
ಬೆಂಗಳೂರು : ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಕಾಮಿಡಿ ಕಿಲಾಡಿ ಸೀಸನ್ ಫಸ್ಟ್’ನಲ್ಲಿ ಸ್ಪರ್ಧಿಯಾಗಿ ರನ್ನರ್ ಅಪ್ ಆಗಿದ್ದರು.
ಅವರ ಸಂಬಂಧಿಯೇ ಆಗಿರುವ ಬೆಂಗಳೂರಿನ ಉದ್ಯಮಿ ಶರತ್ ಅವರೊಂದಿಗೆ ನಯನಾ ಮದುವೆ ನಡೆದಿದೆ. ಧರ್ಮಸ್ಥಳದಲ್ಲಿ ಇಬ್ಬರೂ ವಿವಾಹ ಮಾಡಿಕೊಂಡಿದ್ದು, ಅರತಕ್ಷತೆ ಕಾರ್ಯಕ್ರಮ ನಡೆದಿದೆ. ನಯನಾ ಅವರದ್ದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದ್ದು, ಕುಟುಂಬಸ್ಥರೇ ನೋಡಿ ಮಾಡಿರುವಂತದ್ದಾಗಿದೆ.
ಕಾಮಿಡಿ ಕಿಲಾಡಿಯ ಶೋ ಮೂಲಕ ಚಿರಪರಿಚಿತರಾಗಿದ್ದ ನಯನಾ ಅವರು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದು, ಬಳಿಕ ಸಿನಿಮಾ ಇಂಡಸ್ಟ್ರಿಗೂ ಕೂಡ ಕಾಲಿಟ್ಟಿದ್ದಾರೆ. ಕೆಲ ಚಿತ್ರಗಳಲ್ಲಿಯೂ ಕೂಡ ನಟಿಸಿದ್ದ ಅವರು ಶರತ್ ಅವರ ಕೈ ಹಿಡಿದಿದ್ದು, ಅವರಿಗೆ ಶುಭ ಹಾರೈಸೋಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.