'ಭಕ್ತ ಕುಂಬಾರ' ಸೇರಿ ಕನ್ನಡ ಚಿತ್ರಗಳಲ್ಲಿಯೂ ನಟಿಸಿದ ಶ್ರೀದೇವಿ

By Suvarna Web DeskFirst Published Feb 25, 2018, 6:07 AM IST
Highlights

ಕನ್ನಡದ 'ಭಕ್ತ ಕುಂಬಾರ'ದಲ್ಲಿಯೂ ಬಾಲನಟಿಯಾಗಿ ಅಭಿನಯಿಸಿದ್ದ ಬಾಲಿವುಡ್ ಮೋಹಕ ತಾರೆ ಶ್ರೀದೇವಿ.

ದುಬೈ: ತೀವ್ರ ಹೃದಯಾಘಾತದಿಂದ ದೇಶದ ಚಿತ್ರರಂಗವನ್ನು ಅಗಲಿದ ಶ್ರೀದೇವಿ ಹವಾ ಹವಾಯಿ ನಟಿ ಎಂದೇ ಖ್ಯಾತರಾಗಿದ್ದವರು. ಬಂಧುವೊಬ್ಬರ ಮದುವೆ ಸಮಾರಂಭಕ್ಕೆ ಪತಿ, ಮಗಳೊಂದಿಗೆ ತೆರಳಿದ್ದ ನಟಿ ಅಲ್ಲಿಯೇ ತೀವ್ರ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ.

ಪತಿ ಬೋನಿ ಕಪೂರ್, ಮಕ್ಕಳಾದ ಜಾಹ್ನಿ ಕಪೂರ್ ಹಾಗೂ ಖುಷಿ ಕಪೂರ್ ಸೇರಿ ಅಪಾರ ಅಭಿಮಾನಿಗಳನ್ನು ಈ ನಟಿ ಅಗಲಿದ್ದಾರೆ. 

ಅಮ್ಮ ಯಾಂಗರ್ ಅಯ್ಯಪ್ಪನ್ ಎಂಬ ಮೂಲ ಹೆಸರಿನ ಈ ನಟಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದರು. ನಂತರ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿ, ಹಾಲವು ವರ್ಷಗಳ ಕಾಲ ಹಿಂದಿ ಚಿತ್ರರಂಗವನ್ನು ಆಳಿದರು. 4ನೇ ವರ್ಷದಿಂದ 54ನೇ ವರ್ಷದವರೆಗೂ ಬಾಲಿವುಡ್ ದಿವಾ ಎಂದರೆ ನೆನಪಾಗುವ ಈ ನಟಿ, ಪದ್ಮಶ್ರೀ ಸೇರಿ ಪಡೆದ ಪ್ರಶಸ್ತಿ, ಪುರಸ್ಕಾರಗಳು ಒಲಿದಿದ್ದವು.

ಬಾಲನಟಿಯಾಗಿ 1975ರಲ್ಲಿ ಜೂಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಈ ನಟಿ, ಕನ್ನಡದ 'ಭಕ್ತಕುಂಬಾರ' ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಅವರೊಂದಿಗೆ ಮುಕ್ತಾ ಬಾಯಿಯಾಗಿ ನಟಿಸಿದ್ದರು.  'ಹೆಣ್ಣು ಸಂಸಾರದ ಕಣ್ಣು', ಸಂಪೂರ್ಣ ರಾಮಾಯಣ, ಯಶೋಧಾ ಕೃಷ್ಣ, ಬಾಲ ಭಾರತ, ಪ್ರಿಯಾ ಚಿತ್ರಗಳಲ್ಲಿಯೂ ನಟಿಸಿದ್ದಾರೆ. 13ನೇ ವರ್ಷದಲ್ಲಿ ಮೂಂಡ್ರು ಮುಡಿಚು ಎಂಬ ತಮಿಳು ಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸಿದ್ದರು. 

ಹಲವು ವರ್ಷಗಳ ಕಾಲ ಬ್ರೇಕ್ ಪಡೆದು, ಮತ್ತೆ 'ಇಂಗ್ಲಿಷ್ ವಿಂಗ್ಲಿಷ್' ಮೂಲಕ ಮತ್ತೆ ನಟಿಸಿದ ಈ ನಟಿ, ಮಧ್ಯಮ ವರ್ಗದ, ಇಂಗ್ಲಿಷ್ ಬಾರದ ಹೆಣ್ಣು ಮಕ್ಕಳಲ್ಲಿ ಇಂಗ್ಲಿಷ್ ಕಲಿತು, ಮೂಡಿಸಿದ ಆತ್ಮವಿಶ್ವಾಸ ಅಷ್ಟಿಷ್ಟಲ್ಲ. ವಯಸ್ಸಿಗೆ ತಕ್ಕಂತೆ ಮಾಡಿದ ಈ ಪಾತ್ರದ ಮೂಲಕ ತಮ್ಮ ಮನೋಜ್ಞ ಅಭಿನಯವನ್ನು ತೋರಿದ್ದರು.

'ಮಾಮ್' ಈ ನಟಿ ನಟಿಸಿದ ಕಡೆಯ ಚಿತ್ರ. ಇನ್ನೇನು ಹಾಲಿವುಡ್ ಚಿತ್ರಕ್ಕೂ ಪಾದಾರ್ಪಣೆ ಮಾಡಲಿದ್ದ ಈ ನಟಿಯ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ಚಿತ್ರರಂಗಕ್ಕೆ ತುಂಬಲಾಗದ ನಷ್ಟ.

ಅನಿಲ್ ಕಪೂರ್ ಅವರೊಂದಿಗೆ, ಪತಿ ಬೋನಿ ಕಪೂರ್ ನಿರ್ದೇಶನದಲ್ಲಿ ನಟಿಸಿದ ಶ್ರೀದೇವಿ ಬಾಲಿವುಡ್ ಚಾಂದನಿ ಎಂದೇ ಗುರುತಿಸಲ್ಪಟ್ಟಿದ್ದರು.
 

click me!