ರಾಜಕೀಯ ಪಕ್ಷಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಲಿದ್ದಾರೆ ಸ್ಟಾರ್ ನಟರು

Published : Apr 20, 2018, 06:16 PM IST
ರಾಜಕೀಯ ಪಕ್ಷಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಲಿದ್ದಾರೆ ಸ್ಟಾರ್ ನಟರು

ಸಾರಾಂಶ

ಪ್ರತಿ ಚುನಾವಣೆ ಬಂದಾಗ ರಾಜಕೀಯ ಪಕ್ಷಗಳು ಪ್ರಚಾರಕ್ಕೆ ‘ಸ್ಟಾರ್’ ಮೊರೆ ಹೋಗುವುದು ಮಾಮೂಲು. ಈ ಬಾರಿಯೂ ಕೂಡ ವಿವಿಧ ರಾಜಕೀಯ ಪಕ್ಷಗಳು ಸ್ಯಾಂಡಲ್‌'ವುಡ್ ಅಂಗಳದಲ್ಲಿ ತಾರಾ ಪ್ರಚಾರಕ್ಕೆ ಸ್ಟಾರ್‌ಗಳ ಮೊರೆ ಹೋಗಿದ್ದು  ಸತ್ಯ. ಆದರೆ, ಯಾವ ಸ್ಟಾರ್ ನಟನೂ ಬಹಿರಂಗವಾಗಿ ಇನ್ನು ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿಲ್ಲ. ಹಾಗಂತ ಯಾರೂ ಪ್ರಚಾರಕ್ಕೆ ಬರಲಾರರು ಅಂತಲೂ ಅಂದುಕೊಳ್ಳುವಂತಿಲ್ಲ. ಚಿತ್ರೋದ್ಯಮದಲ್ಲಿಯೇ ಅವರೆಲ್ಲ ಸದಾ ಬ್ಯುಸಿ ಇದ್ದರೂ ಒಂದಲ್ಲೊಂದು ರಾಜಕೀಯ ಪಕ್ಷಗಳ ಮುಖಂಡರ ಜತೆಗೆ ಉತ್ತಮ ಒಡನಾಟ ಹೊಂದಿದ್ದು, ಯಾರು, ಯಾವ ಕ್ಷಣ, ಯಾರ ಪರ ಪ್ರಚಾರಕ್ಕೆ ಇಳಿಯಲಿದ್ದಾರೆನ್ನುವುದು ತೀವ್ರ ಕುತೂಹಲ ಹುಟ್ಟಿಸಿದೆ.

ಚುನಾವಣೆಗಳಲ್ಲಿ ‘ಸ್ಟಾರ್’ ಪ್ರಚಾರ ರಾಜಕೀಯ  ಪಕ್ಷಗಳಿಗೆ ನಿಜಕ್ಕೂ ವರ್ಕೌಟ್ ಆಗುತ್ತಾ?
ಪ್ರತಿ ಚುನಾವಣೆ ಬಂದಾಗ ರಾಜಕೀಯ ಪಕ್ಷಗಳು ಪ್ರಚಾರಕ್ಕೆ ‘ಸ್ಟಾರ್’ ಮೊರೆ ಹೋಗುವುದು ಮಾಮೂಲು. ಈ ಬಾರಿಯೂ ಕೂಡ ವಿವಿಧ ರಾಜಕೀಯ ಪಕ್ಷಗಳು ಸ್ಯಾಂಡಲ್‌'ವುಡ್ ಅಂಗಳದಲ್ಲಿ ತಾರಾ ಪ್ರಚಾರಕ್ಕೆ ಸ್ಟಾರ್‌ಗಳ ಮೊರೆ ಹೋಗಿದ್ದು  ಸತ್ಯ. ಆದರೆ, ಯಾವ ಸ್ಟಾರ್ ನಟನೂ ಬಹಿರಂಗವಾಗಿ ಇನ್ನು ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿಲ್ಲ. ಹಾಗಂತ ಯಾರೂ  ಪ್ರಚಾರಕ್ಕೆ ಬರಲಾರರು ಅಂತಲೂ ಅಂದುಕೊಳ್ಳುವಂತಿಲ್ಲ. ಚಿತ್ರೋದ್ಯಮದಲ್ಲಿಯೇ ಅವರೆಲ್ಲ ಸದಾ ಬ್ಯುಸಿ ಇದ್ದರೂ ಒಂದಲ್ಲೊಂದು ರಾಜಕೀಯ ಪಕ್ಷಗಳ ಮುಖಂಡರ ಜತೆಗೆ ಉತ್ತಮ  ಒಡನಾಟ ಹೊಂದಿದ್ದು, ಯಾರು, ಯಾವ ಕ್ಷಣ, ಯಾರ ಪರ ಪ್ರಚಾರಕ್ಕೆ ಇಳಿಯಲಿದ್ದಾರೆನ್ನುವುದು ತೀವ್ರ ಕುತೂಹಲ ಹುಟ್ಟಿಸಿದೆ.

ಈಗಾಗಲೇ ಹಲವರು ವಿವಿಧ ಪಕ್ಷಗಳಲ್ಲಿ ಪ್ರತ್ಯಕ್ಷವಾಗಿ ಗುರುತಿಸಿಕೊಂಡು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರೆಲ್ಲ ತಾವು ಪ್ರತಿನಿಧಿಸುವ ಪಕ್ಷಗಳ ಪರವಾಗಿ ಬಹಿರಂಗವಾಗಿ ಪ್ರಚಾರಕ್ಕೆ ಹೋಗುವುದು ಅನಿವಾರ್ಯ. ಆ ಸಾಲಿನಲ್ಲಿ ಜಗ್ಗೇಶ್, ತಾರಾ, ಶ್ರುತಿ, ಅಭಿನಯ, ಮಾಳವಿಕಾ, ರಮ್ಯಾ, ರಂಗಾಯಣ ರಘು, ಭಾವನಾ, ಶಶಿಕುಮಾರ್, ಮುಖ್ಯಮಂತ್ರಿ ಚಂದ್ರು ಮತ್ತಿತರರಿದ್ದಾರೆ. ಕೆಲವರು ಟಿಕೆಟ್ ಬಯಸಿ, ಸಿಗದ ಕಾರಣಕ್ಕೆ ನಿರಾಸೆಗೊಂಡಿದ್ದಾರೆ. ಆದರೂ ಅವರ ಮುನಿಸು ಈಗಾಗಲೇ  ಶಮನವಾಗಿದೆ. ಹೀಗಾಗಿ ತಮ್ಮ ಪಕ್ಷದ ಪ್ರಚಾರದಿಂದ ಅವರು  ದೂರ ಉಳಿಯಲು ಸಾಧ್ಯವೇ ಇಲ್ಲ.  ಇನ್ನು ಕೆಪಿಜೆಪಿ ಪಕ್ಷ ಕಟ್ಟಿ, ಅದರಿಂದ ಹೊರಬಂದ ಕಾರಣ ಉಪೇಂದ್ರ ಅವರದ್ದು ತಟಸ್ಥ ನಿಲುವು. ಆದರೆ ಕುತೂಹಲ ಇರುವುದು ಅಪಾರ ಅಭಿಮಾನಿಗಳನ್ನು ಹೊಂದಿರುವ ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಯಶ್, ದುನಿಯಾ ವಿಜಯ್, ಗಣೇಶ್, ನೆನಪಿರಲಿ ಪ್ರೇಮ್ ಮತ್ತಿತರರ ಬಗ್ಗೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್  ಲೋಕಸಭೆಗೆ ಸ್ಪರ್ಧಿಸಿದ್ದರು. ರಾಜಕಾರಣವೇ ಬಯಸದಿದ್ದ ಶಿವರಾಜ್  ಕುಮಾರ್ ಅಂದು ಬಹಿರಂಗವಾಗಿಯೇ ಚುನಾವಣೆ ಆಖಾಡಕ್ಕೆ ಇಳಿದಿದ್ದರು. ಆದರೆ, ಜೆಡಿಎಸ್ ಪಕ್ಷದೊಂದಿಗಿನ ಆ ನಂಟು ಈಗಲೂ  ಮುಂದುವರೆಯುತ್ತಾ ಎನ್ನುವ ನಿರೀಕ್ಷೆಗೆ ಈಗ ಬ್ರೇಕ್ ಬಿದ್ದಿದೆ. ‘ಈ ಬಾರಿ ತಾವು ಯಾವುದೇ ಪಕ್ಷದ ಪರವಾಗಿ ಚುನಾವಣೆ ಪ್ರಚಾರಕ್ಕೆ ಹೋಗುವುದಿಲ್ಲ. ಗೀತಾ ಮಾತ್ರ ಪ್ರಚಾರಕ್ಕೆ ಹೋಗುತ್ತಾರೆ’ ಎಂದು ಹೇಳುವ ಮೂಲಕ ಚುನಾವಣೆ ಪ್ರಚಾರದಿಂದ ದೂರ ಇರುವುದನ್ನು ಖಚಿತ ಪಡಿಸಿದ್ದಾರೆ.  ಶಿವರಾಜ್ ಕುಮಾರ್. ಅವರಷ್ಟೇ ಜನಪ್ರಿಯತೆ ಹೊಂದಿರುವ ಸುದೀಪ್ ಹಾಗೂ ದರ್ಶನ್ ಅವರ ನಡೆ ಈಗಲೂ ನಿಗೂಢ. ಆದರೂ, ಸುದೀಪ್ ಇತ್ತೀಚೆಗಷ್ಟೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಸಾಕಷ್ಟು ಕುತೂಹಲ ಹುಟ್ಟಿಸಿತು. ಆದರೆ, ‘ಅದೊಂದು ಸೌಹಾರ್ದಯುತ ಭೇಟಿ ಮಾತ್ರ. ಅದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ’ ಎಂಬ ಮಾತು ಕುಮಾರಸ್ವಾಮಿ ಅವರಿಂದ ಕೇಳಿಬಂತು. ಆದರೂ, ಅನುಮಾನ.

ಯಾಕಂದ್ರೆ, ತಮಗೂ ರಾಜಕೀಯಕ್ಕೂ ಆಗಿ ಬರಲ್ಲ ಎನ್ನುವ ಮಾತನ್ನು ಆಡಿಲ್ಲ. ಹೀಗಾಗಿ ಯಾವ ಪಕ್ಷಕ್ಕೆ ಅವರ ಒಲವು ಎನ್ನುವುದು ಕುತೂಹಲದ ಸಂಗತಿ. ಇನ್ನು ರಾಜಕೀಯ ಅಂದ್ರೆ ಆಗದು ಎನ್ನುವಂತಿದ್ದಾರೆ ದರ್ಶನ್. ಆದರೂ, ಅವರು ತಮ್ಮ ಆಪ್ತರ ಪರವಾಗಿ ಪ್ರಚಾರಕ್ಕೆ ಇಳಿದ ಉದಾಹರಣೆಗಳೂ ಇವೆ. ಕಳೆದ ಬಾರಿ ಮಂಡ್ಯ ವಿಧಾನ ಸಭೆ ಚುನಾವಣೆಯಲ್ಲಿ  ಅಂಬರೀಷ್ ಪರವಾಗಿ ಪ್ರಚಾರಕ್ಕೆ ಹೋಗಿದ್ದರು. ಈ ಬಾರಿಯೂ ಅವರು ಅಂಬರೀಷ್ ಪರವಾಗಿ ಪ್ರಚಾರಕ್ಕೆ ಹೋಗ್ತಾರಾ ಎನ್ನುವುದು ಅಭಿಮಾನಿಗಳ ಪ್ರಶ್ನೆ. ಯಶ್, ಗಣೇಶ್, ನೆನಪಿರಲಿ ಪ್ರೇಮ್ ನಡೆ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಬಿಜೆಪಿ ಪಕ್ಷದಲ್ಲಿ ಅಧಿಕೃತವಾಗಿ ಗುರುತಿಸಿಕೊಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?