
ಬೆಂಗಳೂರು(ಮೇ.01): ನುಡಿದಂತೆ ನಡೆದ ಸರ್ಕಾರ ಎಂದು ಹೇಳುತ್ತಿರುವ ಸಿಎಂ ಸಿದ್ದರಾಮಯ್ಯಅವರು ತಮ್ಮ ಆಜ್ಞೆಯನ್ನು ಮರೆತಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ರಾಜ್ಯದಾದ್ಯಂತ ಎಲ್ಲ ಚಿತ್ರಮಂದಿರಗಳು ಹಾಗೂ ಮಲ್ಟಿಫ್ಲೆಕ್ಸ್'ಗಳಲ್ಲಿ 200 ರೂ.ಗಳ ಏಕರೂಪ ದರ ವಿಧಿಸಬೇಕೆಂಬ ನೀತಿಯ ಕಡತಕ್ಕೆ ಸಹಿ ಮಾಡಿದ್ದರು. ಆದರೆ ಸಹಿ ಮಾಡಿದ ಕಡಿತ ಅವರ ಕಚೇರಿಯಲ್ಲಿಯೇ ಹೊರತು ಮಲ್ಟಿಫ್ಲೆಕ್ಸ್ ಹಾಗೂ ಚಿತ್ರಮಂದಿರಗಳ ಮಾಲೀಕರ ಕೈ ಸೇರಿಲ್ಲ.
ಮೇಲ್ನೋಟಕ್ಕೆ ಮಲ್ಟಿಫ್ಲೆಕ್ಸ್,ಚಿತ್ರಮಂದಿರಗಳ ಮಾಲೀಕರು ಹಾಗೂ ವಾಣಿಜ್ಯ ಅಧಿಕಾರಿಗಳ ಒತ್ತಡಕ್ಕೆ ಮಣಿದಿದ್ದಾರೆ ಎನ್ನಲಾಗಿದೆ. 200ರೂ. ಆದೇಶ ಜಾರಿಯಾದರೆ ರಾಜ್ಯಕ್ಕೆ ಬರುವ ತೆರಿಗೆ ಆದಾಯ ಕೈತಪ್ಪಲಿದ್ದು ಈ ಕಾರಣದಿಂದ ಆದೇಶ ಜಾರಿಗೊಳಿಸದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ನಡೆಯಿಂದ ಕನ್ನಡ ಭಾಷೆ, ಸಿನಿಮಾ ಉಳಿವಿನ ವಿಷಯದಲ್ಲಿ ಮುಖ್ಯಮಂತ್ರಿಯವರದು ಮಾತಿನ ಭರವಸೆಯಾಗಿದೆ.
1050 ರೂ. ಟಿಕೆಟ್ ಪಡೆದು ಬಾಹುಬಲಿ ಸಿನಿಮಾ ನೋಡಿದ ಸಿಎಂ
ಮೇ ಡೇ ಯಂದು ರಿಲ್ಯಾಕ್ಸ್ ಮೂಡ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಬಾಹುಬಲಿ 2 ಸಿನಿಮಾ ವೀಕ್ಷಿಸಿದ್ದಾರೆ. ಕುಟುಂಬದ ಸದಸ್ಯರು ಮತ್ತು ಬೆಂಬಲಿಗರೊಂದಿಗೆ ಓರಿಯನ್ ಮಾಲ್ ನಲ್ಲಿ ಮಧ್ಯಾಹ್ನ 2.30ರ ಶೋಗೆ 1050ರ ಟಿಕೆಟ್ ಪಡೆದು ಸಿಎಂ ಮತ್ತು ಕುಟುಂಬದ ಸದಸ್ಯರನ್ನು ಒಳಗೊಂಡು 48 ಮಂದಿಯೊಂದಿಗೆ ಸಿನಿಮಾ ವೀಕ್ಷಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.