ತಾರಕ್ ರಹಸ್ಯ ಬಿಟ್ಟುಕೊಟ್ಟ ಚಾಲೆಂಜಿಂಗ್ ಸ್ಟಾರ್

Published : Sep 27, 2017, 10:41 AM ISTUpdated : Apr 11, 2018, 01:06 PM IST
ತಾರಕ್ ರಹಸ್ಯ ಬಿಟ್ಟುಕೊಟ್ಟ ಚಾಲೆಂಜಿಂಗ್ ಸ್ಟಾರ್

ಸಾರಾಂಶ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ತಾರಕ್’ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ‘ತಾರಕ್’ ಚಿತ್ರದ ಕತೆ ಏನು, ದರ್ಶನ್ ಮತ್ತು ದೇವರಾಜ್ ಸಂಬಂಧ ಹೇಗಿದೆ ಎನ್ನುವ ಗುಟ್ಟು ಬಿಟ್ಟುಕೊಟ್ಟಿದ್ದಾರೆ ದರ್ಶನ್.  


ನಿರ್ದೇಶಕ ನಾಗಣ್ಣ ಅವರ ಮಗಳು ವಿದೇಶದಲ್ಲಿದ್ದಾರೆ. ತುಂಬಾ ವರ್ಷಗಳಿಂದ ಅಲ್ಲೇ ಇದ್ದಾರೆ. ಇತ್ತೀಚೆಗೆ ಅವರ ಹುಟ್ಟುಹಬ್ಬ ಇತ್ತು. ಆದರೆ, ನಾಗಣ್ಣ ಮಾತ್ರ ಇಲ್ಲಿ ‘ಕುರುಕ್ಷೇತ್ರ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಆದರೆ, ಮಗಳಿಗೆ ಒಂದು ಸರ್ಪ್ರೈಸ್ ಕೊಡಬೇಕು ಅಂತ ಅವರಿಗೆ ಬರ್ತ್‌ಡೇ ವಿಷ್ ಮಾಡಿ ನಾನು ಮತ್ತು ನಾಗಣ್ಣ ಒಂದು ವಿಡಿಯೋ ಮಾಡಿ ಕಳಿಸಿದ್ವಿ. ನಮ್ಮ ವಿಡಿಯೋ ಸಂದೇಶ ನೋಡಿ ಅವರಿಗೆ ಎಷ್ಟು ಸಂಭ್ರಮವಾಗಿತ್ತೆಂದರೆ ನನಗೆ ಅವರು ದೊಡ್ಡ ಪತ್ರ ಬರೆದು ಕೃತಜ್ಞತೆ ಸಲ್ಲಿಸಿದರು. ನಾವು, ನಮ್ಮೂರು, ನೆಂಟರು, ಸ್ನೇಹಿತರು ಎಲ್ಲರನ್ನು ಬಿಟ್ಟು ನಮ್ಮದಲ್ಲದ ಊರಿನಲ್ಲೇ ಬದುಕುತ್ತ ಇಂಥ ಚಿಕ್ಕ ಚಿಕ್ಕ ವಿಷಯಗಳನ್ನು ದೊಡ್ಡದಾಗಿ ಸಂಭ್ರಮಿಸುತ್ತಿದ್ದಾರಲ್ಲ ಅಂಥ ಕುಟುಂಬಗಳು ನೂರಾರು ಇವೆ. ಅಂಥಾ ಫ್ಯಾಮಿಲಿಗಳ ಕತೆಯನ್ನೇ ಈ ಸಿನಿಮಾ ಹೇಳುತ್ತದೆ.

 - ಹೀಗೆ ನಟ ದರ್ಶನ್ ಅವರು ಒಂದು ನೈಜ ಉದಾಹರಣೆ ಮೂಲಕ ತಮ್ಮ ನಟನೆಯ ‘ತಾರಕ್’ ಚಿತ್ರದ ಕತೆಯ ಗುಟ್ಟು ಬಿಟ್ಟು ಕೊಟ್ಟರು.

ಅಬ್ರಾಡ್ ಕತೆಯಲ್ಲಿ ದೇಸಿತನ: ಫಾರಿನ್ ಫ್ಯಾಮಿಲಿಗಳ ಕತೆ ಎಂದ ಮಾತ್ರಕ್ಕೆ ಪೂರ್ತಿ ಅಬ್ರಾಡ್ ಕತೆ ಎಂದುಕೊಳ್ಳಬೇಡಿ. ಸಾಮಾನ್ಯವಾಗಿ ಹೊರ ದೇಶದಲ್ಲಿ ಬದುಕುತ್ತಿರುವವರು ದೂರದಿಂದ ತುಂಬಾ ಸುಂದರವಾಗಿಯೇ ಕಾಣುತ್ತಾರೆ. ಆದರೆ, ದೇಶ ಬಿಟ್ಟು ವಿದೇಶದಲ್ಲಿ ನೆಲೆಸಿರುವ ನಮ್ಮ ಕುಟುಂಬಗಳ ಈ ಸಂ‘್ರಮ, ಸಂಕಟ, ತಾಕಲಾಟ, ಸಂಬಂಧಗಳ ಕುರಿತು ‘ತಾರಕ್’ ಸಿನಿಮಾ ಮಾತನಾಡುತ್ತದೆ. ಹಾಗೆ ವಿದೇಶದಿಂದ ಸ್ವದೇಶಕ್ಕೆ ಬರುವ ನಾಯಕ ಮತ್ತು ಆತನ ತಾತನ ಮತ್ತವರ ಕುಟುಂಬದ ಸುತ್ತ ಸಿನಿಮಾ ಸಾಗುತ್ತದೆ. ಅಲ್ಲದೆ ಚಿತ್ರದಲ್ಲಿ ಎರಡ್ಮೂರು ಗೆಟಪ್‌ಗಳಿವೆ. ಸಂಪೂರ್ಣವಾಗಿ ಟ್ರೆಡಿಷನಲ್ ಆಗಿದೆ. ಹೀಗಾಗಿ ಇಲ್ಲಿ ಪಕ್ಕಾ ದೇಸಿತನವೂ ಇದೆ. ಜತೆಗೆ ಒಂದು ಫ್ಯಾಮಿಲಿ ಎಂಟರ್‌'ಟೈನರ್‌'ಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿವೆ.

ಕತೆ ಮತ್ತು ದೇವರಾಜ್: ದರ್ಶನ್ ಅವರು ತಮ್ಮ ಅಭಿರುಚಿಗೆ ತಕ್ಕಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುವ ನಟ ಅಲ್ಲ. ಪ್ರೇಕ್ಷಕರ ಅಭಿರುಚಿಯನ್ನು ಅರಿತು ಅದಕ್ಕೆ ತಕ್ಕಂತೆ ಸಿನಿಮಾಗಳನ್ನು ಒಪ್ಪುವ ಕಲಾವಿದ. ಕತೆ ಮತ್ತು ಪ್ರೇಕ್ಷಕ ಇಷ್ಟನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಅವರು ತಮ್ಮ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ‘ತಾರಕ್’ ಚಿತ್ರವನ್ನೂ ಆಯ್ಕೆ ಮಾಡಿಕೊಂಡಿದ್ದು. ದರ್ಶನ್ ಪ್ರಕಾರ ದೇವರಾಜ್ ಅವರೇ ಚಿತ್ರದ ಹೀರೋ ಅಂತೆ. ತಾತನ ಗೆಟಪ್‌ನಲ್ಲಿ ದೇವರಾಜ್ ಮಾಡಿರುವ ಪಾತ್ರ ನೋಡಿದರೆ ಪ್ರೇಕ್ಷಕರು ಅವರನ್ನೇ ಹೀರೋ ಅನ್ನುತ್ತಾರಂತೆ.

ಆ ಎರಡು ಚಿತ್ರಗಳ ನಂತರ: ಸಾಮಾನ್ಯವಾಗಿ ದರ್ಶನ್ ನಟನೆಯ ಸಿನಿಮಾಗಳು ವಿದೇಶಗಳಲ್ಲಿ ಹೆಚ್ಚು ಚಿತ್ರೀಕರಣ ಮಾಡಿಕೊಂಡಿದ್ದು ಕಡಿಮೆ. ಇತ್ತೀಚೆಗೆ ‘ಚಿಂಗಾರಿ’ ಹಾಗೂ ‘ಬುಲ್ ಬುಲ್’ ಚಿತ್ರಗಳು ಮಾತ್ರ ಹೆಚ್ಚು ಫಾರಿನ್ ಟೂರ್ ಮಾಡಿವೆ. ಈ ಎರಡು ಚಿತ್ರಗಳ ನಂತರ ಅತಿ ಹೆಚ್ಚು ವಿದೇಶದಲ್ಲಿ ಚಿತ್ರೀಕರಣ ಮಾಡಿಕೊಂಡ ಸಿನಿಮಾ ಅಂದರೆ ‘ತಾರಕ್’. 65 ರಿಂದ 70 ದಿನಗಳ ಚಿತ್ರೀಕರಣದಲ್ಲಿ ೪೫ ದಿನ ವಿದೇಶದಲ್ಲೇ ಶೂಟಿಂಗ್ ಮಾಡಲಾಗಿದೆ. ಅಷ್ಟರ ಮಟ್ಟಿಗೆ ‘ತಾರಕ್’  ಕಲರ್ ಫುಲ್ಲಾಗಿ ಮೂಡಿಬಂದಿದೆ.

ಅಭಿಮಾನಿಗಳಿಗೆ ನಿರಾಸೆ ಮಾಡಲ್ಲ

ನಟ ದರ್ಶನ್ ಅವರು ಮೊದಲೇ ಹೇಳಿದಂತೆ ಇದು ಮಿಲನ ಪ್ರಕಾಶ್ ಸಿನಿಮಾ. ರೆಗ್ಯುಲರ್ ದರ್ಶನ್ ಸಿನಿಮಾ ಅಲ್ಲ. ಚಾಲೆಂಜಿಂಗ್ ಸ್ಟಾರ್, ನಿರ್ದೇಶಕರ ಕೋರ್ಟ್‌ನಲ್ಲಿ ನಿಂತು ನಟಿಸಿರುವ ಸಿನಿಮಾ. ಇಲ್ಲಿವರೆಗೂ ಮಿಲನ ಪ್ರಕಾಶ್ ಸಿನಿಮಾಗಳನ್ನು ಏನು ನೋಡಿದ್ದೀರೋ, ಅದೇ ಫ್ಲೇವರ್‌ನಲ್ಲಿ ‘ತಾರಕ್’ ಬಂದಿದೆ. ಕ್ಲಾಸಿಕ್ ಫ್ಯಾಮಿಲಿ ಸಿನಿಮಾ. ಆದರೂ ಚಾಲೆಂಜಿಂಗ್ ಸ್ಟಾರ್ ಸಿನಿಮಾಗಳನ್ನು ನೋಡಿಕೊಂಡು ಬಂದ ಅವರ ಅಭಿಮಾನಿಗಳನ್ನೂ ಈ ಸಿನಿಮಾ ನಿರಾಸೆ ಮಾಡಲ್ಲ.

ಈ ಕಾರಣಕ್ಕೆ ಅಲ್ಲಲ್ಲಿ ಫೈಟ್ಸ್ ಇದೆ. ಕೇಳುವಂತಹ ಸಂಭಾಷಣೆಗಳಿವೆ, ನೋಡುವಂಥ ಅದ್ಭುತ ಲೋಕೇಶನ್‌ಗಳಿವೆ. ಹಾಡುಗಳು ಇಂಪಾಗಿವೆ. ಮಿಲನ ಪ್ರಕಾಶ್ ಅವರು ತಮ್ಮತನವನ್ನೂ ಬಿಟ್ಟು ಕೊಡದೆ ಅದೇ ಸಂದ‘ರ್ರದಲ್ಲಿ ದರ್ಶನ್ ಅಭಿಮಾನಿಗಳನ್ನೂ ದೂರ ಮಾಡಿಕೊಳ್ಳದೆ ‘ತಾರಕ್’ ಚಿತ್ರ ರೂಪಿಸಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನಿಮ್ಮಂತಹ ದ್ವೇಷಿಯನ್ನು ನಾನು ನೋಡಿಲ್ಲ': ಧಾರ್ಮಿಕ ಕಾರಣಕ್ಕಾಗಿ ಬಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆ ಎಂದ ಎಆರ್ ರೆಹಮಾನ್ ವಿರುದ್ಧ ಕಂಗನಾ ಕಿಡಿ!
ಸೈಬರ್ ಕಿಡಿಗೇಡಿಗಳ ವಿರುದ್ಧ ನಟಿ ಅನಸೂಯಾ ಭಾರದ್ವಾಜ್ ಯುದ್ಧ: 42 ಜನರ ವಿರುದ್ಧ ಎಫ್‌ಐಆರ್ ದಾಖಲು!