ಸುದೀಪ್, ಪ್ರಿಯಾ ದಂಪತಿ ವಿಚ್ಚೇದನ ಪ್ರಕರಣಕ್ಕೆ ತಿರುವು ?

Published : Mar 09, 2017, 10:37 AM ISTUpdated : Apr 11, 2018, 12:44 PM IST
ಸುದೀಪ್, ಪ್ರಿಯಾ ದಂಪತಿ ವಿಚ್ಚೇದನ ಪ್ರಕರಣಕ್ಕೆ ತಿರುವು ?

ಸಾರಾಂಶ

ಈ ದಿನಾಂಕವನ್ನು ರಾಜೀಸಂಧಾನ ಅಥವಾ ವಿಚಾರಣೆಗೆಂದು ದಿನಾಂಕ‌ ನಿಗದಿಪಡಿಸಲಾಗಿದೆ. ದಂಪತಿಗಳು 2015ರ ಸೆಪ್ಟೆಂಬರ್​ನಲ್ಲಿ ಪರಸ್ಪರ ಸಮ್ಮತಿಯಿಂದ 13 ಬಿ ಅಡಿ ವಿಚ್ಛೇದನ ಕೋರಿದ್ದರು. ಅಂದಿನಿಂದಲೂ ವಿಚಾರಣೆಗೆ ದಂಪತಿ ಗೈರು ಹಾಜರಾಗಿದ್ದಾರೆ.

ಬೆಂಗಳೂರು(ಮಾ.09): ಚಿತ್ರನಟ ಸುದೀಪ್ - ಪ್ರಿಯಾ ದಂಪತಿ ವಿಚ್ಚೇದನ ಪ್ರಕರಣ ತಿರುವು ಪಡೆದುಕೊಳ್ಳುತ್ತಿದೆ.ಇಂದು  ನಗರದ ಪ್ರಧಾನ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ದಂಪತಿ ಗೈರು ಹಾಜರಾಗಿದ್ದಾರೆ. ಸುದೀಪ್ ಅವರ​ ಪರವಾಗಿ ಸಹೋದರಿ ಸುಜಾತ ಹಾಜರಾಗಿದ್ದರು. ಪತ್ನಿ ಪ್ರಿಯಾ ಹಾಗೂ ಅವರ ವಕೀಲರು ಗೈರು ಹಾಜರಾಗಿದ್ದರು.

ದಂಪತಿಯ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್' ರಾಜಿಸಂಧಾನವಾಗಿದ್ದರೆ ಮಾಹಿತಿ ತಿಳಿಸಿ, ವಿಚ್ಛೇದನದ ಅರ್ಜಿ ಹಿಂಪಡೆಯಿರಿ. ಇಲ್ಲವಾದರೆ ವಿಚ್ಛೇದನದ ಬಗ್ಗೆ ಕೋರ್ಟ್​ನಿಂದಲೇ ವಿಚಾರಣೆ ನಡೆಸಲಾಗುವುದು. ನಂತರ ನ್ಯಾಯಾಲಯವೇ ಈ ಬಗ್ಗೆ ತೀರ್ಮಾನಿಸಲಿದೆ. ಸ್ವತಃ ವಿಚಾರಣೆ ನಡೆಸಿ ತೀರ್ಮಾನಿಸಲು ಕೋರ್ಟ್​ಗೆ ಅಧಿಕಾರವಿದೆ' ಎಂದ ನ್ಯಾಯಾಲಯ ತಿಳಿಸಿತು.

ಸುದೀಪ್ ಪರ ವಕೀಲ ಭಾಸ್ಕರ್ ಬಾಬು' ಮತ್ತಷ್ಟು ಕಾಲಾವಕಾಶ ಕೋರಿದರು. ಕೊನೆಯ‌ ಅವಕಾಶವೆಂದು ಹೇಳಿದ ಕೋರ್ಟ್ ವಿಚಾರಣೆಯನ್ನು ಜೂನ್ 14ಕ್ಕೆ ಮುಂದೂಡಿತು.

ಈ ದಿನಾಂಕವನ್ನು ರಾಜೀಸಂಧಾನ ಅಥವಾ ವಿಚಾರಣೆಗೆಂದು ದಿನಾಂಕ‌ ನಿಗದಿಪಡಿಸಲಾಗಿದೆ. ದಂಪತಿಗಳು 2015ರ ಸೆಪ್ಟೆಂಬರ್​ನಲ್ಲಿ ಪರಸ್ಪರ ಸಮ್ಮತಿಯಿಂದ 13 ಬಿ ಅಡಿ ವಿಚ್ಛೇದನ ಕೋರಿದ್ದರು. ಅಂದಿನಿಂದಲೂ ವಿಚಾರಣೆಗೆ ದಂಪತಿ ಗೈರು ಹಾಜರಾಗಿದ್ದಾರೆ.

ಇತ್ತೀಚಿಗೆ ಇಬ್ಬರು ದಂಪತಿಗಳು ಒಟ್ಟಿಗೆ ಕಾಣಿಸುಕೊಳ್ಳುತ್ತಿರುವ ಕಾರಣ ರಾಜಿಯಾಗುವ ಸೂಚನೆಯಾಗಿದೆ. ಇಬ್ಬರು ಬೇಗ ಒಂದಾಗಲಿ ಎಂಬುದು ಸ್ನೇಹಿತರು ಹಾಗೂ ಅಭಿಮಾನಿಗಳ ಆಸೆಯಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bhagyalakshmi: ಭಾಗ್ಯ-ಆದಿ ಜೋಡಿ ನೋಡೋಕೆ ಅಸಹ್ಯ ಎಂದ ವೀಕ್ಷಕರು…. ಹೆಂಗಸರಿಗೆ ವಯಸ್ಸಾದ ಮೇಲೆ ಪ್ರೀತಿ ಆಗೋದೆ ತಪ್ಪಾ?
22 ವರ್ಷದ ಮಗನಿರುವಾಗಲೇ ಚಿರಯುವಕನ ಜೊತೆ 52ರ ನಟಿ ಮಲೈಕಾ ಅರೋರ ಲವ್? ರೊಮ್ಯಾಂಟಿಕ್‌ ವಿಡಿಯೋ ವೈರಲ್