ಡಿಂಪಲ್ ಕೆನ್ನೆ ಹುಡುಗಿ ರಚಿತಾ ರಾಮ್ ಜೆಡಿಎಸ್ ಸೇರಿದ್ರಾ?

First Published Apr 23, 2018, 9:08 AM IST
Highlights

ಸೆಲೆಬ್ರಿಟಿ ಅಂದ್ರೆ ಜನಪರವಾದ ರಾಜಕಾರಣಿಗಳ ಬಗ್ಗೆ  ಮಾತನಾಡಬಾರದು ಅಂತಿಲ್ಲ. ಐದು ವರ್ಷಗಳಲ್ಲಿ ಮಾಡಲಾಗದ ರೈತ ಪರ ಕೆಲಸಗಳನ್ನು ಕುಮಾರಸ್ವಾಮಿ ಅವರು ೨೦ ತಿಂಗಳಲ್ಲಿ ಮಾಡಿದ್ದು  ರಾಜ್ಯದ ಜನತೆಗೇ ಗೊತ್ತಿದೆ. ಆ ಕಾರಣಕ್ಕೆ ನಾನು ಅವರ ಪರವಾಗಿ ಮಾತನಾಡಿದ್ದೇನೆ. ಈ ಕೆಲಸವನ್ನು ಯಾವುದೇ ಪಕ್ಷದ ನಾಯಕರು ಮಾಡಿದ್ದರೂ ನಾನು ಅವರ ಪರವಾಗಿ ಮಾತನಾಡುತ್ತಿದ್ದೆ.’ -ಇದು ರಚಿತಾರಾಮ್ ದಿಟ್ಟ ಮಾತು.

ಬೆಂಗಳೂರು: ‘ಸೆಲೆಬ್ರಿಟಿ ಅಂದ್ರೆ ಜನಪರವಾದ ರಾಜಕಾರಣಿಗಳ ಬಗ್ಗೆ  ಮಾತನಾಡಬಾರದು ಅಂತಿಲ್ಲ. ಐದು ವರ್ಷಗಳಲ್ಲಿ ಮಾಡಲಾಗದ ರೈತ ಪರ ಕೆಲಸಗಳನ್ನು ಕುಮಾರಸ್ವಾಮಿ ಅವರು ೨೦ ತಿಂಗಳಲ್ಲಿ ಮಾಡಿದ್ದು  ರಾಜ್ಯದ ಜನತೆಗೇ ಗೊತ್ತಿದೆ. ಆ ಕಾರಣಕ್ಕೆ ನಾನು ಅವರ ಪರವಾಗಿ ಮಾತನಾಡಿದ್ದೇನೆ. ಈ ಕೆಲಸವನ್ನು ಯಾವುದೇ ಪಕ್ಷದ ನಾಯಕರು ಮಾಡಿದ್ದರೂ ನಾನು ಅವರ ಪರವಾಗಿ ಮಾತನಾಡುತ್ತಿದ್ದೆ.’ -ಇದು ರಚಿತಾರಾಮ್ ದಿಟ್ಟ ಮಾತು.

ಅಚ್ಚರಿಯ ಬೆಳವಣಿಗೆಯಲ್ಲಿ ರಚಿತಾರಾಮ್, ಜೆಡಿಎಸ್ ರಾಜ್ಯಾಧ್ಯಕ್ಷ  ಕುಮಾರಸ್ವಾಮಿ ಅವರ ಜನಪರ ಕೆಲಸದ ಕುರಿತು ಮಾತನಾಡುತ್ತಾ, ರಾಜ್ಯದ ಜನತೆ ಅವರನ್ನು ಮತ್ತೊಮ್ಮೆ ಬೆಂಬಲಿಸಬೇಕು ಎಂದಿರುವ ವೀಡಿಯೋ ಈಗ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದೇ ವೇಳೆ ಅವರ ರಾಜಕೀಯ ನಿಲುವು ಪರ-ವಿರೋಧದ ಅಲೆ ಎಬ್ಬಿಸಿದೆ. ರಚಿತಾರಾಮ್ ಜೆಡಿಎಸ್ ಸೇರಿದ್ರಾ ಎನ್ನುವ ಅನುಮಾನ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ತಾವು ನೀಡಿದ ಹೇಳಿಕೆಗೆ ಬುಲ್‌ಬುಲ್ ಬೆಡಗಿ ರಚಿತಾರಾಮ್ ಹೀಗೊಂದು ಸ್ಪಷ್ಟನೆ ಕೊಟ್ಟು ಮಾತಿಗೆ  ಮುಂದಾದರು.
‘ತಾನು ಯಾವುದೇ ರಾಜಕೀಯ ಪಕ್ಷಕ್ಕೆ ಇದುವರೆಗೂ ಅಧಿಕೃತವಾಗಿ ಸೇರಿಲ್ಲ. ಒಂದು ಪಕ್ಷಕ್ಕೆ ಸೇರಿ ರಾಜಕೀಯ ಮಾಡುವ ಆಸಕ್ತಿಯೂ ನನಗಿಲ್ಲ. ಸಿನಿಮಾವೇ ನನ್ನ ಕ್ಷೇತ್ರ. ಅಲ್ಲಿಯೇ ನನ್ನ ಕಾಯಕ. ಯಾವುದೇ ಆಮಿಷ ತೋರಿಸಿದರೂ ರಾಜಕೀಯಕ್ಕೆ ಹೋಗುವುದಿಲ್ಲ. ಇದು ಜೀವನ ಪರ್ಯಂತದ ನಿಲುವು’ ಎಂದು ಹೇಳಿದರು.

ರಚಿತಾ ಅಣಿಮುತ್ತುಗಳು
1.  ನಾನು ಈ ವೀಡಿಯೋ ಹಾಕಿದ್ದು ರಾಜಕೀಯಕ್ಕೆ ಬರುವ ಉದ್ದೇಶದಿಂದ ಅಲ್ಲ. ರಾಜಕೀಯಕ್ಕೆ ಬರುವ ಆಸಕ್ತಿಯೂ ನನಗಿಲ್ಲ. ನಾನೊಬ್ಬಳು ನಟಿ ಮಾತ್ರ. ನನಗೆ ಐಡೆಂಟಿಟಿ ಸಿಕ್ಕಿದ್ದು ಇಲ್ಲಿಂದ. ಹಾಗಂತ ನಮ್ಮೊಳಗೆ ಜನಪರವಾದ ರಾಜಕೀಯದ ನಿಲುವು-ಒಲವು ಇರಬಾರದು ಅಂತಿಲ್ಲ. ಆ ಬಗ್ಗೆ ಮಾತನಾಡಲೇಬಾರದು ಅಂತಲೂ ಇಲ್ಲ.

2.  ನಾನು ಕಂಡಂತೆ ಜನರಪರವಾದ ರಾಜಕಾರಣಿಗಳು ರಾಜ್ಯದಲ್ಲಿ ಸಾಕಷ್ಟಿದ್ದಾರೆ. ಅವರೆಲ್ಲರ ಬಗ್ಗೆಯೂ ಗೌರವವಿದೆ. ಆದ್ರೆ ಕೆಲವರು ಐದು ವರ್ಷದಲ್ಲಿ ಮಾಡಲಾಗದ ರೈತರ ಪರವಾದ ಕೆಲಸಗಳನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸಾಮಿ  ಮುಖ್ಯಮಂತ್ರಿ ಆಗಿದ್ದ ಕೇವಲ 20 ತಿಂಗಳಲ್ಲಿ ಮಾಡಿದ್ದಾರೆ. ನಮಗೆ ಯಾವ ಪಕ್ಷ ಅಥವಾ ಯಾವ ವ್ಯಕ್ತಿ ಎನ್ನುವುದು ಮುಖ್ಯವಲ್ಲ. ಇಲ್ಲಿ ನಿಜವಾಗಿಯೂ ಜನರ ಪರವಾಗಿ ಕೆಲಸ ಮಾಡುವ ವ್ಯಕ್ತಿಗಳು ಬೇಕಿದೆ. ಹಾಗಾಗಿ ನಾನು ಅಂತಹ ರಾಜಕಾರಣಿಯನ್ನು ಬೆಂಬಲಿಸಿ ಎಂದಿದ್ದೇನೆ.

3. ಜೆಡಿಎಸ್‌ಗೆ ಮತ ಹಾಕಿ, ಹಾಕಲೇಬೇಕು ಅಂತ ಹೇಳಿಲ್ಲ ನಾನು. ಜನಪರವಾದ ರಾಜಕಾರಣಿಗಳನ್ನು ಬೆಂಬಲಿಸಿ ಅನ್ನೋದು ನನ್ನ ವೈಯಕ್ತಿಕ ನಿಲುವು. ಆದರಾಚೆ ನಾನು ಯಾರನ್ನು ಬಲವಂತ ಮಾಡಿಲ್ಲ, ಹಾಗೆ ಮಾಡುವುದು ನನ್ನ ಕೆಲಸವಲ್ಲ. ಯಾಕಂದ್ರೆ ನಾನು ರಾಜಕೀಯ ವ್ಯಕ್ತಿಯಲ್ಲ.

4. ಸಿನಿಮಾ ನನ್ನ ಕ್ಷೇತ್ರ. ಈ ಕ್ಷೇತ್ರದಲ್ಲಿ ನಾನು ಗುರುತಿಸಿಕೊಂಡವಳು. ಮುಂದೆಯೂ ನನ್ನ ಆಸಕ್ತಿ ಮತ್ತು ಗಮನ ಅಲ್ಲಿಯೇ ಇರುತ್ತದೆ. ನನಗೆ ರಾಜಕೀಯ ಆಗಿ ಬರೋದಿಲ್ಲ. ಸಿನಿಮಾ ರಾಜಕೀಯವೇ ಗೊತ್ತಿಲ್ಲದ ನನಗೆ ಅಧಿಕಾರದ ರಾಜಕೀಯ ದಕ್ಕಿಸಿಕೊಳ್ಳಲು ಸಾಧ್ಯವೇ ಇಲ್ಲ. ಆ ಇತಿಮಿತಿ ಗೊತ್ತಿದ್ದೇ ಈ ಮಾತುಗಳ ವಿಡಿಯೋ ಹಾಕಿದ್ದೇನೆ. ಅದನ್ನು ಕೆಲವರು ಇನ್ನೇನೋ ಅರ್ಥದಲ್ಲಿ ವ್ಯಾಖ್ಯಾನಿಸುವ, ಬಳಸಿಕೊಳ್ಳುವ ಅವಶ್ಯಕತೆ ಇಲ್ಲ. 

click me!