಗಿ ಪ್ರತಿಯೊಂದರಲ್ಲೂ ನಾನು ಭಾಗಿಯಾಗುವುದಕ್ಕೆ ಸಾಧ್ಯವಾಯಿತು. ಸಿನಿಮಾ ಮುಗಿದ ಮೇಲೆ ಒಂದಿಷ್ಟುಪ್ರೇಕ್ಷಕರನ್ನು ಕರೆಸಿ ಅವರಿಗೆ ಸಿನಿಮಾ ತೋರಿಸಿ ಅವರಿಂದಲೂ ಅಭಿಪ್ರಾಯ ತೆಗೆದುಕೊಂಡು ಸರಿಪಡಿಸಿಕೊಂಡಿದ್ದೇವೆ. ಈ ಕ್ಷಣಕ್ಕೂ ‘ಚಕ್ರವರ್ತಿ' ಜತೆ ಒಂದು ಪಾತ್ರವಾಗಿ ನಿಂತಿರುವೆ.
8) ದಿನಕರ್ ಅವರನ್ನು ನಿರ್ದೇಶಕರನ್ನಾಗಿ ನೋಡಿದವರು. ಈಗ ನಟನಾಗಿ ನಿಮ್ಮೆದರು ನಿಂತಿದ್ದಾರೆ. ನೀವು ಕಂಡಂತೆ ಅವರ ನಟನೆ ಹೇಗೆ?
- ಅವನು ಮೇಕಪ್ ಹಾಕಿಕೊಂಡು ಕ್ಯಾಮೆರಾ ಮುಂದೆ ನಿಂತಾಗ ಒಂದು ಕ್ಷಣ ನಮ್ಮ ತಂದೆ ಬಂದು ನನ್ನ ಮುಂದೆ ನಿಂತಿದ್ದಾರೆ ಅನಿಸಿತು. ಅವನ ಮೀಸೆ, ಗಡ್ಡ ನೋಡುತ್ತಲೇ ನಿಂತ ನನಗೆ ನನ್ನ ತಂದೆ ತೂಗುದೀಪ ಶ್ರೀನಿವಾಸ ಕಣ್ಣ ಮುಂದೆ ಬಂದು ಹೋದರು. ಇನ್ನು ಅವನು ನನ್ನ ಸೋದರ. ಹೀಗಾಗಿ ಮೊದಲ ನಟನೆ ಹೇಗೆ ಮಾಡಿದರೂ ಅವನ ಅಣ್ಣನಾಗಿ ನನಗೆ ಇಷ್ಟವಾಗುತ್ತದೆ. ಅವನು ಸೆಟ್‌ನಲ್ಲಿ ಎಷ್ಟುಸರಳವಾಗಿದ್ದ ಅಂದರೆ ಯಾರೇ ಬಂದು ಸಲಹೆ ಕೊಡುತ್ತಿದ್ದರು ತೆಗೆದುಕೊಳ್ಳುತ್ತಿದ್ದ. ಅವನೇ ಬಂದು ಏನಾದ್ರು ತಪ್ಪು ಮಾಡಿದರೆ ಇಲ್ಲೇ ಹೇಳ್ರಪ್ಪ. ಆ ಮೇಲೆ ಥಿಯೇಟರ್‌ನಲ್ಲಿ ನೋಡಿ ಬೈಯಬೇಡಿ ಅನ್ನುತ್ತಿದ್ದ.
- ಆರ್. ಕೇಶವ್'ಮೂರ್ತಿ, ಕನ್ನಡಪ್ರಭ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.