(ವಿಡಿಯೋ)'ನನ್ ಮಗಂದ್' ಎನ್ನುತ್ತಿದ್ದ ಹುಚ್ಚ ವೆಂಕಟ್ ಕಣ್ಣೀರಿಟ್ಟಿದ್ದೇಕೆ? ಮಾಡಿದ ಮನವಿ ಕೇಳಿದ್ರೆ ನೀವೂ ಅಳ್ತೀರಿ!

Published : Apr 30, 2017, 09:41 PM ISTUpdated : Apr 11, 2018, 12:54 PM IST
(ವಿಡಿಯೋ)'ನನ್ ಮಗಂದ್' ಎನ್ನುತ್ತಿದ್ದ ಹುಚ್ಚ ವೆಂಕಟ್ ಕಣ್ಣೀರಿಟ್ಟಿದ್ದೇಕೆ? ಮಾಡಿದ ಮನವಿ ಕೇಳಿದ್ರೆ ನೀವೂ ಅಳ್ತೀರಿ!

ಸಾರಾಂಶ

ಯಾವತ್ತೂ ತನ್ನ ಬೆಂಕಿಯಂತಹ ಕೋಪದಿಂದಲೇ ಗುರುತಿಸಿಕೊಳ್ಳುವ ಹುಚ್ಚ ವೆಂಕಟ್ ಈ ಬಾರಿ ಕಣ್ಣೀರಿಡುವ ಮೂಲಕ ಸುದ್ದಿಯಾಗಿದ್ದಾರೆ. 'ನನ್ ಮಗಂದ್' ಎಂದು ಬೈಯ್ಯುತ್ತಲೇ ಫೇಮಸ್ ಆದ ಇವರು ಈ ಬಾರಿ ಇದ್ದಕ್ಕಿದ್ದಂತೆ ಅತ್ತಿದ್ದೇಕೆ? ಎಂಬ ಪ್ರಶ್ನೆ ಕಾಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ನೀವು ಈ ವಿಡಿಯೋ ನೋಡಬೇಕು.

ಬೆಂಗಳೂರು(ಮೇ.01): ಯಾವತ್ತೂ ತನ್ನ ಬೆಂಕಿಯಂತಹ ಕೋಪದಿಂದಲೇ ಗುರುತಿಸಿಕೊಳ್ಳುವ ಹುಚ್ಚ ವೆಂಕಟ್ ಈ ಬಾರಿ ಕಣ್ಣೀರಿಡುವ ಮೂಲಕ ಸುದ್ದಿಯಾಗಿದ್ದಾರೆ. 'ನನ್ ಮಗಂದ್' ಎಂದು ಬೈಯ್ಯುತ್ತಲೇ ಫೇಮಸ್ ಆದ ಇವರು ಈ ಬಾರಿ ಇದ್ದಕ್ಕಿದ್ದಂತೆ ಅತ್ತಿದ್ದೇಕೆ? ಎಂಬ ಪ್ರಶ್ನೆ ಕಾಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ನೀವು ಈ ವಿಡಿಯೋ ನೋಡಬೇಕು.

ಬಾಹುಬಲಿ 2 ಸಿನಿಮಾ ಬಿಡುಗಡೆಯಂದೇ, ಬಿಡುಗಡೆಯಾದ ಮತ್ತೊಂದು ಸಿನಿಮಾ ಹುಚ್ಚ ವೆಂಕಟ್ ನಿರ್ದೇಶಿಸಿ, ನಿರ್ಮಿಸಿ, ನಟಿಸಿದ ಪೊರ್ಕಿ ಹುಚ್ಚ ವೆಂಕಟ್. ಇಡೀ ದೇಶವೇ ಬಾಹುಬಲಿಯನ್ನು ನೋಡಲು ಕಾತುರರಾಗಿ ಕಾಯುತ್ತಿರಬೇಕಾದರೆ ಇತ್ತ ಹುಚ್ಚ ವೆಂಕಟ್ ಅದೇದಿನ ತನ್ನ ಸಿನಿಮಾ ಬಿಡುಗಡೆ ಮಾಡಿದ್ದರು. ಕನ್ನಡಿಗರು ತನ್ನ ಸಿನಿಮಾ ನೋಡಿಯೇ ನೋಡುತ್ತಾರೆ ಎಂಬ ಧೃಡ ವಿಶ್ವಾಸದಿಂದ ಅವರು ಅದೇ ದಿನ ಸಿನಿಮಾ ಬಿಡುಗಡೆ ಮಾಡಿದ್ದರು. ಆದರೆ ಅವರ ನಿರೀಕ್ಷೆಯಂತೆ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಇದರಿಂದ ಕುಪಿತರಾದ ಹುಚ್ಚ ವೆಂಕಟ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿ ಕನ್ನಡಿಗ ಮೇಲೆ ಕಿಡಿ ಕಾರಿದ್ದರು.

ಆದರೆ ಈಗ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿರುವ ವೆಂಕಟ್ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ದಯವಿಟ್ಟು ನನ್ನ ಸಿನಿಮಾ ನೋಡಿ, ಇಲ್ಲವಾದಲ್ಲಿ ನಾನು ತುಂಬಾ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಅಳುತ್ತಾ ಕನ್ನಡಿಗರ ಬಳಿ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!