ಬಾಹುಬಲಿ ಸಿನಿಮಾದ ಹಿರೋಯಿನ್, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಹಾಗೂ ತೆಲುಗು ನಟ ಪ್ರಭಾಸ್ ವಿವಾಹದ ಬಗ್ಗೆ ಆಗಾಗ ಗಾಸಿಪ್‌ಗಳು ಕೇಳಿ ಬರುತ್ತಿರುತ್ತದೆ. ಇದೀಗ ಬಾಹುಬಲಿಯ ದೇವಸೇನಾ ಕ್ರಿಕೆಟರ್ ಕೈ ಹಿಡಿತಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ಏನಿದು ಗಾಸಿಪ್..? ಇಲ್ಲಿ ಓದಿ.
ಬಾಹುಬಲಿ ಸಿನಿಮಾದ ಹಿರೋಯಿನ್, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಹಾಗೂ ತೆಲುಗು ನಟ ಪ್ರಭಾಸ್ ವಿವಾಹದ ಬಗ್ಗೆ ಆಗಾಗ ಗಾಸಿಪ್‌ಗಳು ಕೇಳಿ ಬರುತ್ತಿರುತ್ತದೆ. ಇದೀಗ ಬಾಹುಬಲಿಯ ದೇವಸೇನಾ ಕ್ರಿಕೆಟರ್ ಕೈ ಹಿಡಿತಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ.
ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ಎಸ್. ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಹೀರೋ ಪ್ರಭಾಸ್ ಹಾಗೂ ಹಿರೋಯಿನ್ ಅನುಷ್ಕಾ ಶೆಟ್ಟಿ ವಿವಾಹದ ಬಗ್ಗೆ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಹಿಟ್ ಸಿನಿಮಾ ಕೊಟ್ಟ ಮೇಲೆ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದ ಜೋಡಿಯ ಬಗ್ಗೆ ಸಹಜವಾಗಿಯೇ ಗಾಸಿಪ್ ಹುಟ್ಟಿಕೊಂಡಿತ್ತು.
ಜಪಾನಿನಲ್ಲಿ ಬಾಹುಬಲಿ ಜೋಡಿ! Something Interesting
ಇದೀಗ ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಇಂಡಿಯನ್ ಕ್ರಿಕಟರನ್ನು ವಿವಾಹವಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಟೀಂ ಇಂಡಿಯಾ ಆಟಗಾರನನ್ನು ಅನುಷ್ಕಾ ಶೆಟ್ಟಿ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅನುಷ್ಕಾ ಶೆಟ್ಟಿ ಮದುವೆಯಾಗ್ತಾ ಇದ್ದಾರಾ?
ವೈರಲ್ ಸುದ್ದಿ ಬಗ್ಗೆ ಅನುಷ್ಕಾ ಸಹೋದರ ಗುಣರಂಜನ್ ಶೆಟ್ಟಿ ಸುವರ್ಣ ನ್ಯೂಸ್‌ಗೆ ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಸಹೋದರಿ ಮದುವೆ ಬಗ್ಗೆ ನಾನು ಕೇಳ್ತಿರೋ 22 ನೇ ಸುದ್ದಿ ಇದು. ಸಹೋದರಿಯ ಮದುವೆ ಬಗ್ಗೆ ಇನ್ನು ಯಾವುದೇ ಪ್ಲಾನ್ ಆಗಿಲ್ಲ. ಮದುವೆ ಫಿಕ್ಸ್ ಆದರೆ, ಎಲ್ಲರಿಗೂ ತಿಳಿಸುತ್ತೇವೆ. ಈಗೀನ ಸುದ್ದಿ ಶುದ್ಧ ಸುಳ್ಳು. ಅನುಷ್ಕಾ ಸದ್ಯ ನಿಶಬ್ಧಂ ಚಿತ್ರದಲ್ಲಿಯೇ ಬ್ಯುಸಿಯಾಗಿದ್ದಾರೆ. ಮದುವೆ ಬಗ್ಗೆ ಸದ್ಯ ಯಾವುದೇ ಪ್ಲಾನ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಾಹುಬಲಿ ಬೆಡಗಿ ಮದುವೆಯಂತೆ... ಹುಡುಗ ಯಾರು?
ಫೆಬ್ರವರಿ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ