
ಬೆಂಗಳೂರು (ಡಿ. 12): ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆರೆ ಮೇಲೆ ಮಾತ್ರ ನಿಜ ಜೀವನದಲ್ಲೂ ಹೀರೋನೇ. ಸಮಾಜಸೇವೆ ಮಾಡುವುದರಲ್ಲಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿ ಸದಾ ಮುಂದೆ. ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅರೇ, ಏನಪ್ಪಾ ಮಾಡಿದ್ರು ಅಂತೀರಾ? ಒಂದೊಳ್ಳೆ ಕೆಲಸ ಮಾಡಿ ಸುದ್ದಿಯಲ್ಲಿದ್ದಾರೆ.
ದರ್ಶನ್ ಅರಣ್ಯ ಇಲಾಖೆಯ ರಾಯಭಾರಿಯಾಗಿರುವುದು ಗೊತ್ತೇ ಇದೆ. ಆಗಾಗ ಕಾಡಿಗೆ ಹೋಗಿ ಪ್ರಾಣಿಗಳ ಫೋಟೋಗ್ರಫಿ ಕೂಡಾ ಮಾಡುತ್ತಿರುತ್ತಾರೆ. ಇವರ ವನ್ಯಜೀವಿ ರಕ್ಷಣಾ ಪ್ರೀತಿ ಇಷ್ಟಕ್ಕೆ ಸೀಮಿತವಾಗಿಲ್ಲ.
ಪ್ರಾಣದ ಹಂಗು ತೊರೆದು ವನ್ಯಜೀವಿ ಕಳ್ಳಬೇಟೆ ತಡೆಗಟ್ಟುವ ಕೆಲಸ ಮಾಡುವ ಗುತ್ತಿಗೆ ನೌಕರರಿಗೆ ನೆರವಿನ ಹಸ್ತ ಚಾಚಿದ್ದಾರೆ. ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಶಿಬಿರದಲ್ಲಿ ಕೆಲಸ ಮಾಡುವ ಗುತ್ತಿಗೆ ನೌಕರರ ನೆರವಿಗೆ ಧಾವಿಸಿದ್ದಾರೆ.
ಇತ್ತೀಚಿಗೆ ಶಿಬಿರಕ್ಕೆ ಹೋಗಿದ್ದ ದರ್ಶನ್ ಅಲ್ಲಿನ ಗುತ್ತಿಗೆ ನೌಕರರ ಕಷ್ಟ ಆಲಿಸಿದ್ದರು. ಕೂಡಲೇ ಅವರ ಕಷ್ಟಕ್ಕೆ ಸ್ಪಂದಿಸಿ ನೌಕರರ ಕ್ಷೇಮಾಭಿವೃದ್ಧಿಗೆ 12 ಲಕ್ಷ ರೂ ಹಣ ನೀಡಿದ್ದಾರೆ. ಅರಣ್ಯ ಇಲಾಖೆಯೂಈ ಹಣವನ್ನು ಬ್ಯಾಂಕ್ನಲ್ಲಿ ಡಿಪಾಸಿಟ್ ಮಾಡಿ ಅದರ ಬಡ್ಡಿ ಹಣವನ್ನು ನೌಕರರ ಕಷ್ಟಕ್ಕೆ ನೀಡಲು ಮುಂದಾಗಿದೆ.
ದರ್ಶನ್ ಮಾಡಿರುವ ಈ ಕೆಲಸಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.