
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಲವ್ ಅಂಡ್ ವಾರ್' ಸಿನಿಮಾದಿಂದ ರಣಬೀರ್ ಕಪೂರ್ ಅವರ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಇದರಲ್ಲಿ ರಣಬೀರ್ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ರಕ್ತಸಿಕ್ತ ಅವತಾರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
'ಲವ್ ಅಂಡ್ ವಾರ್' ಚಿತ್ರದ ರಣಬೀರ್ ಕಪೂರ್ ಫಸ್ಟ್ ಲುಕ್ ರಿಲೀಸ್
ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಬಹುನಿರೀಕ್ಷಿತ 'ಲವ್ ಅಂಡ್ ವಾರ್' ಸಿನಿಮಾದಿಂದ ರಣಬೀರ್ ಕಪೂರ್ ಅವರ ಫಸ್ಟ್ ಲುಕ್ ಪೋಸ್ಟರ್ ಗುರುವಾರ ರಿಲೀಸ್ ಆಗಿದೆ. ಈ ಪೋಸ್ಟರ್‌ನಲ್ಲಿ ರಣಬೀರ್ ಕಪೂರ್ ಸಖತ್ ರಗಡ್ ಹಾಗೂ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಳೆಯ ಕಾಲದ ಟರ್ಕೋಯ್ಸ್ (ತಿಳಿ ನೀಲಿ) ಬಣ್ಣದ ಕಾರಿನ ಡ್ರೈವಿಂಗ್ ಸೀಟ್‌ನಲ್ಲಿ ರಣಬೀರ್ ಕುಳಿತಿದ್ದಾರೆ.
ಸಣ್ಣದಾಗಿ ಕತ್ತರಿಸಿದ ಕೂದಲು, ಪೆನ್ಸಿಲ್ ಮೀಸೆ, ರೌಂಡ್ ಸನ್‌ಗ್ಲಾಸ್ ಹಾಗೂ ತಿಳಿ ಬಣ್ಣದ ಪೋಲೋ ಶರ್ಟ್‌ನಲ್ಲಿ ಅವರು ಮಿಂಚಿದ್ದಾರೆ. ಈ ಲುಕ್‌ನ ಹೈಲೈಟ್ ಅಂದರೆ ಅವರ ರಕ್ತಸಿಕ್ತ ಅವತಾರ. ಕಾರಿನ ಡೋರ್ ಮೇಲೆ ಇಟ್ಟಿರುವ ಅವರ ಎಡಗೈಗೆ ಗುಂಡು ತಗುಲಿದ ಗಾಯವಿದ್ದು, ರಕ್ತ ಸುರಿಯುತ್ತಿದೆ. ಇಷ್ಟೆಲ್ಲಾ ಗಾಯಗಳಾಗಿದ್ದರೂ ಅವರ ಮುಖದಲ್ಲಿರುವ ಶಾಂತ ಭಾವನೆ, ಪಾತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಫಸ್ಟ್ ಲುಕ್ ಬನ್ಸಾಲಿ ಅವರ ಸಿನಿಮಾದ ದೃಶ್ಯ ವೈಭವದ ಸಣ್ಣ ಝಲಕ್ ನೀಡಿದೆ. ಈ ಚಿತ್ರದಲ್ಲಿ ರಣಬೀರ್ ಜೊತೆಗೆ ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪೋಸ್ಟರ್ ಜೊತೆಗೆ ಹಿನ್ನೆಲೆ ಸಂಗೀತವನ್ನೂ ನೀಡಲಾಗಿದ್ದು, ಇದು ಬನ್ಸಾಲಿ ಅವರ ಸಂಗೀತ ಪ್ರೇಮವನ್ನು ತೋರಿಸುತ್ತದೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ, "ವೋ ರುತ್ಬಾ, ವೋ ರೌಬ್, ವೋ ಜುನೂನ್! ಸಂಜಯ್ ಲೀಲಾ ಬನ್ಸಾಲಿ ಅವರ ಲವ್ ಅಂಡ್ ವಾರ್ 2027ರ ಜನವರಿ 21ರಂದು. ಚಿತ್ರಮಂದಿರಗಳಲ್ಲಿ ಸಿಗೋಣ ಎಂದು ಬರೆದುಕೊಂಡಿದೆ. ಇನ್ನು ಬನ್ಸಾಲಿ ನಿರ್ದೇಶನದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಹಾಗೂ ವಿಕ್ಕಿ ಕೌಶಲ್ ಒಟ್ಟಾಗಿ ತೆರೆಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾ 2027ರ ಜನವರಿ 21ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ರಿಲೀಸ್ ಆಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.