
ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಟಿಆರ್'ಪಿ ಹೊಂದಿರುವ ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ರಿಯಾಲಿಟಿ ಶೋ ಕಾಮಿಟಿ ಕಿಲಾಡಿಗಳು ಗ್ರ್ಯಾಂಡ್ ಫಿನಾಲೆಯ ವಿಜೇತರನ್ನು ಘೋಷಿಸಿರುವ ಸುದ್ದಿ ಹೊರಬಿದ್ದಿದೆ.
ಬಾಗಲಕೋಟೆಯಲ್ಲಿ ನಡೆದ ಫೈನಲ್'ನಲ್ಲಿ
ಮೊದಲ ಸ್ಥಾನ: ಶಿವರಾಜ್
ಎರಡನೆ ಸ್ಥಾನ:ನಯನ
ಮೂರನೆಯ ಸ್ಥಾನ: ಜಿ.ಜಿ.ಗೋವಿಂದೇಗೌಡ
ಹಾಗೂ ನಾಲ್ಕನೆ ಸ್ಥಾನ: ಹಿತೇಶ್(ಪ್ಯಾಕು ಪ್ಯಾಕು)
ಪಡೆದಿದ್ದಾರೆ.
ಮಕ್ಕಳ ಜನಪ್ರಿಯ ಕಾರ್ಯಕ್ರಮ 'ಡ್ರಾಮ ಜ್ಯೂನಿಯರ್ಸ್ ನಂತರ 2016ರ ಅಕ್ಟೋಬರ್ 15ರಂದು ಆರಂಭವಾಗಿದ್ದ ಈ ಶೋಗೆ ನಟ ಮಾಸ್ಟರ್ ಆನಂದ್ ನಿರೂಪಕರಾಗಿದ್ದರು. ನಟಿ ರಕ್ಷಿತಾ,ನಟ ಜಗ್ಗೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಜೀಕನ್ನಡ ವಾಹಿನಿ ಈ ಬಗ್ಗೆ ಅಂತಿಮ ಪ್ರಕಟಣೆ ನೀಡಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.