ಫಿಲ್ಮ್​ ಚೇಂಬರ್ ಅಧ್ಯಕ್ಷರಾಗಿ ಚಿನ್ನೇಗೌಡ ಆಯ್ಕೆ!

Published : Jun 26, 2018, 09:20 PM IST
ಫಿಲ್ಮ್​ ಚೇಂಬರ್ ಅಧ್ಯಕ್ಷರಾಗಿ ಚಿನ್ನೇಗೌಡ ಆಯ್ಕೆ!

ಸಾರಾಂಶ

ಫಿಲ್ಮ್​ ಚೇಂಬರ್ ಅಧ್ಯಕ್ಷರಾಗಿ ಚಿನ್ನೇಗೌಡ ಆಯ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಉಪಾಧ್ಯಕ್ಷ ಹುದ್ದೆಗೆ ಕರಿ ಸುಬ್ಬು ಆಯ್ಕೆ ಈ ಬಾರಿ ವಿತರಕರ ವಲಯಕ್ಕೆ  ಅಧ್ಯಕ್ಷರಾಗೋ ಅವಕಾಶ ಮಾರ್ಕ್ಸ್ ಸುರೇಶ್  ವಿರುದ್ದ ಚಿನ್ನೇಗೌಡ ಗೆಲುವು ಗೌರವ ಕಾರ್ಯದರ್ಶಿಯಾಗಿ ನಿರ್ಮಾಪಕ ಬಾ ಮಾ ಹರೀಶ್  

ಬೆಂಗಳೂರು(ಜೂ.26): ಫಿಲ್ಮ್​ ಚೇಂಬರ್ ಅಧ್ಯಕ್ಷರಾಗಿ ಚಿನ್ನೇಗೌಡ ಆಯ್ಕೆಯಾಗಿದ್ದಾರೆ. ಇಂದು ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಚಿನ್ನೇಗೌಡ ಚುನಾಯಿತರಾಗಿದ್ದಾರೆ.

ಚಿತ್ರ ವಿತರಕರ ವಲಯದಿಂದ ಚಿನ್ನೇಗೌಡ ಮತ್ತು ಮಾರ್ಕ್ಸ್ ಸುರೇಶ್ ಸ್ಪರ್ಧಿಸಿದ್ದರು. ತೀವ್ರ ಹಣಾಹಣಿಯ ಚುನಾವಣೆಯಲ್ಲಿ ಕೊನೆಗೆ ಚಿನ್ನೇಗೌಡರು ಗೆಲುವಿನ ನಗೆ ಬೀರಿದರು. ಈ ಮೂಲಕ ಈ ಬಾರಿ ವಿತರಕರ ವಲಯಕ್ಕೆ ಅಧ್ಯಕ್ಷ ಗಾದಿ ಸಿಕ್ಕಿದೆ. ಚಿನ್ನೇಗೌಡರು 551 ಮತಗಳನ್ನು ಗಳಿಸಿ ಅಧ್ಯಕ್ಷ ಗಾದಿಗೆ ಏರಿದ್ದಾರೆ.

ಇದೇ ವೇಳೆ ಉಪಾಧ್ಯಕ್ಷರಾಗಿ ನಿರ್ಮಾಪಕ ವಲಯದಿಂದ ಕರಿ ಸುಬ್ಬು ಆಯ್ಕೆಯಾಗಿದ್ದಾರೆ. ಕರಿ ಸುಬ್ಬು ಅವರು ಚುನಾವಣೆಯಲ್ಲಿ ಒಟ್ಟು 338 ಮತಗಳನ್ನು ಗಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಗೌರವ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ನಿರ್ಮಾಪಕ ಬಾ.ಮಾ. ಹರೀಶ್ ಗೆಲುವು ಸಾಧಿಸಿದ್ದಾರೆ. ಹರೀಶ್ ಅವರು ಎ. ಗಣೇಶ್ ಅವರನ್ನು ಸೋಲಿಸಿ ಗೌರವ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. 

ಇನ್ನುಳಿದಂತೆ ವಿತರಕ ವಲಯದಲ್ಲಿ ಕೆ ಮಂಜು 274 ಮತಗಳಿಂದ ಜಯ ಸಾಧಿಸಿದ್ದಾರೆ. ಅಲ್ಲದೇ ಗೌರವ ಕಾರ್ಯದರ್ಶಿ ವಿತರಕ ವಲಯದಿಂದ ಶ್ರೀನಿವಾಸ್ ಮತ್ತು ಹೆಚ್.ಸಿ. ಶಿಲ್ಪಾ ಗೆಲುವು ದಾಖಲಿಸಿದ್ದಾರೆ. ಗೌರವ ಖಜಾಂಚಿಯಾಗಿ ವಿರೇಶ್ ಕೆ.ಎಂ. ಜಯ ಸಾಧಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಧಮ್ ಹೊಡೆಯೋದ್ ಕಮ್ಮಿ ಮಾಡ್ಬೇಕಲೇ ಎಂದ Kiccha Sudeep ಸಿಗರೇಟ್ ಬಿಟ್ಟಿದ್ದು ಯಾವಾಗ?
ಬೇರೊಬ್ಬ, ಹೆಂಡ್ತೀನ ರೇಗಿಸಿದ್ರೂ, ಚುಚ್ಚಿದ್ರೂ ಸುಮ್ಮನಿರೋ Bigg Boss ರಘು ಬಗ್ಗೆ ಗಿಲ್ಲಿ ನಟ ಭಾರಿ ಬೇಸರ!